ಸತ್ಯಶೋಧನಾ ತಂಡವು ಪಾಲ್ಘರ್ ಸಾಧು ಗುಂಪು ಹಲ್ಲೆಯ ಬಗೆಗಿನ ವರದಿಯನ್ನು ಮಹಾರಾಷ್ಟ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ನಿಜವಾದ ಅಪರಾಧಿಗಳು ಅರಣ್ಯದೊಳಗೆ ಅವಿತಿದ್ದಾರೆ, ಎಸ್ಟಿ ಬಡವರನ್ನು ಕಿರುಕುಳಕ್ಕೆ ಒಳಪಡಿಸುತ್ತಿದ್ದಾರೆ ಎಂದು ತಳಮಟ್ಟದ ವರದಿಯು ಹೇಳುತ್ತದೆ.
ವಿವೇಕ್ ವಿಚಾರ್ ಮಂಚ್ನ ಸತ್ಯ ಶೋಧನಾ ಸಮಿತಿಯು ಪಾಲ್ಘರ್ ಸಾಧು ಲಿಂಚಿಂಗ್ ಪ್ರಕರಣದ ಕುರಿತು ತನ್ನ ವರದಿಯನ್ನು ಬಹಿರಂಗಗೊಳಿಸಿದೆ. ಬಾಂಬೆ ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶರಾದ ನ್ಯಾಯಮೂರ್ತಿ ಅಂಬದಾಸ್ಜಿ ಜೋಶಿ ಅವರ ಅಧ್ಯಕ್ಷತೆಯಲ್ಲಿ ಸಮಿತಿ ಸದಸ್ಯರು ಪಾಲ್ಘರ್ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರನ್ನು, ಬುಡಕಟ್ಟು ಸಂಘಟನೆಗಳನ್ನು ಭೇಟಿಯಾಗಿದ್ದಾರೆ. ಅವರ ಅಧ್ಯಯನಗಳನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಲಾಗಿದೆ.
ಈ ಪ್ರದೇಶದಲ್ಲಿ ಕೆಲಸ ಮಾಡುವ ಎಡಪಂಥೀಯ ಸಂಸ್ಥೆಗಳು, ಸರ್ಕಾರ ಮತ್ತು ಹಿಂದೂ ಧಾರ್ಮಿಕ ಮುಖಂಡರು, ಸಾಧುಗಳು ಮತ್ತು ಸನ್ಯಾಸಿಗಳ ವಿರುದ್ಧ ಆದಿವಾಸಿಗಳ ಮನಸ್ಸಿನಲ್ಲಿ ದ್ವೇಷವನ್ನು ಸೃಷ್ಟಿಸುತ್ತಿವೆ ಎಂದು ಸಮಿತಿಯ ಅಧ್ಯಯನಗಳು ಪುನರುಚ್ಚರಿಸುತ್ತವೆ. ಕ್ಯಾಥೊಲಿಕ್ ಬಿಷಪ್ ಕಾನ್ಫರೆನ್ಸ್ ಆಫ್ ಇಂಡಿಯಾ, ಕಾಶ್ತಕರಿ ಸಂಘತಾನ, ಭೂಮಿಸೇನಾ, ಆದಿವಾಸಿ ಏಕ್ತ ಪರಿಷತ್, ಸಿಪಿಎಂ ಪ್ರೈಮಾ ಫೇಸಿ ಮುಂತಾದ ಸಂಸ್ಥೆಗಳ ಪ್ರಭಾವ ಹೆಚ್ಚುತ್ತಿರುವ ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಹಿಂಸಾಚಾರವು ಸಾಧುಗಳ ಹತ್ಯೆಗೆ ಕಾರಣವಾಗಿದೆ ಎಂದು ಅಧ್ಯಯನ ಹೇಳಿದೆ.
ವಿವೇಕ್ ವಿಚಾರ್ ಮಂಚ್ನ ವಿವರವಾದ ಪತ್ರಿಕಾ ಟಿಪ್ಪಣಿ ಈ ಕೆಳಗೆ ಇದೆ.
ವಿವೇಕ್ ವಿಚಾರ್ ಮಂಚ್ ಎನ್ನುವುದು ಸರ್ಕಾರೇತರ ಸಂಸ್ಥೆಯಾಗಿದ್ದು, ಮಾನವ ಹಕ್ಕುಗಳ ಉಲ್ಲಂಘನೆ, ನಾಗರಿಕ ಹಕ್ಕುಗಳ ವಿರುದ್ಧದ ದೌರ್ಜನ್ಯಗಳು, ಕಾನೂನು ಕ್ರಮಕ್ಕೆ ನೆರವು ಮತ್ತು ದೌರ್ಜನ್ಯ ಪೀಡಿತ ಜನರಲ್ಲಿ ಜಾಗೃತಿ ಮೂಡಿಸುವುದು ಸೇರಿದಂತೆ ಹಲವು ಉಪಕ್ರಮದ ಮೂಲಕ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯವನ್ನು ಮಾಡುತ್ತಿದೆ.
ಏಪ್ರಿಲ್ 16, 2020 ರಂದು, ಜಿಲ್ಲೆಯ ಪಾಲ್ಘರ್ನ ಗಡ್ಚಿಂಚಲೆ ಎಂಬ ಹಳ್ಳಿಯಲ್ಲಿ ಇಬ್ಬರು ಸನ್ಯಾಸಿಗಳು ಮತ್ತು ಅವರ ಚಾಲಕನನ್ನು ದುಷರ್ಮಿಗಳ ನೇತೃತ್ವ ಜನಸಮೂಹ ಹಲ್ಲೆ ನಡೆಸಿ ಕೊಂದು ಹಾಕಿತು. ಹತ್ಯೆಗೀಡಾದ ಇಬ್ಬರು ಸನ್ಯಾಸಿಗಳೆಂದರೆ ಶ್ರೀ ಚಿಕಾನೆ ಮಹಾರಾಜ್ ಕಲ್ಪವಿಕ್ಷಗಿರಿ (70), ಶ್ರೀ ಸುಶೀಲ್ ಗಿರಿ ಮಹಾರಾಜ್ (35). ಮೃತಪಟ್ಟ ಅವರ ಚಾಲಕ ನಿಲೇಶ್ ತೆಲ್ಗಡೆ.
ಆರಂಭದಲ್ಲಿ, ವದಂತಿಗಳ ಕಾರಣದಿಂದಾಗಿ ಈ ಘಟನೆ ಸಂಭವಿಸಿದೆ ಎಂದು ನಿರೂಪಿಸಲಾಗಿತ್ತು. ಅದೇ ಧಾಟಿಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಹೇಳಿಕೆಗಳನ್ನು ನೀಡಿದ್ದರು. ಆದರೆ, ಘಟನೆಯ ಸಮಯದಲ್ಲಿ ಪೊಲೀಸ್ ಸಿಬ್ಬಂದಿ ಹಾಜರಿದ್ದರು ಎಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವೀಡಿಯೊಗಳು ಸ್ಪಷ್ಟವಾಗಿ ತೋರಿಸುತ್ತವೆ. ಘಟನೆಯ ವೈರಲ್ ವೀಡಿಯೊಗಳಲ್ಲಿ ಖಾವಿ ಧರಿಸಿದ್ದ ಸಾಧುಗಳ ಅಸಹಾಯಕ ಪರಿಸ್ಥಿತಿಯನ್ನು ನೋಡಿದ ಜನರು ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ‘ವಿವೇಕ್ ವಿಚಾರ್ ಮಂಚ್’ ಸದಸ್ಯರು ಪಾಲ್ಘರ್, ತಲಸ್ರಿ ಮತ್ತು ಪ್ರದೇಶದ ಕೆಲವು ಬುಡಕಟ್ಟು ಸಂಘಟನೆಗಳ ಪ್ರಮುಖ ಜನರನ್ನು ಸಂಪರ್ಕಿಸಿದೆ. ಅನೇಕ ವರ್ಷಗಳಿಂದ ಈ ಪ್ರದೇಶದಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಅವರು ಬಹಿರಂಗಪಡಿಸಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು, ಬಾಂಬೆ ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶರಾದ ನ್ಯಾಯಮೂರ್ತಿ ಅಂಬದಾಸ್ಜಿ ಜೋಶಿ ಅವರ ಅಧ್ಯಕ್ಷತೆಯಲ್ಲಿ ಸತ್ಯ ಶೋಧನಾ ಸಮಿತಿಯನ್ನು ರಚಿಸಲು ನಿರ್ಧರಿಸಲಾಯಿತು.
ಪಾಲ್ಘರ್ನಲ್ಲಿ ‘ಲಾಕ್ಡೌನ್’ ಇದ್ದ ಕಾರಣ, ಸಮಿತಿಯ ಎಲ್ಲಾ ಸದಸ್ಯರರಿಗೆ ಘಟನೆಯ ಸ್ಥಳಕ್ಕೆ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಆದರೂ, ಕೆಲವು ಸ್ಥಳೀಯ ಸದಸ್ಯರು ಮತ್ತು ಪತ್ರಕರ್ತರು ಗಡ್ಚಿಂಚಲೆ ಮತ್ತು ಸುತ್ತಮುತ್ತಲಿನ ಪ್ರದೇಶಕ್ಕೆ ಭೇಟಿ ನೀಡಿದರು. ಅವರು ವಿವಿಧ ಬುಡಕಟ್ಟು ಕಾರ್ಯಕರ್ತರು ಮತ್ತು ಆ ಗ್ರಾಮದ ಗ್ಡಾಚಿಂಚಲೆಯ ಸರಪಂಚ್ ಚಿತ್ರ ಚೌಧರಿ ಅವರೊಂದಿಗೆ ಸಂವಹನ ನಡೆಸಿದರು.
ಲಭ್ಯವಾದ ಮಾಹಿತಿಯಿಂದ ಬಹಿರಂಗವಾದ ವಿಷಯಗಳು ಸಾಕಷ್ಟು ಆಘಾತಕಾರಿಯಾಗಿದೆ. ಬುಡಕಟ್ಟು ಜನರು ಮೂಲತಃ ಶಾಂತಿ ಪ್ರಿಯರು ಮತ್ತು ಹಿಂದೂ ಪದ್ಧತಿಗಳು ಮತ್ತು ಸಂಪ್ರದಾಯಗಳನ್ನು ಪಾಲಿಸುವವರು. ಹಾಗಾದರೆ ಬುಡಕಟ್ಟು ಜನಾಂಗದವರು ಯಾಕೆ ಇಷ್ಟು ಕ್ರೂರರಾದರು? ಕೇಸರಿ ಬಟ್ಟೆಗಳನ್ನು ಧರಿಸಿದ ಈ ಇಬ್ಬರು ಸಾಧುಗಳನ್ನು ಅವರು ನಿರ್ದಯವಾಗಿ ಏಕೆ ಕೊಂದರು? ಅಧ್ಯಯನದ ಸಮಯದಲ್ಲಿ ಈ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳುವ ಪ್ರಯತ್ನ ಮಾಡಲಾಗಿದೆ.
ಸಾಧುಗಳು ಕಳ್ಳರು ಅಥವಾ ಮೂತ್ರಪಿಂಡವನ್ನು ಕದಿಯುವ ಅಪಹರಣಕಾರರು ಎಂಬ ವದಂತಿ ಹರಡಿತು ಮತ್ತು ಅದಕ್ಕಾಗಿಯೇ ಜನಸಮೂಹ ದಾಳಿ ಮಾಡಿ ಅವರನ್ನು ಕೊಂದಿದೆ ಎಂದು ಪೊಲೀಸ್ ಆಡಳಿತ ಹೇಳಿಕೊಂಡಿತ್ತು. ಆದರೆ, ಪೊಲೀಸ್ ಆಡಳಿತದ ಈ ಹೇಳಿಕೆ ತಪ್ಪಾಗಿದೆ. ಪೋಲಿಸರಿಗೆ ದೂರು ನೀಡಿದ ಕರ್ಸ್ಗಾಂವ್ನ ಸರಪಂಚ್ ಲೂಯಿಸ್ ಕಾಕಾಡ್ ಅವರು ಹೇಳುವಂತೆ, ಗಡ್ಚಿಂಚಲೆಯಲ್ಲಿ ಹರಡಿದಂತಹ ವದಂತಿಯು ಇತರ ಹಳ್ಳಿಗಳಲ್ಲಿಯೂ ಹರಡಿದೆ.
ಈ ಪ್ರದೇಶದಲ್ಲಿ ಕೆಲಸ ಮಾಡುವ ಎಡಪಂಥೀಯ ಸಂಘಟನೆಗಳು ಆದಿವಾಸಿಗಳ ಮನಸ್ಸಿನಲ್ಲಿ, ಸರ್ಕಾರದ ವಿರುದ್ಧ ಮತ್ತು ಹಿಂದೂ ಧಾರ್ಮಿಕ ಮುಖಂಡರು, ಸಾಧುಗಳು ಮತ್ತು ಸನ್ಯಾಸಿಗಳ ವಿರುದ್ಧ ದ್ವೇಷವನ್ನು ಸೃಷ್ಟಿಸುತ್ತಿವೆ. ಸಾರ್ವಜನಿಕ ವಲಯದಲ್ಲಿ ಲಭ್ಯವಿರುವ ವಿಷಯಗಳ ಪ್ರಕಾರ, ಈ ಸಂಸ್ಥೆಗಳು ಸರ್ಕಾರ ವಿರೋಧಿ ಮತ್ತು ಹಿಂದೂ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿವೆ ಎಂಬುದನ್ನು ಸೂಚಿಸುತ್ತವೆ.
ಕ್ಯಾಥೊಲಿಕ್ ಬಿಷಪ್ ಕಾನ್ಫರೆನ್ಸ್ ಆಫ್ ಇಂಡಿಯಾ, ಕಾಷ್ಟಕರಿ ಸಂಘತಾನ, ಭೂಮಿಸೇನಾ, ಆದಿವಾಸಿ ಏಕ್ತ ಪರಿಷತ್, ಸಿಪಿಎಂ ಪ್ರೈಮಾ ಫೇಸಿ ಮುಂತಾದ ಸಂಸ್ಥೆಗಳ ಪ್ರಭಾವ ಹೆಚ್ಚುತ್ತಿರುವ ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಹಿಂಸಾಚಾರವು ಇಂತಹ ಘಟನೆಗೆ ಕಾರಣವಾಗಿದೆ ಎಂಬುದನ್ನು ಸೂಚಿಸುತ್ತದೆ.
ಪಾಲ್ಘರ್ ಪ್ರದೇಶದಲ್ಲಿ ಪರಿಣಾಮ ಬೀರುವ ನಾಲ್ಕು ಅಂಶಗಳೆಂದರೆ-
ಸಾಂವಿಧಾನಿಕ ವಿರೋಧಿ ಚಟುವಟಿಕೆಗಳು
ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಗಳು
ಅಭಿವೃದ್ಧಿ ವಿರೋಧಿ ಚಟುವಟಿಕೆಗಳು
ಹಿಂದೂ ವಿರೋಧಿ ವಾತಾವರಣ
ಸಾಂವಿಧಾನಿಕ ವಿರೋಧಿ ಚಟುವಟಿಕೆಗಳು
ಪಾಲ್ಘರ್ ಜಿಲ್ಲೆಯು ಬುಡಕಟ್ಟು ಪ್ರಾಬಲ್ಯ ಹೊಂದಿದೆ ಮತ್ತು ಬುಡಕಟ್ಟು ಜನಾಂಗದವರ ನೆಪದಲ್ಲಿ ಕೆಲಸ ಮಾಡುವ ಅನೇಕ ಸಂಸ್ಥೆಗಳ ಭದ್ರಕೋಟೆಯಾಗಿದೆ. ಪದೀಪ್ ಪ್ರಭು ಮತ್ತು ಅವರ ಸಹಚರರಾದ ಬ್ರಿಯಾನ್ ಲೋಬೊ, ಶಿರಾಜ್ ಬಲ್ಸಾರ ಅವರು ಕಾಶ್ತಕರಿ ಸಂಘಟಾನದ ದೊಡ್ಡ ಜಾಲವನ್ನು ನಿರ್ಮಿಸಿದ್ದಾರೆ. ಈ ಜಿಲ್ಲೆಯ ಬುಡಕಟ್ಟು ಕಾರ್ಯಕರ್ತರಾದ ಪ್ರದೀಪ್ ಪ್ರಭು ಅವರು ಬುಡಕಟ್ಟು ಜನಾಂಗದವರು ತಮ್ಮ ನೂರು ವರ್ಷಗಳ ಹಳೆಯ ಲಿಖಿತ ಸಂವಿಧಾನವನ್ನು ಹೊಂದಿದ್ದಾರೆಂದು ಹೇಳಿಕೊಳ್ಳುತ್ತಾರೆ, ಅಂತಹ ಹೇಳಿಕೆಗಳ ವೀಡಿಯೊಗಳನ್ನು ನಾವು ಯೂಟ್ಯೂಬ್ನಲ್ಲೂ ಕಾಣಬಹುದು. ಈ ಪ್ರದೇಶದೊಳಗೆ ನಡೆಯುತ್ತಿರುವ ಸಾಂವಿಧಾನಿಕ ವಿರೋಧಿ ಚಟುವಟಿಕೆಗಳನ್ನು ತೋರಿಸುವ ವೀಡಿಯೊಗಳು ಯೂಟ್ಯೂಬ್ನಲ್ಲಿ ಲಭ್ಯವಿದೆ. ಜಾರ್ಖಂಡ್ನಲ್ಲಿನ ನಕ್ಸಲ್ ನೇತೃತ್ವದ ಪಾತಲ್ಗಢ್ ಚಳವಳಿಯತೆಯೇ, ಚಿಖಲೆ ಗ್ರಾಮಚಂಚಾಯತ್ ಇದೇ ರೀತಿಯ ನಿರ್ಣಯವನ್ನು 2017 ರ ಮೇ ತಿಂಗಳಲ್ಲಿ ಗ್ರಾಮಸಭೆಯಲ್ಲಿ ಅಂಗೀಕರಿಸಿತು. ಆದಿವಾಸಿ ಏಕ್ತ ಪರಿಷತ್ನ ಸದಸ್ಯ ಅಂತಹ ನಿರ್ಣಯವನ್ನು ಅಂಗೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಗಳು
ಚುನಾವಣಾ ಅವಧಿಯಲ್ಲಿ ಎಡಪಂಥೀಯರಲ್ಲದ ಸಾರ್ವಜನಿಕ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಯುತ್ತದೆ. ಕೂಟಗಳು ಮತ್ತು ಸಮಾವೇಶಗಳಲ್ಲಿ ಭಾಗವಹಿಸುವಂತೆ ಜನರನ್ನು ಬೆದರಿಸಲಾಗುತ್ತದೆ. ವಿರೋಧ ವ್ಯಕ್ತಪಡಿಸಿದರೆ ಅವರ ಮನೆಗಳನ್ನು ಸುಡುವುದು, ಅವರ ವಾಹನಗಳಿಗೆ ಹಾನಿ ಮಾಡುವುದು, ಅವರ ಜಾನುವಾರು ಮತ್ತು ಸಾಕುಪ್ರಾಣಿಗಳನ್ನು ನಾಶಪಡಿಸುವುದು ಇತ್ಯಾದಿಗಳು ನಡೆಯುತ್ತವೆ. ಇಂತಹ ಘಟನೆಗಳು ನಿಯಮಿತವಾಗಿ ಸಂಭವಿಸುತ್ತವೆ. ಮಾಜಿ ಶಾಸಕ ಲಹಾನು ಕೋಮ್ ಅವರ ಅವಧಿಯಲ್ಲಿ, ಇಂತಹ ಅನೇಕ ಹಿಂಸಾತ್ಮಕ ಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗಿವೆ.
ಅಭಿವೃದ್ಧಿ ವಿರೋಧಿ ಚಟುವಟಿಕೆಗಳು
ಆದಿವಾಸಿಗಳ ಹಿತಾಸಕ್ತಿ ಕಾಪಾಡುವ ಸೋಗಿನಲ್ಲಿ ಬುಲೇಟ್ ರೈಲು ಮತ್ತು ಮುಂಬೈ – ವಡೋದರಾ ಹೆದ್ದಾರಿ ಯೋಜನೆಯ ಯೋಜನೆಗಳನ್ನು ಸಂಸ್ಥೆಗಳು ಸತತವಾಗಿ ವಿರೋಧಿಸುತ್ತಿವೆ.
ಹಿಂದೂ ವಿರೋಧಿ ವಾತಾವರಣ
ಕ್ರಿಶ್ಚಿಯನ್ ಮಿಷನರಿಗಳು, ಹಿಂದೂ ಸಂಪ್ರದಾಯಗಳಿಂದ ಬುಡಕಟ್ಟು ಜನಾಂಗವನ್ನು ವಿಭಜಿಸುವ ಪಿತೂರಿ ನಡೆಸುತ್ತಿವೆ ಎಂಬುದನ್ನು ಲಭ್ಯವಾದ ವಿಷಯಗಳು ಸೂಚಿಸುತ್ತವೆ. ‘ಹಿಂದೂ ಮತ್ತು ಹಿಂದೂ ಸಂಪ್ರದಾಯಗಳ ದೇವತೆಗಳು ಆದಿವಾಸಿಗಳಲ್ಲ’ ಎಂದು ಆದಿವಾಸಿಗಳ ನಡುವೆ ಪ್ರಚಾರ ಹರಡಿದೆ. ಅವರು ಹಿಂದೂ ದೇವರುಗಳನ್ನು ಮತ್ತು ವರ್ಕರಿ ಪದ್ಧತಿಗಳನ್ನು ವಿರೋಧಿಸುತ್ತಾರೆ. ಇಂತಹ ಹಿಂದೂ ವಿರೋಧಿ ಚಟುವಟಿಕೆಗಳು ಹಿಂದೂಗಳ ವಿರುದ್ಧ ದ್ವೇಷವನ್ನು ಉಂಟುಮಾಡುತ್ತಿವೆ. ಫಾದರ್ ನಿಕೋಲಸ್ ಬಾರ್ಲಾ ಮತ್ತು ಇತರ ಕ್ರಿಶ್ಚಿಯನ್ ಮಿಷನರಿಗಳು ಬುಡಕಟ್ಟು ವಾರ್ಷಿಕ ಕೂಟಗಳಲ್ಲಿ ಭಾಗವಹಿಸುತ್ತಾರೆ.
ಆದಿವಾಸಿ ಏಕ್ತ ಪರಿಷತ್ತಿನ ಕಲುರಾಮ್ ಧೋಡಾಡೆ ಅವರಂತಹ ಹಿಂದೂ ವಿರೋಧಿ ಕಾರ್ಯಕರ್ತರು ಆದಿವಾಸಿಗಳಲ್ಲಿ ದ್ವೇಷವನ್ನು ಹರಡಿದ್ದಾರೆ. ಆದಿವಾಸಿ ಸಂಸ್ಕೃತಿಯಲ್ಲಿ ಆದಿವಾಸಿಗಳು ದೇವರಾದ ರಾಮ, ಗಣಪತಿ ಮತ್ತು ಇತರ ಹಿಂದೂ ದೇವರನ್ನು ಪೂಜಿಸುತ್ತಾರೆ ಎಂಬುದಕ್ಕೆ ಹಲವಾರು ಪುರಾವೆಗಳಿವೆ, ಅದು ಇತರ ಯಾವುದೇ ಹಿಂದೂ ಪಂಥಗಳಲ್ಲೂ ಸ್ಪಷ್ಟವಾಗಿ ಕಂಡುಬರುತ್ತದೆ. ಹೇಗಾದರೂ, ರಾಮ ಆದಿವಾಸಿ ದೇವರು ಅಲ್ಲ ಆದರೆ ರಾವಣನು ಆದಿವಾಸಿ ದೇವರು ಎಂದು ಪ್ರಚಾರ ಮಾಡಲಾಗುತ್ತಿದೆ. ಹಿಂದೂ ಸಂಪ್ರದಾಯಗಳ ಕಡೆಗೆ ನಕಾರಾತ್ಮಕ ಧೋರಣೆ ಬೆಳೆಸಲಾಗುತ್ತಿದೆ, ಅದು ಜನರನ್ನು ಹಿಂಸಾತ್ಮಕವಾಗಲು ಪ್ರೇರೇಪಿಸುತ್ತಿದೆ ಮತ್ತು ಆದಿವಾಸಿಗಳಲ್ಲಿ ಘರ್ಷಣೆ ಉಂಟಾಗುತ್ತಿದೆ. ಹರಿನಾಮ ಸಪ್ತಾಹಗಳನ್ನು ವಿರೋಧಿಸಿದ ಘಟನೆಗಳು, ಜವಾಹರ್ನಲ್ಲಿ ರಾವಣನ ಪ್ರತಿಮೆಯನ್ನು ಸುಡಲು ವಿರೋಧ ಮುಂತಾದ ಘಟನೆಗಳು ನಡೆದಿವೆ. ಸೋಷಿಯಲ್ ಮೀಡಿಯಾ ಬಳಕೆಯಿಂದ ಹಿಂದೂಗಳ ವಿರುದ್ಧ ದ್ವೇಷ ಉಂಟುಮಾಡುವ ವಿಭಜಕ ವಿಡಿಯೋಗಳು ನಿಯಮಿತವಾಗಿ ಹರಡುತ್ತಿವೆ.
ವರದಿಯಲ್ಲಿ ಉಲ್ಲೇಖಿಸಲಾದ ಲಭ್ಯವಿರುವ ವಿಷಯಗಳನ್ನು ಪರಿಗಣಿಸಿದ ನಂತರ, ದೇಶದ ಆರ್ಥಿಕ ರಾಜಧಾನಿಯ ಸಮೀಪದಲ್ಲಿರುವ ಪ್ರದೇಶದೊಳಗೆ ಕಾನೂನು ಮತ್ತು ಸುವ್ಯವಸ್ಥೆ ಹಾಳುಗೆಡವುವಂತಹ ನಕ್ಸಲ್ ಮಾದರಿಯ ಚಟುವಟಿಕೆಗಳು ನಡೆಯುತ್ತಿರುವ ಸಾಧ್ಯತೆ ಇದೆ. ನಕ್ಸಲ್ ಪೀಡಿತ ಪ್ರದೇಶಗಳಾದ ಗಡ್ಚಿರೋಲಿಯಲ್ಲಿ, ತ್ರಿಪುರ ಮತ್ತು ಪಶ್ಚಿಮ ಬಂಗಾಳದಂತೆಯೇ ವಿರೋಧ ಅಭಿಪ್ರಾಯಗಳನ್ನು ಹೊಂದಿರುವ ಜನರನ್ನು ಹಿಂಸೆಯ ಮೂಲಕ ನಿರ್ಮೂಲನೆ ಮಾಡಲಾಗುತ್ತಿದೆ, ಕಳೆದ 40 ವರ್ಷಗಳಿಂದ ಇದೇ ರೀತಿಯ ಘಟನೆಗಳು ಪಾಲ್ಘರ್ನಲ್ಲಿ ನಡೆಯುತ್ತಿವೆ. ಪ್ರಸ್ತುತ ಘಟನೆಯು ಇಡೀ ದೇಶದ ಗಮನವನ್ನು ಸೆಳೆದಿದೆ, ಏಕೆಂದರೆ ಸತ್ತವರು ಸಾಧುಗಳು, ಆದರೆ ಈ ಪ್ರದೇಶದಲ್ಲಿ ಇಂತಹ ಅನೇಕ ಹಿಂಸಾತ್ಮಕ ದಾಳಿಗಳು ನಡೆದಿವೆ. ಸರ್ಕಾರದ ನಿಲುವಿನಿಂದಾಗಿ ಪ್ರಾರಂಭದಿಂದಲೂ ತನಿಖೆಯನ್ನು ದಾರಿ ತಪ್ಪಿಸಲಾಗುತ್ತಿದೆ ಮತ್ತು ತನಿಖೆಯನ್ನು ಪೊಲೀಸ್ ಇಲಾಖೆ ಮತ್ತು ಸಿಐಡಿ ತಪ್ಪಾಗಿ ನಿರ್ವಹಿಸುತ್ತಿದೆ. ಆದ್ದರಿಂದ, ಈ ವಿಷಯದ ವಿಚಾರಣೆಯ ಜವಾಬ್ದಾರಿಯನ್ನು ‘ಎನ್ಐಎ’ ಮತ್ತು ‘ಸಿಬಿಐ’ ಗೆ ವಹಿಸಬೇಕೆಂದು ಸಮಿತಿ ಶಿಫಾರಸು ಮಾಡಿದೆ.
ಶಿಫಾರಸು ಈ ಕೆಳಗಿನ ಕಾರಣಗಳನ್ನು ಆಧರಿಸಿದೆ:
ಕಾಸಾ ಪೊಲೀಸ್ ಠಾಣೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಯನ್ನು ತಕ್ಷಣವೇ ಇತರ ಪೊಲೀಸ್ ಠಾಣೆಗೆ ವರ್ಗಾಯಿಸಲಾಯಿತು, ಮತ್ತು ಅವರಲ್ಲಿ ಐವರನ್ನು ಅಮಾನತುಗೊಳಿಸಲಾಗಿದೆ. ಇದು ಪೊಲೀಸ್ ಪಾತ್ರದ ಬಗ್ಗೆ ಅನುಮಾನವನ್ನು ಸೃಷ್ಟಿಸುತ್ತದೆ.
ಮುಖ್ಯಮಂತ್ರಿ ಮತ್ತು ಗೃಹ ಸಚಿವರು ತನಿಖೆಯ ಮೇಲೆ ಪ್ರಭಾವ ಬೀರುವ ಹೇಳಿಕೆಗಳನ್ನು ನೀಡಿದ್ದಾರೆ. ಹತ್ಯೆಗೀಡಾದ ಘಟನೆಯ ಸಮಯದಲ್ಲಿ ಹಲ್ಲೆಕೋರರಿಂದ ದಾದಾ ಎಂದು ಕರೆಯಲ್ಪಟ್ಟಿದ್ದ ವ್ಯಕ್ತಿಯು ಆಡಳಿತಾರೂಢ ರಾಜಕೀಯ ಪಕ್ಷದೊಂದಿಗೆ ಸಂಪರ್ಕ ಹೊಂದಿದ್ದಾನೆ. ಘಟನೆಯ ಸಮಯದಲ್ಲಿ ಕಾಶಿನಾಥ್ ಚೌಧರಿ ಹಾಜರಿದ್ದರು, ಆದರೆ, ಸಾಧುಗಳನ್ನು ಜನಸಮೂಹ ಹತ್ಯೆಯಿಂದ ರಕ್ಷಿಸಲು ಅವರು ಯಾವುದೇ ಪ್ರಯತ್ನ ಮಾಡಿಲ್ಲ. ಬದಲಿಗೆ ಅವರು ಅನೇಕ ಜನರನ್ನು ಘಟನೆಯ ಸ್ಥಳಕ್ಕೆ ಕರೆತಂದಿದ್ದಾರೆ ಎಂಬ ಬಲವಾದ ಅನುಮಾನವಿದೆ. ಗೌಡ್ಚಿಂಚೇಲ್ಗೆ ಅಧಿಕೃತ ಭೇಟಿಯ ಸಮಯದಲ್ಲಿ ಗೃಹ ಸಚಿವರೊಂದಿಗೆ ಅದೇ ವ್ಯಕ್ತಿ ಇದ್ದ. ಆದ್ದರಿಂದ, ರಾಜ್ಯ ಸರ್ಕಾರವು ಪಕ್ಷಪಾತವಿಲ್ಲದ ತನಿಖೆ ನಡೆಸುವ ಬಗ್ಗೆ ಅನುಮಾನವಿದೆ.
ಈ ಘಟನೆ ದಾದ್ರಾ ನಗರ ಹವೇಲಿ ಮತ್ತು ಮಹಾರಾಷ್ಟ್ರದಲ್ಲಿ ನಡೆದಿದೆ. ಆದ್ದರಿಂದ, ಇದು ಅಂತರರಾಜ್ಯ ಘಟನೆ. ಈ ಹಿನ್ನೆಲೆಯಲ್ಲಿ, ಘಟನೆಯಿಂದಾಗಿ ಎದ್ದಿರುವ ಪ್ರಶ್ನೆಗಳ ಉತ್ತರಗಳನ್ನು ಹುಡುಕಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು.
ಪಾಲ್ಘರ್ ಜಿಲ್ಲೆಯ ಎಡಪಂಥೀಯರು ಮತ್ತು ಬುಡಕಟ್ಟು ಜನಾಂಗದವರು ನಡೆಸುತ್ತಿರುವ ಸಂಸ್ಥೆಗಳ ಮತ್ತು ಇತರ ರಾಜ್ಯಗಳ ನಡುವಿನ ಸಂಬಂಧದ ಬಗ್ಗೆ ತನಿಖೆ ನಡೆಸುವುದು ಅವಶ್ಯಕ. ಇಲ್ಲದಿದ್ದರೆ, ಮುಂಬರುವ ಕಾಲದಲ್ಲಿ ಗಡ್ಚಿರೋಲಿ ಅಥವಾ ಇತರ ನಕ್ಸಲ್ ಪೀಡಿತ ಪ್ರದೇಶಗಳಂತೆ ಈ ಪ್ರದೇಶದ ಪರಿಸ್ಥಿತಿ ಹಿಂಸಾತ್ಮಕವಾಗಿರುತ್ತದೆ.
ಸಾಧುವಿನ ಗುಂಪು ಹಲ್ಲೆ ಘಟನೆಯು ಮಂಜಿನ ಪರ್ವತದ ಒಂದು ಪುಟ್ಟ ಮಂಜುಗಡ್ಡೆಯಷ್ಟೇ. ಪಾಲ್ಘರ್ ಮತ್ತು ಥಾಣೆ ಜಿಲ್ಲೆಯ ವಿವಿಧ ಹೆಸರುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳ ನೈಜ ಆಶಯಗಳನ್ನು ತನಿಖೆ ಮಾಡುವುದು ಅವಶ್ಯಕ. ಈ ಸಂಸ್ಥೆಗಳ ಮೂಲಗಳನ್ನು ಬಹಿರಂಗಪಡಿಸಬೇಕು ಮತ್ತು ನಿಜವಾದ ಆರೋಪಿಗಳನ್ನು ಕಂಡುಹಿಡಿಯಬೇಕು. ಸಂಸ್ಥೆಗಳ ಚಟುವಟಿಕೆಗಳು, ಈ ಸಂಸ್ಥೆಗಳ ವಿದೇಶಿ ಸಹಾಯಗಳು, ಈ ಸಂಸ್ಥೆಗಳಿಗೆ ದೇಣಿಗೆ ನೀಡುವ ಬಗ್ಗೆ ಸಮಗ್ರ ತನಿಖೆ ನಡೆಸುವುದು ಅವಶ್ಯಕ. ವಿಚಾರಣೆಯ ನಂತರ ದೀರ್ಘಾವಧಿಯ ಹಂತಗಳನ್ನು ಹೊಂದುವ ಅವಶ್ಯಕತೆಯಿದೆ. ಈ ಸಂಸ್ಥೆಗಳ ಸದಸ್ಯರು ಹಿಂಸೆ, ಅಭಿವೃದ್ಧಿ ವಿರೋಧಿ ಮತ್ತು ಸಾಂವಿಧಾನಿಕ ವಿರೋಧಿ ಚಟುವಟಿಕೆಗಳಿಗೆ ಕಾರಣರಾಗಿದ್ದಾರೆ. ಈಗಿನಂತೆ ಪೊಲೀಸರು ಆದಿವಾಸಿಗಳನ್ನು ಬಂಧಿಸಿದ್ದಾರೆ, ಆದರೆ ನಿಜವಾದ ಅಪರಾಧಿಗಳನ್ನು ಇನ್ನು ಕಂಡುಹಿಡಿಯಬೇಕು ಮತ್ತು ಮುಗ್ಧ ಆದಿವಾಸಿಗಳನ್ನು ಬಿಡುಗಡೆ ಮಾಡಬೇಕು.
ವಿವೇಕ್ ವಿಚಾರ್ ಮಂಚ್ನ ಟ್ರಸ್ಟಿಗಳು ಅಂಗೀಕರಿಸಿದ 2020 ರ ಏಪ್ರಿಲ್ 22 ರ ನಿರ್ಣಯದ ಮೂಲಕ, ಈ ವಿಷಯದ ಬಗ್ಗೆ ತನಿಖೆ ನಡೆಸಲು ‘ಸತ್ಯ-ಶೋಧನಾ ಸಮಿತಿ’ ರಚಿಸಲಾಯಿತು. ಸಮಿತಿಯು ಈ ಕೆಳಗಿನ ಸದಸ್ಯರನ್ನು ಒಳಗೊಂಡಿದೆ:
ನ್ಯಾಯಮೂರ್ತಿ ಅಂಬಾದಾಸ್ ಜೋಶಿ, ನಿವೃತ್ತ. ಹೈಕೋರ್ಟ್ ನ್ಯಾಯಾಧೀಶರು, (ಅಧ್ಯಕ್ಷರು)
ಸಮೀರ್ ಕಾಂಬ್ಳೆ, ವಕೀಲ (ಸದಸ್ಯ ಕಾರ್ಯದರ್ಶಿ)
ಪ್ರವರ್ತಕ್ ಪಾಠಕ್, ವಕೀಲರು, ಹೈಕೋರ್ಟ್. (ಜಂಟಿ ಕಾರ್ಯದರ್ಶಿ)
ಕಿರಣ್ ಶೆಲಾರ್, ಮುಂಬೈ ತರುಣ್ ಭಾರತ್ ಸಂಪಾದಕ,
ಸಂತೋಷ್ ಜನಥೆ, ಪಾಲ್ಘರ್ ಜಿಲ್ಲೆಯ ಕಾರ್ಯಕರ್ತ
ಲಕ್ಷ್ಮಣ್ ಖರ್ಪಡೆ, ನಿವೃತ್ತ. ಸಹಾಯಕ ಪೊಲೀಸ್ ಆಯುಕ್ತರು.
ಮಾಯಾ ಪೊಟ್ದಾರ್, ಎಂಎಸ್ಡಬ್ಲ್ಯೂ, ಸಾಮಾಜಿಕ ಕಾರ್ಯಕರ್ತೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.