ಬೀಜಿಂಗ್: ಲಡಾಖ್ನ ಗಡಿ ಪ್ರದೇಶದಲ್ಲಿ ಭಾರತಕ್ಕೆ ವಿನಾ ಕಾರಣ ಉಪಟಳ ನೀಡುತ್ತಾ ಬರುತ್ತಿರುವ ಚೀನಾ, ಇದೀಗ ಭಾರತದ ಸೇನೆಯನ್ನು ಹೊಗಳಿದೆ. ಭಾರತದ್ದು ವಿಶ್ವದಲ್ಲೇ ಅತೀ ದೊಡ್ಡ ಮತ್ತು ಹೆಚ್ಚು ಅನುಭವ ಹೊಂದಿರುವ ಪರ್ವತ ಸೇನಾ ದಳ ಎಂಬುದಾಗಿ ಚೀನಾದ ಮಿಲಿಟರಿ ತಜ್ಞರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ ಯುದ್ಧೋಪಕರಣ ತಯಾರಿಕಾ ಸಂಸ್ಥೆಯ ತಜ್ಞ ಹ್ಯುಯಾಂಗ್ ಗ್ಯೂಝಿ ಅವರು ಭಾರತದ ಸೇನೆಯ ಸಾಮರ್ಥ್ಯವನ್ನು ಹೊಗಳಿದ್ದಾರೆ. ಭಾರತದ ಸೇನೆ ಎಂತಹ ಕಠಿಣ ಪ್ರದೇಶಗಳಲ್ಲಿಯೂ, ಯಾವುದೇ ಹವಾಮಾನದ ಸಂದರ್ಭದಲ್ಲಿಯೂ ಶತ್ರುಗಳನ್ನು ಸಮರ್ಥವಾಗಿ ಎದುರಿಸಿ, ಹಿಮ್ಮೆಟ್ಟಿಸುವ ಸಾಮರ್ಥ್ಯ ಹೊಂದಿದೆ ಎಂದು ಅವರು ಹೇಳಿದ್ದಾರೆ.
ಇಂತಹ ತಾಕತ್ತು ಭಾರತದ ಪರ್ವತ ಸೇನಾ ಪಡೆಗೆ ಬಿಟ್ಟರೆ ಬೇರೆ ಯಾವುದೇ ರಾಷ್ಟ್ರಗಳ ಸೈನ್ಯಕ್ಕೆ ಇಲ್ಲ ಎಂಬುದನ್ನು ಗ್ಯೂಝಿ ಅವರು ಮಾಡರ್ನ್ ವೆಪನರೀ ಮ್ಯಾಗಜಿನ್ನಲ್ಲಿ ತಿಳಿಸಿದ್ದಾರೆ. ಇರುವ ಲಭ್ಯತೆಗಳನ್ನೇ ಉಪಯೋಗಿಸಿಕೊಂಡು ಹೆಚ್ಚು ಸಮರ್ಥವಾಗಿ ಕಾರ್ಯ ನಿರ್ವಹಿಸುವ ಶಕ್ತಿಯನ್ನೂ ಭಾರತೀಯ ಸೇನೆ ಹೊಂದಿದೆ ಎಂದು ಅವರು ತಿಳಿಸಿದ್ದಾರೆ. ಇದು ಉಳಿದ ದೇಶಗಳ ಸೇನೆಗಳಿಗೂ ಮಾದರಿ ಎನ್ನಬಹುದು ಎಂದು ಗ್ಯೂಝಿ ಹೇಳಿದ್ದಾರೆ.
ಭಾರತದ ಭೂ ಮತ್ತು ವಾಯು ಸೇನೆಯ ಮುಂದೆ ಅನೇಕ ಕಠಿಣ, ದುರ್ಗಮ ಸವಾಲುಗಳಿದ್ದರೂ ಅದನ್ನು ಸಮರ್ಥವಾಗಿ ಎದುರಿಸುವ ಶಕ್ತಿಯನ್ನು ಅವುಗಳನ್ನು ಹೊಂದಿರುವುದಾಗಿ ಅವರು ಮ್ಯಾಗಝಿನ್ನಲ್ಲಿ ಬರೆದುಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.