ನವದೆಹಲಿ: ನೈಜ ನಿಯಂತ್ರಣ ರೇಖೆ(ಎಲ್ಎಸಿ) ಬಳಿಯ ಗಾಲ್ವಾನ್ ಕಣಿವೆ ಮತ್ತು ಪೂರ್ವ ಲಡಾಖ್ನ ಇತರ ಎರಡು ಪ್ರದೇಶಗಳಲ್ಲಿ ಮಾತುಕತೆ ಮೂಲಕ ಒಂದು ತಿಂಗಳ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳುವ ಇಚ್ಛಾಶಕ್ತಿಯನ್ನು ಚೀನಾ ಮತ್ತು ಭಾರತೀಯ ಪಡೆಗಳು ಪ್ರತಿಬಿಂಬಿಸುತ್ತಿವೆ ಎಂದು ಮಿಲಿಟರಿ ಮೂಲಗಳು ಮಂಗಳವಾರ ತಿಳಿಸಿವೆ.
ಶನಿವಾರ ನಡೆದ ಮೇಜರ್ ಜನರಲ್ ಮತ್ತು ಬ್ರಿಗೇಡಿಯರ್ ಮಟ್ಟದ ಸಭೆಯ ಬಳಿಕ ಈ ಬಗೆಗೆ ಒಮ್ಮತಕ್ಕೆ ಬರಲಾಗಿದ್ದು, ಇಲ್ಲಿಂದ ಸೇನೆಗಳನ್ನು ಉಭಯ ದೇಶಗಳು ಹಿಂದಕ್ಕೆ ಕರೆಸಿಕೊಳ್ಳುತ್ತಿವೆ ಎಂದು ವರದಿಗಳು ತಿಳಿಸಿವೆ.
ಆದರೆ, ಪಾಂಗೊಂಗ್ ತ್ಸೊ ಮತ್ತು ದೌಲತ್ ಬೇಗ್ ಓಲ್ಡಿಯಂತಹ ಪ್ರದೇಶಗಳಲ್ಲಿನ ನಿಲುವಿನಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ವಿವಾದವನ್ನು ಬಗೆಹರಿಸಿ ಸೇನೆಯನ್ನು ವಾಪಾಸ್ ಪಡೆಯುತ್ತಿರುವ ಬಗ್ಗೆ ರಕ್ಷಣಾ ಸಚಿವಾಲಯದಿಂದ ಅಥವಾ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಈ ಅಭಿವೃದ್ಧಿಯ ಬಗ್ಗೆ ಚೀನಾದ ಕಡೆಯಿಂದಲೂ ಯಾವುದೇ ಹೇಳಿಕೆಗಳು ಬಂದಿಲ್ಲ.
ಆದರೆ ಮಿಲಿಟರಿ ಮೂಲಗಳ ಪ್ರಕಾರ, ಭಾರತ ಮತ್ತು ಚೀನಾ ಸೇನೆಗಳು ಕೆಲವೊಂದು ಕಡೆಗಳಿಂದ ತಮ್ಮ ಸೇನೆಗಳನ್ನು ವಾಪಾಸ್ ಪಡೆದಿದೆ ಮತ್ತು ಗಾಲ್ವಾನ್ ಮತ್ತು ಹಾಟ್ ಸ್ಪ್ರಿಂಗ್ ಮತ್ತು ಪ್ಯಾಟ್ರೋಲಿಂಗ್ ಪ್ರದೇಶ ಪಿಪಿ-15ರಿಂದ ತಾತ್ಕಾಲಿಕ ಮೂಲಸೌಕರ್ಯಗಳನ್ನು ತೊಡೆದುಹಾಕುತ್ತಿವೆ ಎನ್ನಲಾಗಿದೆ.
ಬುಧವಾರ ಪರಿಸ್ಥಿತಿಯನ್ನು ಶಾಂತಗೊಳಿಸಲು ಉಭಯ ಸೇನಾ ಪಡೆಗಳ ನಡುವೆ ಮೇಜರ್-ಜನರಲ್ ಮಟ್ಟದ ಸಭೆಗಳು ನಡೆಯಲಿವೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.