ನವದೆಹಲಿ: ಇತ್ತೀಚೆಗಷ್ಟೇ ಜಾಗತಿಕ ಮಟ್ಟದಲ್ಲಿ ಹೊಸದಾಗಿ ಆರಂಭವಾಗಿರುವ ಕೃತಕ ಬುದ್ಧಿಮತ್ತೆಯ ಜಾಗತಿಕ ಪಾಲುದಾರಿಕೆ (Global Partnership on Artificial Intelligence (GPAI))ಯ ಸ್ಥಾಪಕ ಸದಸ್ಯನಾಗಿ ಭಾರತವೂ ಆಯ್ಕೆಯಾಗಿದೆ ಎಂದು ವರದಿಗಳು ತಿಳಿಸಿವೆ.
ಆರಂಭಿಕ ಸದಸ್ಯರಾಗಿರುವ ಯುನೈಟೆಡ್ ಕಿಂಗ್ಡಮ್, ಯುನೈಟೆಡ್ ಸ್ಟೇಟ್ಸ್, ಯುರೋಪಿಯನ್ ಯೂನಿಯನ್, ಆಸ್ಟ್ರೇಲಿಯಾ ಗಳ ಜೊತೆಗೆ ಭಾರತವೂ ಸಹ GPAI ನ ಆರಂಭಿಕ ಸದಸ್ಯನಾಗಿ ಪಾಲು ಪಡೆದಿದೆ. ಈ ಬಗ್ಗೆ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರು ಟ್ವೀಟ್ ಮಾಡುವ ಮೂಲಕ ಅಧಿಕೃತ ಮಾಹಿತಿ ನೀಡಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ.
ಇದು ಜಾಗತಿಕ ಪಾಲುದಾರಿಕೆ, ಅಂತರರಾಷ್ಟ್ರೀಯ ಜವಾಬ್ದಾರಿ, ಮಾನವ ಅಭಿವೃದ್ಧಿ ಸೇರಿದಂತೆ ಎಲ್ಲಾ ರೀತಿಯ ವಿಚಾರಗಳನ್ನು ಉತ್ತೇಜಿಸುತ್ತದೆ. ಭಾರತಕ್ಕೆ ಇದರಿಂದಾಗಿ ಡಿಜಿಟಲ್ ಟೆಕ್ನಾಲಜಿ ಗಳಲ್ಲಿನ ಮಾಹಿತಿಯಲ್ಲಿ ಮತ್ತಷ್ಟು ಜ್ಞಾನ ಹೊಂದುವುದು, ಪ್ರಗತಿ ಸಾಧಿಸುವುದು ಸಾಧ್ಯವಾಗಲಿದೆ. ತಂತ್ರಜ್ಞಾನದ ಬಳಕೆಯ ವಿಚಾರಕ್ಕೆ ಸಂಬಂಧಿಸಿದಂತೆಯೂ ಭಾರತದ ಅನುಭವವನ್ನು ಹೆಚ್ಚಿಸಲಿದೆ ಎಂದೂ ಅವರು ತಿಳಿಸಿದ್ದಾರೆ.
ಕೆನಡಾ, ಫ್ರಾನ್ಸ್, ಜರ್ಮನ್, ಇಟಲಿ, ಜಪಾನ್, ಮೆಕ್ಸಿಕೊ, ನ್ಯೂಜಿಲ್ಯಾಂಡ್, ಸಿಂಗಾಪುರ, ದಕ್ಷಿಣ ಕೊರಿಯಾ ಮೊದಲಾದ ರಾಷ್ಟ್ರಗಳೂ ಇದರಲ್ಲಿ ಸದಸ್ಯತ್ವ ಪಡೆದಿರುವ ಇನ್ನಿತರ ರಾಷ್ಟ್ರಗಳಾಗಿದ್ದು, ಮಾನವ ಹಕ್ಕುಗಳ ಕುರಿತಂತೆ, ಸೇರ್ಪಡೆ, ನಾವಿನ್ಯತೆ, ವೈವಿಧ್ಯತೆ ಮತ್ತು ಆರ್ಥಿಕ ಬೆಳವಣಿಗೆಯ ಕುರಿತಾಗಿಯೂ ಜವಾಬ್ದಾರಿಯುತ ಬಳಕೆ ಮತ್ತು ಅಭಿವೃದ್ಧಿ ಕುರಿತಾಗಿ ಜಾಗತಿಕ ಮಟ್ಟದಲ್ಲಿ ಮಾರ್ಗದರ್ಶನ ನೀಡುವ ಕೆಲಸವನ್ನು ಇದು ಮಾಡಲಿದೆ ಎಂದೂ ಅವರು ಹೇಳಿದ್ದಾರೆ.
AI ನ ಪ್ರಧಾನ ಕಛೇರಿ ಪ್ಯಾರಿಸ್ ನಲ್ಲಿ ಇರಲಿದ್ದು, ಪ್ಯಾರಿಸಾ ಮತ್ತು ಮಾಂಟ್ರಿಯಲ್ ನಲ್ಲಿ ಎರಡು ಸಿಇಒ ಕಛೇರಿಗಳನ್ನೂ ಹೊಂದಿರಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.