ನವದೆಹಲಿ: ಪಿಎಂ ಕೇರ್ಸ್ ನಿಧಿಯನ್ನು ಬಳಸಿ 50,000 ವೆಂಟಿಲೇಟರ್ಗಳನ್ನು ಖರೀದಿಸಲಾಗಿದ್ದು, ಈ ವೆಂಟಿಲೇಟರ್ಗಳು ಸೋಮವಾರದಿಂದ ಆಸ್ಪತ್ರೆಗಳಿಗೆ ಲಭ್ಯವಾಗಿದೆ ಎಂದು ಬ್ಲೂಕ್ರಾಫ್ಟ್ ಸಿಇಒ ಅಖಿಲೇಶ್ ಮಿಶ್ರಾ ಟ್ವಿಟರ್ ಮೂಲಕ ಹೇಳಿದ್ದಾರೆ.
ವೆಂಟಿಲೇಟರ್ಗಳನ್ನು ಖರೀದಿಸುವ ಸಲುವಾಗಿ ಮೇ 13 ರಂದು ನಿಧಿಯಿಂದ 2,000 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿತ್ತು.
ಸೆಂಟರ್ ಫಾರ್ ಡಿಸೀಸ್ ಡೈನಾಮಿಕ್ಸ್ ಎಕನಾಮಿಕ್ಸ್ ಅಂಡ್ ಪಾಲಿಸಿ (ಸಿಡಿಡಿಇಪಿ) ನಡೆಸಿದ ಅಧ್ಯಯನವನ್ನು ಉಲ್ಲೇಖಿಸಿದ ಮಿಶ್ರಾ, ಕಳೆದ 70 ವರ್ಷಗಳಿಂದ ದೇಶದಲ್ಲಿ 47 ಸಾವಿರ ವೆಂಟಿಲೇಟರ್ ಸೌಲಭ್ಯಗಳನ್ನು ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯಗೊಳಿಸಲಾಗಿತ್ತು. ಆದರೆ “PM CARES ಒಂದೇ ಸಮಯದಲ್ಲಿ 50,000 ಅನ್ನು ಒದಗಿಸಿದೆ” ಎಂದು ಅವರು ಹೇಳಿದ್ದಾರೆ.
ಪ್ರತ್ಯೇಕ ನಿಧಿಯನ್ನು ರಚಿಸುವ ಅಗತ್ಯವನ್ನು ಸಮರ್ಥಿಸಿಕೊಂಡ ಮಿಶ್ರಾ, “ನೈಸರ್ಗಿಕ ವಿಪತ್ತಿನಿಂದಾಗಿ ಸಂಕಷ್ಟದಲ್ಲಿರುವ ವ್ಯಕ್ತಿಗಳು / ಕುಟುಂಬಗಳಿಗೆ ಪ್ರಾಥಮಿಕವಾಗಿ ಸಹಾಯ ಮಾಡಲು ಪಿಎಂಎನ್ಆರ್ಎಫ್ ಬಳಕೆಯು ವಿಕಸನಗೊಂಡಿತು. ಪಿಎಂಎನ್ಆರ್ಎಫ್ನಲ್ಲಿ ಕೋವಿಡ್-19ನಿಂದ ಉದ್ಬವಗೊಂಡಂತಹ ಸಮಸ್ಯೆಗಳನ್ನು ಸಂಘಟಿತ ರೀತಿಯಲ್ಲಿ ನಿರ್ವಹಿಸಲು ಯಾವುದೇ ಅವಕಾಶವಿಲ್ಲ. ಈ ಕೊರತೆಯನ್ನು PM CARES ನೀಗಿಸಿತು” ಎಂದಿದ್ದಾರೆ.
#PMCARES, a fund set up specifically to cater to public health emergencies like #COVID19, has started making a difference, like all PM Modi initiatives, in the real world.
Several questions were initially raised by usual lobby of “oppose anything new and good”. Some facts. 1/10 pic.twitter.com/Ht9dq7jIe1
— Akhilesh Mishra (@amishra77) June 15, 2020
ಆರೋಗ್ಯ ಅಥವಾ ಔಷಧೀಯ ಸೌಲಭ್ಯಗಳು, ಇತರ ಮೂಲಸೌಕರ್ಯಗಳು, ಸಂಬಂಧಿತ ಸಂಶೋಧನೆಗಳಿಗೆ ಧನಸಹಾಯ ನೀಡುವ ಮೂಲಕ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಗೆ ಪರಿಹಾರ ಅಥವಾ ಸಹಾಯವನ್ನು ಬೆಂಬಲಿಸುವ ಕಾರಣ ಪಿಎಂ ಕೇರ್ಸ್ ನಿಧಿ ಪಿಎಂಎನ್ಆರ್ಎಫ್ಗಿಂತ ಭಿನ್ನವಾಗಿದೆ ಎಂದು ಅವರು ಹೇಳಿದ್ದಾರೆ.
ವ್ಯತ್ಯಾಸವನ್ನು ಮತ್ತಷ್ಟು ವಿವರಿಸಿದ ಅವರು, ಪಿಎಂಎನ್ಆರ್ಎಫ್ ಮಂಡಳಿಯು ಪ್ರಧಾನಿ, ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಮತ್ತು ಖಾಸಗಿ ಕೈಗಾರಿಕೆಗಳ ಪ್ರತಿನಿಧಿಗಳಿಂದ ಕೂಡಿದೆ. ಆದರೆ, PM CARES ಮಂಡಳಿಯು ಪ್ರಧಾನಿ, ಹಣಕಾಸು ಮಂತ್ರಿ, ಗೃಹ ಸಚಿವ, ರಕ್ಷಣಾ ಸಚಿವರು ಮತ್ತು ಎಲ್ಲಾ ಮಾಜಿ ಅಧಿಕಾರಿಗಳನ್ನು ಒಳಗೊಂಡಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.