ನವದೆಹಲಿ: ಸಕಾರಾತ್ಮಕ ಬೆಳವಣಿಗೆಯೊಂದರಲ್ಲಿ, ಯುಎಸ್ನ ಕ್ರೆಡಿಟ್ ರೇಟಿಂಗ್ ಏಜೆನ್ಸಿ ಫಿಚ್ ರೇಟಿಂಗ್ಸ್ ಬುಧವಾರ ಭಾರತದ ಆರ್ಥಿಕತೆಯು ಮುಂದಿನ ಹಣಕಾಸು ವರ್ಷದಲ್ಲಿ ಶೇ 9.5 ರಷ್ಟು ತೀವ್ರ ಬೆಳವಣಿಗೆಯೊಂದಿಗೆ ಪುಟಿದೇಳುವ ಸಾಧ್ಯತೆಯಿದ್ದು, ಇದು ಆರ್ಥಿಕ ವಲಯದ ಆರೋಗ್ಯ ಮತ್ತಷ್ಟು ಕ್ಷೀಣಿಸುವುದನ್ನು ತಪ್ಪಿಸಲಿದೆ ಎಂದು ಹೇಳಿದೆ.
ವಿಶ್ವದ ಮೂರನೇ ಅತಿದೊಡ್ಡ ಕ್ರೆಡಿಟ್ ರೇಟಿಂಗ್ ಏಜೆನ್ಸಿಯಾದ ಫಿಚ್ ರೇಟಿಂಗ್ಸ್, ಪ್ರಸಕ್ತ ಹಣಕಾಸು ವರ್ಷದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪ್ರಭಾವದಿಂದಾಗಿ ಜಿಡಿಪಿಯಲ್ಲಿ ಶೇಕಡಾ 5 ರಷ್ಟು ಸಂಕುಚಿತಗೊಳ್ಳುವ ಮುನ್ಸೂಚನೆಯನ್ನು ನೀಡಿದೆ ಎಂದು ವರದಿಗಳು ತಿಳಿಸಿವೆ.
“ಸಾಂಕ್ರಾಮಿಕವು ಭಾರತದ ಬೆಳವಣಿಗೆಯ ದೃಷ್ಟಿಕೋನವನ್ನು ತೀವ್ರವಾಗಿ ದುರ್ಬಲಗೊಳಿಸಿದೆ ಮತ್ತು ಹೆಚ್ಚಿನ ಸಾರ್ವಜನಿಕ-ಸಾಲದ ಹೊರೆಯಿಂದ ಸವಾಲುಗಳನ್ನು ಸೃಷ್ಟಿಸಿದೆ” ಎಂದು ಫಿಚ್ ರೇಟಿಂಗ್ಸ್ ಬುಧವಾರ ಬಿಡುಗಡೆ ಮಾಡಿದ ಎಪಿಎಸಿ ಸಾವರಿನ್ ಕ್ರೆಡಿಟ್ ಒವರ್ವ್ಯೂವ್ ಹೇಳಿದೆ.
ಜಾಗತಿಕ ಬಿಕ್ಕಟ್ಟಿನ ನಂತರ, ಭಾರತದ ಜಿಡಿಪಿ ಬೆಳವಣಿಗೆಯು ‘ಬಿಬಿಬಿ’ ವರ್ಗದ ರಾಷ್ಟ್ರಗಳಿಗಿಂತ ಹೆಚ್ಚಿನ ಮಟ್ಟಕ್ಕೆ ಮರಳುವ ಸಾಧ್ಯತೆಯಿದೆ, ಇದು ಸಾಂಕ್ರಾಮಿಕ ರೋಗದ ಪರಿಣಾಮವಾಗಿ ಆರ್ಥಿಕ ವಲಯದ ಆರೋಗ್ಯ ಮತ್ತಷ್ಟು ಕ್ಷೀಣಿಸುವುದನ್ನು ತಪ್ಪಿಸುತ್ತದೆ” ಎಂದು ರೇಟಿಂಗ್ ಏಜೆನ್ಸಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.