ನವದೆಹಲಿ: ಎರಡು ತಿಂಗಳ ರಾಷ್ಟ್ರವ್ಯಾಪಿ ಲಾಕ್ಡೌನ್ ಸಡಿಲಿಕೆಯ ಬಳಿಕ ಇತ್ತೀಚಿನ ದಿನಗಳಲ್ಲಿ ಆತಂಕಕಾರಿಯಾದ ರೀತಿಯಲ್ಲಿ ಭಾರತದಲ್ಲಿ ಕೊರೋನಾವೈರಸ್ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಪರಿಸ್ಥಿತಿ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಮುಂದಿನ ವಾರ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಆನ್ಲೈನ್ ಸಭೆ ಜೂನ್ 16 ಮತ್ತು 17 ರಂದು ನಡೆಯಲಿದೆ.
ಕೊರೋನಾವೈರಸ್ ಬಿಕ್ಕಟ್ಟಿನ ಕುರಿತು ಪ್ರಧಾನಿ ಮತ್ತು ಮುಖ್ಯಮಂತ್ರಿಗಳ ನಡುವಿನ ಆರನೇ ಸಭೆ ಇದಾಗಲಿದೆ. ಕೊನೆಯ ಸಭೆ ಮೇ 12 ರಂದು ನಡೆದಿದ್ದು. 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಜೂನ್ 16ರಂದು ಸಭೆ ನಿಗದಿಯಾಗಿದ್ದರೆ, 15 ಹೆಚ್ಚು ಹಾನಿಗೊಳಗಾದ ರಾಜ್ಯಗಳೊಂದಿಗೆ ಜೂನ್ 17 ರಂದು ಸಭೆ ನಡೆಯಲಿದೆ.
ಭಾರತವು ಶುಕ್ರವಾರ ಕೊರೋನಾವೈರಸ್ ಪ್ರಕರಣಗಳ ದಾಖಲೆಯ ಮಟ್ಟದ ಹೆಚ್ಚಳವನ್ನು ಕಂಡಿದೆ, ಈ ವಾರ ಪ್ರತಿದಿನ ಸುಮಾರು 10,000ರಂತೆ ಹೊಸ ಪ್ರಕರಣಗಳು ದಾಖಲಾಗಿವೆ. ಘೋಷಿತ ಸೋಂಕುಗಳು ಈಗ 3 ಲಕ್ಷಕ್ಕೂ ಹೆಚ್ಚಾಗಿದೆ. ಇದು ವಿಶ್ವದ ನಾಲ್ಕನೇ ಅತಿ ಹೆಚ್ಚು ಆಗಿದೆ. ಅಧಿಕೃತವಾಗಿ ಸುಮಾರು 8,500 ಕರೋನವೈರಸ್ ಸಾವುಗಳು ಸಂಭವಿಸಿವೆ.
ಸುಮಾರು 70 ದಿನಗಳ ಲಾಕ್ಡೌನ್ ನಂತರ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ಒತ್ತಡದಲ್ಲಿದ್ದ ಸರ್ಕಾರ, ಈ ವಾರ ಹೆಚ್ಚಿನ ಸಾರ್ವಜನಿಕ ಸಾರಿಗೆ, ಕಚೇರಿಗಳು ಮತ್ತು ಮಾಲ್ಗಳನ್ನು ತೆರೆಯಲು ಅನುಮತಿಯನ್ನು ನೀಡಿತು.
ದೆಹಲಿ, ಮುಂಬೈ ಮತ್ತು ಚೆನ್ನೈನಲ್ಲಿ ಹೊಸ ಸೋಂಕು ಪ್ರಕರಣಗಳು ಹೆಚ್ಚಾಗಿದೆ.
PM @narendramodi will interact with state Chief Ministers on the 16th and 17th. pic.twitter.com/RWGeanxgHd
— PMO India (@PMOIndia) June 12, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.