ಇಸ್ಲಾಮಾಬಾದ್: ಕೊರೋನವೈರಸ್ನ ಮಾರಣಾಂತಿಕ ಹರಡುವಿಕೆಯ ವಿರುದ್ಧ ಜಗತ್ತು ಹೋರಾಟವನ್ನು ಮುಂದುವರಿಸುತ್ತಿದ್ದರೆ, ವೈರಸ್ ಪೀಡಿತ ಮೂರನೇ ಅಪಾಯಕಾರಿ ರಾಷ್ಟ್ರವಾಗಿ ಪಾಕಿಸ್ಥಾನ ಹೊರಹೊಮ್ಮಿದೆ ಎಂಬುದಾಗಿ ಅಧ್ಯಯನವೊಂದು ಬಹಿರಂಗಪಡಿಸಿದೆ ಎಂದು ವರದಿಗಳು ತಿಳಿಸಿವೆ.
ಡೀಪ್ ನಾಲೆಡ್ಜ್ ಗ್ರೂಸ್ನ ವಿವರವಾದ ವರದಿಯು ಈ ಮಾಹಿತಿಯನ್ನು ನೀಡಿದೆ. ಸಾಂಕ್ರಾಮಿಕ ರೋಗಗಳ ವಿರುದ್ಧ ರಾಷ್ಟ್ರಗಳು ಮತ್ತು ಅವುಗಳ ಸುರಕ್ಷತಾ ಸಾಮರ್ಥ್ಯವನ್ನು ಈ ವರದಿಯು ಕೇಂದ್ರೀಕರಿಸಿದೆ. ಕನಿಷ್ಠ 200 ರಾಷ್ಟ್ರಗಳನ್ನು ಇದು ವಿಶ್ಲೇಷಿಸಿದೆ ಮತ್ತು ಸ್ಥಾನಗಳನ್ನು ನೀಡಿದೆ.
ಪಾಕಿಸ್ಥಾನದ ಶ್ರೇಯಾಂಕವು ಒಟ್ಟು 200 ರಾಷ್ಟ್ರಗಳಲ್ಲಿ 148 ನೇ ಸ್ಥಾನದಲ್ಲಿದೆ, ಸುರಕ್ಷತಾ ಸ್ಕೋರ್ 370, ಗರಿಷ್ಠ 752, ಇದು ಕೊರೋನವೈರಸ್ಗೆ ಮೂರನೇ ಅಪಾಯಕಾರಿ ದೇಶವಾಗಿದೆ. 250 ಪುಟಗಳ ಅಧ್ಯಯನವು ಸ್ವಿಟ್ಜರ್ಲೆಂಡ್ ಅನ್ನು ಸುರಕ್ಷಿತ ದೇಶವೆಂದು ಪಟ್ಟಿಮಾಡಿದರೆ, ದಕ್ಷಿಣ ಸುಡಾನ್ 200ನೇ ಸ್ಥಾನದಲ್ಲಿದೆ.
“ಸ್ವಿಟ್ಜರ್ಲ್ಯಾಂಡ್ ಮತ್ತು ಜರ್ಮನಿ ಈ ಹೊಸ ವಿಶೇಷ ಕೇಸ್ ಸ್ಟಡಿ ಅಧ್ಯಯನದಲ್ಲಿ 1 ಮತ್ತು 2 ಸ್ಥಾನಗಳನ್ನು ಸಾಧಿಸಿದೆ. ಏಕೆಂದರೆ ಅದು ಆರ್ಥಿಕತೆಯಲ್ಲಿ ಸ್ಥಿರತೆಯನ್ನು ಹೊಂದಿದ ಮತ್ತು ಲಾಕ್ಡೌನ್ ಹಾಗೂ ಆರ್ಥಿಕ ಸಡಿಲಿಕೆ ಆದೇಶಗಳನ್ನು ಸಡಿಲಗೊಳಿಸಲು ಪ್ರಯತ್ನಿಸುತ್ತಿರುವ ಎಚ್ಚರಿಕೆಯ ಮಾರ್ಗಗಳ ಕಾರಣದಿಂದಾಗಿ ಮತ್ತು ವಿಜ್ಞಾನ ಆಧಾರಿತ ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆಯ ಕಾರಣದಿಂದಾಗಿ”ಎಂದು ಅಧ್ಯಯನ ಹೇಳಿದೆ.
ಪಾಕಿಸ್ಥಾನವನ್ನು ಹೊರತುಪಡಿಸಿ, ಚೀನಾ 717 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ, ಭಾರತ 532 ಅಂಕಗಳೊಂದಿಗೆ 56 ನೇ ಸ್ಥಾನದಲ್ಲಿದೆ, ಇರಾನ್ 505 ಅಂಕಗಳೊಂದಿಗೆ 73 ನೇ ಸ್ಥಾನದಲ್ಲಿದೆ ಮತ್ತು 310 ಅಂಕಗಳೊಂದಿಗೆ ಅಫ್ಘಾನಿಸ್ತಾನ 196 ನೇ ಸ್ಥಾನದಲ್ಲಿದೆ.
ಮೇಲ್ವಿಚಾರಣೆ, ಐಸೋಲೇಷನ್ ದಕ್ಷತೆ, ಸಂಪರ್ಕ ಪತ್ತೆ ಸಾಮರ್ಥ್ಯ, ಆರೋಗ್ಯ ಸಿದ್ಧತೆ ಮತ್ತು ಸರ್ಕಾರದ ದಕ್ಷತೆಯಂತಹ ಅಂಶಗಳನ್ನು ಅಧ್ಯಯನವು ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.