ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಪೊಲೀಸರು ಗುರುವಾರ ಪಾಕಿಸ್ಥಾನ ಪ್ರಾಯೋಜಿತ ಲಷ್ಕರ್-ಎ-ತೋಯ್ಬಾ ಉಗ್ರ ಸಂಘಟನೆಯ ನಾರ್ಕೋಟಿಕ್-ಟೆರರ್ ಮಾಡ್ಯೂಲ್ ಅನ್ನು ಹಂದ್ವಾರ ಜಿಲ್ಲೆಯಲ್ಲಿ ಪತ್ತೆ ಹಚ್ಚಿದ್ದಾರೆ ಮತ್ತು ಗುಂಪಿನ ಮೂವರು ಭಯೋತ್ಪಾದಕ ಸಹಚರರನ್ನು ಬಂಧಿಸಿದ್ದಾರೆ.
ವರದಿಗಳ ಪ್ರಕಾರ, ಹಂದ್ವಾರ ಪೊಲೀಸರ ತಂಡವು ಮನೆಯೊಂದರ ಮೇಲೆ ದಾಳಿ ನಡೆಸಿ ಅಬ್ದುಲ್ ಮೂಮಿನ್ ಪೀರ್, ಇಸ್ಲಾಂ ಉಲ್ ಹಕ್ ಪೀರ್ ಮತ್ತು ಸೈಯದ್ ಇಫ್ತಿಕಾರ್ ಇಂದ್ರಾಬಿ ಎಂಬುವವರನ್ನು ಬಂಧಿಸಿದೆ ಮತ್ತು 21 ಕಿಲೋಗ್ರಾಂಗಳಷ್ಟು ಹೆರಾಯಿನ್ ಮಾದಕ ದ್ರವ್ಯ, 1.34 ಕೋಟಿ ರೂಪಾಯಿ ನಗದು ಮತ್ತು ಒಂದು ಕರೆನ್ಸಿ ಎಣಿಸುವ ಯಂತ್ರವನ್ನು ಸ್ಥಳದಿಂದ ವಶಪಡಿಸಿಕೊಂಡಿದೆ.
ಪೊಲೀಸ್ ವಕ್ತಾರರ ಪ್ರಕಾರ, ಬಂಧಿತ ಪುರುಷರೊಂದಿಗೆ ಇದ್ದ ಇನ್ನೂ ಕೆಲವರು ಪರಾರಿಯಾಗಿದ್ದಾರೆ ಮತ್ತು ಅವರನ್ನು ಹಿಡಿಯಲು ಶೋಧ ಕಾರ್ಯ ನಡೆಯುತ್ತಿದೆ.
ಮಾಡ್ಯೂಲ್ ಪಾಕಿಸ್ಥಾನದ ಕೆಲವು ಹ್ಯಾಂಡ್ಲರ್ಗಳೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದೆ ಮತ್ತು ಭಾರತದ ವಿವಿಧ ಭಾಗಗಳಿಗೆ ಮಾದಕ ದ್ರವ್ಯಗಳನ್ನು ಪೂರೈಸುತ್ತಿದೆ ಮತ್ತು ಎಲ್ಇಟಿಗೆ ಆರ್ಥಿಕ ನೆರವು ನೀಡುತ್ತಿದೆ ಎಂದು ವಕ್ತಾರರು ತಿಳಿಸಿದ್ದಾರೆ.
“ಕಣಿವೆಯಲ್ಲಿ ಉಗ್ರ ಚಟುವಟಿಕೆಗಳನ್ನು ಬಲಪಡಿಸಲು ಮಾಡ್ಯೂಲ್ ಎಲ್ಇಟಿಗಾಗು ಕೆಲಸ ಮಾಡುತ್ತಿತ್ತು ಮತ್ತು ಕಣಿವೆಯ ಸ್ಥಳೀಯ ಯುವಕರನ್ನು ಉಗ್ರಗಾಮಿ ಶ್ರೇಣಿಗೆ ಸೇರುವಂತೆ ದಾರಿ ತಪ್ಪಿಸುತ್ತಿತ್ತು ಮತ್ತು ಪ್ರೇರೇಪಿಸುತ್ತಿತ್ತು” ಎಂದು ಹೇಳಿದ್ದಾರೆ.
ವರದಿಯ ಪ್ರಕಾರ, ಹಂದ್ವಾರ ಪೊಲೀಸ್ ಠಾಣೆಯಲ್ಲಿ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
#HandwaraPolice busted #Pakistan Sponsored #Narco–#TerrorModule, #03TerrorAssociates arrested.#21Kgs of #Heroine, 1.34 Crores #hardCash and 01 #CashCounting Machine recovered.@JmuKmrPolice@KashmirPolice @DIGBaramulla https://t.co/X6wYGu9hD6 pic.twitter.com/xcHuHlxATG
— DISTRICT POLICE HANDWARA (@HandwaraP) June 11, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.