ನವದೆಹಲಿ: ದಿ ಕೌನ್ಸಿಲ್ ಆಫ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR) ʼಆರೋಗ್ಯ ಪಥ್ʼ ಎಂಬ ನ್ಯಾಷನಲ್ ಹೆಲ್ತ್ ಕೇರ್ ಚೈನ್ ಪೋರ್ಟಲ್ ಒಂದನ್ನು ಆರಂಭಿಸಿದೆ. ಆ ಮೂಲಕ ಕಠಿಣವಾದ ಆರೋಗ್ಯ ಸಮಸ್ಯೆಗಳ ಸಂದರ್ಭದಲ್ಲಿ ಶೀಘ್ರ ಅಗತ್ಯ ರಕ್ಷಣಾ ವ್ಯವಸ್ಥೆಗಳನ್ನು ಕಲ್ಪಿಸಿಕೊಡಲು ಮುಂದಾಗಿದೆ ಎಂದು ವರದಿಗಳು ತಿಳಿಸಿವೆ.
ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ರಾಜೇಶ್ ಭೂಷಣ್ ಅವರು ಆರೋಗ್ಯ ಪಥಕ್ಕೆ ಚಾಲನೆ ನೀಡಿದ್ದಾರೆ.
ಕೋವಿಡ್-19 ನಂತಹ ಆರೋಗ್ಯ ಸಂಬಂಧಿ ಕಠಿಣ ಪರಿಸ್ಥಿತಿಯಲ್ಲಿ ಆರೋಗ್ಯ ಸಂರಕ್ಷಣಾ ವಸ್ತುಗಳ ತಯಾರಕರು, ವಿತರಕರು ಮತ್ತು ಗ್ರಾಹಕರಿಗೆ ತುರ್ತು ಸೇವೆ ಒದಗಿಸುವ ನಿಟ್ಟಿನಲ್ಲಿ ಈ ಪೋರ್ಟಲ್ ಅನ್ನು ಆರಂಭ ಮಾಡಲಾಗಿದೆ. ವಿತರಣಾ ಸಂಕೋಲೆಯನ್ನು ಶಕ್ತಿಯುತಗೊಳಿಸುವ ನಿಟ್ಟಿನಲ್ಲಿ, ಯಾವುದೇ ಸಂದರ್ಭದಲ್ಲಾದರೂ ವಸ್ತುಗಳ ತಯಾರಿ ಮತ್ತು ಅವುಗಳನ್ನು ವಿತರಕರು ,ಗ್ರಾಹಕರಿಗೆ ತಲುಪಿಸುವಲ್ಲಿ ಪೂರಕವಾಗಿ ಮತ್ತು ಹೆಚ್ಚು ತ್ವರಿತವಾಗಿ ತಲುಪಿಸುವ ನಿಟ್ಟಿನಲ್ಲಿ ಸಹಾಯವಾಗುವಂತೆ ಆರೋಗ್ಯ ಪಥ ಕಾರ್ಯ ನಿರ್ವಹಿಸುತ್ತದೆ.
ಆರೋಗ್ಯವಂತ ಜೀವನವನ್ನು ಕಲ್ಪಿಸುವ ನಿಟ್ಟಿನಲ್ಲಿ ಹೊಸತೊಂದು ದಾರಿಯನ್ನು ಜನರಿಗೆ ತೋರಿಸಿಕೊಡುವ ಉದ್ದೇಶದೊಂದಿಗೆ, ಧ್ಯೇಯದೊಂದಿಗೆ ಆರೋಗ್ಯಪಥ ಕಾರ್ಯನಿರ್ವಹಿಸಲಿದೆ.
ಸರ್ವೋದಯ ಇನ್ಫೋಟೆಕ್ ಮತ್ತು ಇನ್ಟಿಟ್ಯೂಷನಲ್ ಯೂಸರ್ಸ್ ಆಂಡ್ ಮ್ಯಾನ್ಯುಫ್ಯಾಕ್ಚರ್ಸ್ / ಅಥಾರೈಸ್ಡ್ ಸಪ್ಲೈ ಯರ್ಸ್ ಆಫ್ ಹೆಲ್ತ್ಕೇರ್ ಸಂಸ್ಥೆಗಳು ಜಂಟಿಯಾಗಿ ಈ ಪೋರ್ಟಲ್ ಅನ್ನು ಅಭಿವೃದ್ಧಿ ಮಾಡಿವೆ. ಇದೊಂದು ಸಾರ್ವಜನಿಕ ಅವಕಾಶವಾಗಿದ್ದು, ಇಲ್ಲಿ ಗ್ರಾಹಕರು ಆರೋಗ್ಯ ಸಂಬಂಧಿತ ಅನೇಕ ವಿಚಾರಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ವಿತರಕರು, ಉತ್ತಮ ಗುಣಮಟ್ಟದ ಆರೋಗ್ಯ ಸಂಬಂಧಿತ ವಸ್ತುಗಳು, ಬೆಲೆ ಸೇರಿದಂತೆ ಇನ್ನಿತರ ಮಾಹಿತಿಗಳ ಅರಿವನ್ನೂ ಈ ಪೋರ್ಟಲ್ ಗ್ರಾಹಕರಿಗೆ ನೀಡಲಿದೆ. ಅಲ್ಲದೆ ದೂರದೂರದ ಗ್ರಾಹಕರ ಜೊತೆಗೆ ವಿತರಕರಿಗೆ ಸಂಪರ್ಕವೇರ್ಪಡುವ ಅವಕಾಶವನ್ನೂ ಆರೋಗ್ಯ ಪಥ ಮಾಡಿಕೊಡುತ್ತದೆ.
ಪ್ರಯೋಗಾಲಯಗಳು, ಆಸ್ಪತ್ರೆಗಳು, ಔಷಧ ಅಂಗಡಿಗಳ ಮಾಹಿತಿಯನ್ನು ಈ ಪೋರ್ಟಲ್ ನೀಡಲಿದೆ. ಅಲ್ಲದೆ ವ್ಯಾಪಾರ ವಹಿವಾಟುಗಳ ವಿಸ್ತರಣೆಗೂ ಇಲ್ಲಿ ಅವಕಾಶ ದೊರೆಯುವುದಾಗಿ ಇದನ್ನು ಅಭಿವೃದ್ಧಿ ಮಾಡಿರುವ ಸಂಸ್ಥೆಗಳು ತಿಳಿಸಿವೆ.
ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇರುವ ಕೊರತೆಗಳನ್ನು ನೀಗಿಸುವ ಸಲುವಾಗಿಯೂ ಈ ಪೋರ್ಟಲ್ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ಅಲ್ಲದೆ ವಿನಾ ಕಾರಣ ವ್ಯಯವಾಗುವ ಸಂಪನ್ಮೂಲಗಳ ಸದ್ಬಳಕೆಗೂ ಪೂರಕವಾಗುವಂತೆ ಇದು ಕಾರ್ಯ ನಿರ್ವಹಿಸಲಿದೆ. ಹೊಸ ತಂತ್ರಜ್ಞಾನದ ಕುರಿತು ಮಾಹಿತಿಯನ್ನೂ ನಾವು ಇಲ್ಲಿ ಪಡೆದುಕೊಳ್ಳುವುದು ಸಾಧ್ಯ.
ಈ ಬಗ್ಗೆ ಮಾಹಿತಿ ನೀಡಿರುವ ಸಿಎಸ್ಐಆರ್, ಮುಂದಿನ ದಿನಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಮಾಹಿತಿ ಒದಗಿಸುವ ಭಾರತದ ಅತೀ ದೊಡ್ಡ ಫ್ಲ್ಯಾಟ್ಫಾರ್ಮ್ ಆಗಿ ಆರೋಗ್ಯಪಥ ಕಾರ್ಯ ನಿರ್ವಹಿಸುವ ಭರವಸೆಯನ್ನು ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.