ನವದೆಹಲಿ: 2019 ರಲ್ಲಿ ಭಾರತವು 51 ಬಿಲಿಯನ್ ಯುಎಸ್ಡಿ ವಿದೇಶಿ ಹೂಡಿಕೆಯನ್ನು ಪಡೆದುಕೊಂಡಿದೆ ಮತ್ತು 2019 ರಲ್ಲಿ ವಿಶ್ವದ 9ನೇ ಅತಿದೊಡ್ಡ ವಿದೇಶಿ ನೇರ ಹೂಡಿಕೆಗಳನ್ನು (ಎಫ್ಡಿಐ) ಪಡೆದಿದೆ ಎಂದು ಯುಎನ್ನ ವ್ಯಾಪಾರ ಸಂಸ್ಥೆಯ ವರದಿಯೊಂದು ತಿಳಿಸಿದೆ.
ಕೋವಿಡ್-19ರ ನಂತರದ ಅವಧಿಯಲ್ಲಿ ಭಾರತದಲ್ಲಿ ಕಡಿಮೆ ಆದರೆ ಸಕಾರಾತ್ಮಕ ಆರ್ಥಿಕ ಬೆಳವಣಿಗೆ ಕಾಣಲಿದೆ ಮತ್ತು ಭಾರತದ ದೊಡ್ಡ ಮಾರುಕಟ್ಟೆಗಳು ದೇಶಕ್ಕೆ ಹೂಡಿಕೆಗಳನ್ನು ಆಕರ್ಷಿಸುವುದನ್ನು ಮುಂದುವರೆಸಲಿದೆ ಎಂದು ಯುಎನ್ ಟ್ರೇಡ್ ಅಂಡ್ ಡೆವಲಪ್ಮೆಂಟ್ ಕಾನ್ಫರೆನ್ಸ್ (ಯುಎನ್ಸಿಟಿಎಡಿ) ಸೋಮವಾರ ನೀಡಿದ ವರದಿಯಲ್ಲಿ ತಿಳಿಸಿದೆ.
ಯುಎನ್ಸಿಟಿಎಡಿ ನೀಡಿದ ವಿಶ್ವ ಹೂಡಿಕೆ ವರದಿ 2020ರ ಪ್ರಕಾರ, ಭಾರತವು 2019 ರಲ್ಲಿ ಎಫ್ಡಿಐ ಪಡೆದ 9 ನೇ ಅತಿದೊಡ್ಡ ರಾಷ್ಟ್ರವಾಗಿದೆ, ಈ ವರ್ಷದಲ್ಲಿ ಪಡೆದ 51 ಬಿಲಿಯನ್ ಡಾಲರ್ ಎಫ್ಡಿ ಒಳಹರಿವು, 2018 ರಲ್ಲಿ ಸ್ವೀಕರಿಸಿದ 42 ಬಿಲಿಯನ್ ಡಾಲರ್ ಎಫ್ಡಿಐಗಿಂತ ಹೆಚ್ಚಾಗಿದೆ.
“ಅಭಿವೃದ್ಧಿ ಹೊಂದುತ್ತಿರುವ ಏಷ್ಯಾ” ಪ್ರದೇಶದಲ್ಲಿ, ಎಫ್ಡಿಐಗಾಗಿ ಭಾರತವು ಅಗ್ರ ಐದು ಆತಿಥೇಯ ಆರ್ಥಿಕತೆಗಳಲ್ಲಿ ಒಂದಾಗಿದೆ.
ಜಾಗತಿಕ ಎಫ್ಡಿಐ ಹರಿವುಗಳು 2020 ರಲ್ಲಿ ಶೇಕಡಾ 40 ರಷ್ಟು ಕಡಿಮೆಯಾಗುವ ಮುನ್ಸೂಚನೆ ಇದೆ ಎಂದು ವರದಿ ಹೇಳಿದೆ.
2005 ರ ನಂತರ ಮೊದಲ ಬಾರಿಗೆ ಜಾಗತಿಕ ಎಫ್ಡಿಐ 1 ಟ್ರಿಲಿಯನ್ ಡಾಲರ್ಗಿಂತ ಕಡಿಮೆಯಾಗಿದೆ.
ಕೊರೋನವೈರಸ್ ಸಾಂಕ್ರಾಮಿಕದಿಂದ ಉಂಟಾದ ಆರ್ಥಿಕ ಹಿಂಜರಿತದಿಂದ ತೀವ್ರವಾಗಿ ತತ್ತರಿಸಿರುವ ಏಷ್ಯಾದ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳಿಗೆ ವಿದೇಶಿ ನೇರ ಹೂಡಿಕೆ 2020 ರಲ್ಲಿ ಶೇಕಡಾ 45 ರಷ್ಟು ಕುಸಿಯುವ ನಿರೀಕ್ಷೆಯಿದೆ.
ದಕ್ಷಿಣ ಏಷ್ಯಾದಲ್ಲಿ, 2020 ರಲ್ಲಿ ಎಫ್ಡಿಐ ಕೂಡ ತೀವ್ರವಾಗಿ ಕುಗ್ಗುವ ನಿರೀಕ್ಷೆಯಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.