ನವದೆಹಲಿ: ಶೂನ್ಯ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ರಿಟರ್ನ್ ಫೈಲಿಂಗ್ ಮತ್ತು ಜುಲೈ 2017 ಮತ್ತು ಜನವರಿ 2020 ರ ನಡುವೆ ರಿಟರ್ನ್ಸ್ ಸಲ್ಲಿಸದ ನೋಂದಾಯಿತ ಘಟಕಗಳಿಗೆ ಯಾವುದೇ ವಿಳಂಬ ಶುಲ್ಕವನ್ನು ವಿಧಿಸಲಾಗುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಶುಕ್ರವಾರ ತಿಳಿಸಿದ್ದಾರೆ.
“ಕೋವಿಡ್ ಅವಧಿಗೂ ಮುಂಚಿನ ಜುಲೈ 2017 ರಿಂದ ಜನವರಿ 2020 ರವರೆಗಿನ ಅವಧಿಗೆ, ಸಾಕಷ್ಟು ರಿಟರ್ನ್ ಫೈಲಿಂಗ್ ಬಾಕಿ ಉಳಿದಿದೆ. ಟ್ಯಾಕ್ಸ್ ಲಿಯಾಬಿಲಿಟಿ (ತೆರಿಗೆ ಬಾಧ್ಯತೆ) ಇಲ್ಲದವರಿಗೆ ಮತ್ತು ಜುಲೈ 2017 ರಿಂದ ಜನವರಿ 2020ರ ನಡುವೆ ರಿಟರ್ನ್ಸ್ ಸಲ್ಲಿಸದ ಯಾರಿಗೂ ವಿಳಂಬ ಶುಲ್ಕವಿರುವುದಿಲ್ಲ ”ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
“ಟ್ಯಾಕ್ಸ್ ಲಿಯಾಬಿಲಿಟಿ ಹೊಂದಿರುವವರಿಗೆ, ಜುಲೈ 2017ರಿಂದ ಜನವರಿ 2020 ರವರೆಗೆ ಜಿಎಸ್‌ಟಿಆರ್ -3 ಬಿ ರಿಟರ್ನ್ಸ್ ಸಲ್ಲಿಸದಿರುವ ಗರಿಷ್ಠ ವಿಳಂಬ ಶುಲ್ಕವನ್ನು 500 ರೂ.ಗಳಿಗೆ ಇಡಲಾಗಿದೆ. ಇದು ಜುಲೈ 1, 2020ರಿಂದ ಸೆಪ್ಟೆಂಬರ್ 30, 2020ರ ಸಮಯದಲ್ಲಿ ಸಲ್ಲಿಸಿದ ಎಲ್ಲಾ ಆದಾಯ ತೆರಿಗೆಗಳಿಗೂ ಇದು ಅನ್ವಯಿಸುತ್ತದೆ” ಎಂದು ಸೀತಾರಾಮನ್ ಹೇಳಿದರು.
5 ಕೋಟಿ ರೂಪಾಯಿಗಳ ವಹಿವಾಟು ಹೊಂದಿರುವ ಸಣ್ಣ ತೆರಿಗೆದಾರರು ಈಗ ಜುಲೈ 30 ರ ನಂತರ ಫೆಬ್ರವರಿ-ಏಪ್ರಿಲ್ 2020 ಕ್ಕೆ ಸಲ್ಲಿಸಿದ ರಿಟರ್ನ್‌ಗಳಿಗೆ 18% ರಿಂದ 9% ರಷ್ಟು ಕಡಿಮೆ ಬಡ್ಡಿದರವನ್ನು ಪಾವತಿಸಲಿದ್ದಾರೆ ಎಂದು ಸಚಿವರು ಪ್ರಕಟಿಸಿದರು.
ಅವರು ಮೇ ನಿಂದ ಜುಲೈ ವರೆಗೆ ಸೆಪ್ಟೆಂಬರ್ 2020 ರವರೆಗೆ ರಿಟರ್ನ್ಸ್ ಸಲ್ಲಿಸಬಹುದು ಮತ್ತು ಅವರಿಗೆ ವಿಳಂಬ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಅವರು ಹೇಳಿದರು.
ಕೊರೋನವೈರಸ್ ಕಾಯಿಲೆ ಹರಡುವುದನ್ನು ತಡೆಗಟ್ಟಲು ಲಾಕ್‌ಡೌನ್ ಮಾಡಿದ ನಂತರ ಮೊದಲ ಬಾರಿಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆದ 40 ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.