ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ದೇಶದ ಸಾಮೂಹಿಕ ಪ್ರಯತ್ನಕ್ಕೆ ಕೊಡುಗೆ ನೀಡುವ ಸಲುವಾಗಿ ಐಐಟಿ ಕಾನ್ಪುರ ದಿನಕ್ಕೆ 25 ಸಾವಿರ N95 ಮತ್ತು N99 ದರ್ಜೆಯ ಮುಖಗವಸುಗಳನ್ನು ಉತ್ಪಾದಿಸಲಿದೆ. ಇದು ಯಾವುದೇ ಐಐಟಿ ಅಥವಾ ಭಾರತದ ಶೈಕ್ಷಣಿಕ ಸಂಸ್ಥೆಯ ಟೆಕ್ನಾಲಜಿ ಬ್ಯುಸಿನೆಸ್ ಇನ್ಕ್ಯುಬೇಟರ್ ಆರಂಭಿಸಿದ ಈ ರೀತಿಯ ಮೊದಲ ಉಪಕ್ರಮವಾಗಿದೆ.
ಐಐಟಿ ಕಾನ್ಪುರದ ಉತ್ಪಾದನಾ ಘಟಕವನ್ನು ಗುರುವಾರ ಉದ್ಘಾಟಿಸಲಾಯಿತು ಮತ್ತು ಶೀಘ್ರದಲ್ಲೇ ಅದರ ಸಾಮರ್ಥ್ಯವು ದಿನಕ್ಕೆ 30 ಸಾವಿರ ಮುಖಗವಸುಗಳಿಗೆ ಏರಿಕೆಯಾಗಲಿದೆ.
ಐಐಟಿ ಕಾನ್ಪುರದ ಬ್ಯುಸಿನೆಸ್ ಇನ್ಕ್ಯುಬೇಟರ್ ಆವರಣದಲ್ಲಿ ಮುಖಗವಸುಗಳನ್ನು ಇ-ಸ್ಪಿನ್ ನ್ಯಾನೊಟೆಕ್ ಕಂಪನಿಯು ಇಂಡೀಮಾ ಫೈಬರ್ಸ್ ಸಹಯೋಗದೊಂದಿಗೆ ತಯಾರಿಸುತ್ತದೆ. ಕಂಪನಿಯು ಎನ್ 95 ಮತ್ತು ಎನ್ 99 ಮುಖಗವಸುಗಳನ್ನು ತಯಾರಿಸಲಿದೆ. ಉತ್ಪಾದನೆಯ ಸಮಯದಲ್ಲಿ ನೈರ್ಮಲ್ಯ ಕಾಪಾಡಲು ಮತ್ತು ಸುರಕ್ಷಿತ ಉತ್ಪನ್ನದ ಬಗ್ಗೆ ಸಾರ್ವಜನಿಕರಿಗೆ ಭರವಸೆ ನೀಡಲು ಉತ್ಪಾದನಾ ಮಾರ್ಗವು ಸಂಪೂರ್ಣವಾಗಿ ಸ್ವಯಂಚಾಲಿತವಾಗಿದೆ.
ಐಐಟಿ ಕಾನ್ಪುರದ ನಿರ್ದೇಶಕ ಪ್ರೊ.ಅಭಯ್ ಕರಂದಿಕರ್ ಈ ಬಗ್ಗೆ ಹೇಳಿಕೆಯನ್ನು ನೀಡಿದ್ದು, ಫೇಸ್ ಮಾಸ್ಕ್ ಇದೀಗ ಅಗತ್ಯವಾಗಿದೆ ಮತ್ತು ಲಭ್ಯತೆ ಅಥವಾ ದರದ ಕಾರಣದಿಂದಾಗಿ ಯಾರೂ ಇದರೊಂದಿಗೆ ಬಗ್ಗೆ ರಾಜಿ ಮಾಡಿಕೊಳ್ಳಬಾರದು ಎಂಬುದು ಉಪಕ್ರಮದ ಹಿಂದಿನ ಆಲೋಚನೆ ಎಂದಿದ್ದಾರೆ.
ಐಐಟಿಯ ಮುಖಗವಸುಗಳು ಸಾರ್ವಜನಿಕರಿಗೆ ಅತ್ಯಂತ ಒಳ್ಳೆ ಬೆಲೆಗೆ ಲಭ್ಯವಾಗಲಿದೆ. ಮುಖಗವಸುಗಳು ಕಂಪನಿಯ ವೆಬ್ಸೈಟ್ ಮತ್ತು ಅನೇಕ ಪ್ರಮುಖ ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳಲ್ಲಿ ಲಭ್ಯವಿರಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.