ಲಕ್ನೋ: ಮೂರು ವರ್ಷಗಳಲ್ಲಿ 39.53 ಕೋಟಿ ಸಸಿಗಳನ್ನು ನೆಟ್ಟು ದಾಖಲೆ ನಿರ್ಮಿಸಿದ ಯೋಗಿ ಸರ್ಕಾರವು ಇದೀಗ, 2020-21ನೇ ಸಾಲಿನಲ್ಲಿ 30 ಕೋಟಿ ಸಸಿಗಳನ್ನು ನೆಡುವ ಮೂಲಕ ಮತ್ತೊಂದು ದಾಖಲೆ ನಿರ್ಮಿಸಲು ಹೊರಟಿದೆ. ಒಟ್ಟು 30 ಕೋಟಿ ಸಸಿಗಳ ಪೈಕಿ, 25 ಕೋಟಿ ಸಸಿಗಳನ್ನು ಒಂದೇ ದಿನದಲ್ಲಿ ನೆಡಲಾಗುತ್ತದೆ, ಇದು ದಾಖಲೆಯನ್ನು ನಿರ್ಮಾಣ ಮಾಡಲಿದೆ ಎಂದು ವರದಿಗಳು ತಿಳಿಸಿವೆ.
ಇದಕ್ಕೂ ಮೊದಲು 2017, 2018 ಮತ್ತು 2019 ರಲ್ಲಿ ಕ್ರಮವಾಗಿ 5.17, 11.77 ಮತ್ತು 22.59 ಕೋಟಿ ಅಂದರೆ ಒಟ್ಟು 39.53 ಕೋಟಿ ಸಸಿಗಳನ್ನು ನೆಡಲಾಗಿದೆ. 2020-21ರಲ್ಲಿ ಸುಮಾರು 30-35 ಕೋಟಿ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ಗುರಿಯನ್ನು ಹೆಚ್ಚಿಸುವ ಸಾಧ್ಯತೆಯೂ ಇದೆ. ಉದಾಹರಣೆಗೆ, ಈ ವರ್ಷದ ಆರಂಭದಲ್ಲಿ 25 ಕೋಟಿ ಸಸಿಗಳನ್ನು ನೆಡುವ ಗುರಿ ಹೊಂದಲಾಗಿತ್ತು, ಆದರೆ ಮುಖ್ಯಮಂತ್ರಿಯವರ ಉಪಕ್ರಮದ ಮೇರೆಗೆ ಇದನ್ನು 30 ಕೋಟಿಗೆ ಹೆಚ್ಚಿಸಲಾಯಿತು. ಗುರಿಯ ಪ್ರಕಾರ ಸಸಿಗಳನ್ನು ನೆಡುವುದನ್ನು ಮುಂದುವರಿಸಿದರೆ, ಆರು ವರ್ಷಗಳಲ್ಲಿ 134.35 ಕೋಟಿ ಸಸಿಗಳನ್ನು ನೆಟ್ಟಂತಾಗುತ್ತದೆ.
ಹವಾಮಾನ ವಲಯಕ್ಕೆ ಅನುಗುಣವಾಗಿ ಈ ಪ್ರದೇಶದಲ್ಲಿ ವಿವಿಧ ಸಸ್ಯ ಪ್ರಭೇದಗಳನ್ನು ನೆಡುವ ಯೋಜನೆಯನ್ನು ಸರ್ಕಾರ ರೂಪಿಸಿದೆ. ಇದಕ್ಕೆ ಸಂಬಂಧಿಸಿದ ಸೂಚನೆಗಳನ್ನು ಮುಖ್ಯ ಕಾರ್ಯದರ್ಶಿ ಆರ್.ಕೆ.ತಿವಾರಿ ಅವರು 2019 ರ ನವೆಂಬರ್ 21 ರಂದು ಎಲ್ಲಾ ಜಿಲ್ಲಾಧಿಕಾರಿಗಳು, ವಿಭಾಗೀಯ ಅರಣ್ಯ ಅಧಿಕಾರಿ, ವಿಭಾಗೀಯ ನಿರ್ದೇಶಕರು ಮತ್ತು ಮುಖ್ಯ ಅಭಿವೃದ್ಧಿ ಅಧಿಕಾರಿಗಳಿಗೆ ರವಾನಿಸಿದ್ದಾರೆ.
ಕಾನ್ಪುರದ ನಂತರ ಒಂದು ದಿನದಲ್ಲಿ ಗರಿಷ್ಠ ಸಂಖ್ಯೆಯ ಸಸ್ಯಗಳನ್ನು ಲಕ್ನೋದಲ್ಲಿ ನೆಡಲಾಗುತ್ತಿದೆ. ಈ ಎರಡು ವಿಭಾಗಗಳಲ್ಲಿ ಒಂದು ದಿನದಲ್ಲಿ ಎರಡು ಕೋಟಿಗೂ ಹೆಚ್ಚು ಗಿಡಗಳನ್ನು ನೆಡಬೇಕಾಗಿದೆ. ಮೀರತ್, ಸಹರಾನ್ಪುರ, ಅಲಿಗಢ, ಬಸ್ತಿ ಮತ್ತು ಅಜಮ್ಗಢ ವಿಭಾಗಗಳನ್ನು ಹೊರತುಪಡಿಸಿ, ಇತರ ಎಲ್ಲ ವಿಭಾಗಗಳಲ್ಲಿ ಒಂದಕ್ಕಿಂತ ಹೆಚ್ಚು ಕೋಟಿ ಸಸಿಗಳನ್ನು ನೆಡಲು ನಿರ್ಧರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.