ನವದೆಹಲಿ: ಗಿರ್ ಸಿಂಹಗಳಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರು ಶುಭ ಸುದ್ದಿಯನ್ನು ಟ್ವಿಟರ್ ಮೂಲಕ ಘೋಷಿಸಿದ್ದಾರೆ. ಗಿರ್ ಕಾಡಿನಲ್ಲಿ ಏಷ್ಯಾಟಿಕ್ ಸಿಂಹಗಳ ಜನಸಂಖ್ಯೆ ಹೆಚ್ಚಾಗಿದೆ ಮತ್ತು ಅವುಗಳ ಹರಡುವಿಕೆಯ ಪ್ರದೇಶವೂ ಹೆಚ್ಚಾಗಿದೆ ಎಂದು ಘೋಷಿಸಿದ್ದಾರೆ.
“ಗುಜರಾತ್ನ ಗಿರ್ ಫಾರೆಸ್ಟ್ನಲ್ಲಿ ವಾಸಿಸುತ್ತಿರುವ ಅನನ್ಯ ಏಷ್ಯಾಟಿಕ್ ಸಿಂಹದ ಜನಸಂಖ್ಯೆಯು ಸುಮಾರು 29% ರಷ್ಟು ಹೆಚ್ಚಾಗಿದೆ. ಭೌಗೋಳಿಕವಾಗಿ, ಅವುಗಳ ಹರಡುವಿಕೆಯ ಪ್ರದೇಶವೂ 36% ಹೆಚ್ಚಾಗಿದೆ” ಎಂದು ಅವರು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಮೋದಿ ವಿಷಯವನ್ನು ಹಂಚಿಕೊಂಡಿದ್ದಾರೆ.
ಗಿರ್ ಅರಣ್ಯವು ಪ್ರಧಾನಿ ಮೋದಿಯವರ ತವರು ರಾಜ್ಯವಾದ ಗುಜರಾತ್ನಲ್ಲಿದೆ. ಇದು ವಿಶ್ವದ ಏಷ್ಯಾಟಿಕೆ ಸಿಂಹದ ಪ್ರಮುಖ ವಾಸಸ್ಥಾನವಾಗಿದೆ. ಗಿರ್ ಅರಣ್ಯ ಪ್ರದೇಶದಲ್ಲಿ ಏಷ್ಯಾಟಿಕ್ ಸಿಂಹಗಳ ಸಂಖ್ಯೆ ಸುಮಾರು 29 ರಷ್ಟು ಹೆಚ್ಚಳಗೊಂಡು 674 ಕ್ಕೆ ತಲುಪಿದೆ ಎಂದು ಗುಜರಾತ್ ಅರಣ್ಯ ಇಲಾಖೆ ತಿಳಿಸಿದೆ.
ಒಂದು ಕಾಲದಲ್ಲಿ ಅಳಿವಿನಂಚಿನಲ್ಲಿದ್ದ ಈ ವಿಶೇಷ ಜಾತಿಯ ಸಿಂಹಗಳ ಸಂಖ್ಯೆಯನ್ನು ಸುಧಾರಣೆಗೊಳಿಸಲು ಸಹಾಯ ಮಾಡಿದ ಗುಜರಾತ್ ಜನರಿಗೆ ಮತ್ತು ಇತರರಿಗೆ ಮೋದಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. “ಗುಜರಾತ್ ಜನರಿಗೆ ಅಭಿನಂದನೆ ಮತ್ತು ಅವರ ಪ್ರಯತ್ನಗಳು ಈ ಅತ್ಯುತ್ತಮ ಸಾಧನೆಗೆ ಕಾರಣವಾಗಿದೆ” ಎಂದು ಅವರು ಗಿರ್ ಸಿಂಹಗಳ ನಾಲ್ಕು ಫೋಟೋಗಳೊಂದಿಗೆ ಮೋದಿ ಟ್ವಿಟ್ ಮಾಡಿದ್ದಾರೆ.
Two very good news:
Population of the majestic Asiatic Lion, living in Gujarat’s Gir Forest, is up by almost 29%.
Geographically, distribution area is up by 36%.
Kudos to the people of Gujarat and all those whose efforts have led to this excellent feat.https://t.co/vUKngxOCa7 pic.twitter.com/TEIT2424vF
— Narendra Modi (@narendramodi) June 10, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.