ನವದೆಹಲಿ: ಕೋವಿಡ್ -19 ಸಾಂಕ್ರಾಮಿಕದ ಸಂದರ್ಭದಲ್ಲಿ ಪಾರ್ಲೆ-ಜಿ ದೊಡ್ಡ ಮೈಲಿಗಲ್ಲು ಸಾಧಿಸಿದೆ. ದಶಕಗಳಿಂದಲೂ ಮನೆಯ ಬ್ರ್ಯಾಂಡ್, ಜನ ಸಾಮಾನ್ಯನ ಬಿಸ್ಕತ್ತು ಎಂದೂ ಕರೆಯಲ್ಪಡುತ್ತಿರುವ ಪಾರ್ಲೆ-ಜಿಯು ಕೊರೋನವೈರಸ್ ವಿರುದ್ಧ ಹೋರಾಡಲು ವಿಧಿಸಿದ್ದ ಲಾಕ್ ಡೌನ್ ಸಮಯದಲ್ಲಿ ಗರಿಷ್ಠ ಸಂಖ್ಯೆಯ ಬಿಸ್ಕತ್ತುಗಳನ್ನು ಮಾರಾಟ ಮಾಡಿದೆ ಎಂದು ವರದಿಗಳು ತಿಳಿಸಿವೆ.
ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ರಾಷ್ಟ್ರವ್ಯಾಪಿ ಲಾಕ್ಡೌನ್ ಘೋಷಣೆಯಾಗಿತ್ತು, ಈ ಸಂದರ್ಭದಲ್ಲಿ ಪಾರ್ಲೆ-ಜಿ ಬಿಸ್ಕತ್ತುಗಳ ಮಾರಾಟವು ಗಗನಕ್ಕೇರಿದೆ. 80 ವರ್ಷಗಳಲ್ಲೇ ಅತ್ಯುತ್ತಮ ಮಾರಾಟವನ್ನು ಕಾಣುತ್ತಿದೆ.
ಪಾರ್ಲೆ ಉತ್ಪನ್ನಗಳ ನಿರ್ದಿಷ್ಟ ಮಾರಾಟ ಅಂಕಿಅಂಶಗಳನ್ನು ಕಂಪನಿಯು ಹಂಚಿಕೊಂಡಿಲ್ಲ.
ಲಾಕ್ಡೌನ್ ಸಮಯದಲ್ಲಿ ಮಾರುಕಟ್ಟೆಯಲ್ಲಿನ ಇತರ ಬಿಸ್ಕತ್ತುಗಳಿಗಿಂತ ಉತ್ತಮವಾಗಿ ಪಾರ್ಲೆ-ಜಿ ಕಾರ್ಯನಿರ್ವಹಿಸಿದೆ ಎಂಬುದು ಸ್ಪಷ್ಟವಾಗಿದೆ. ಏಕೆಂದರೆ ಇದನ್ನು ಹೆಚ್ಚಿನವರು ಜನಸಾಮಾನ್ಯರಿಗೆ ದಾನವಾಗಿಯೂ ನೀಡಿದ್ದಾರೆ.
“ಹಲವಾರು ರಾಜ್ಯ ಸರ್ಕಾರಗಳು ಬಿಸ್ಕತ್ತುಗಳಿಗಾಗಿ ನಮ್ಮನ್ನು ಸಂಪರ್ಕಿಸಿದ್ದಾರೆ. ಅವರು ನಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು, ನಮ್ಮ ಸ್ಟಾಕ್ಗಳ ಬಗ್ಗೆ ವಿಚಾರಿಸುತ್ತಿದ್ದರು” ಎಂದು ಪಾರ್ಲೆಯ ಹಿರಿಯ ಅಧಿಕಾರಿ ಮಯಾಂಕ್ ಶಾ ಹೇಳಿದ್ದಾರೆ.
ಪಾರ್ಲೆ-ಜಿ, ಮಾರ್ಚ್ 25ರಿಂದ ಹೆಚ್ಚುವರಿ ಉತ್ಪಾದನೆಯನ್ನು ಪುನರಾರಂಭಿಸಿದೆ ಎಂದು ವರದಿಯಾಗಿದೆ. ಲಾಕ್ಡೌನ್ ಸಮಯದಲ್ಲಿ ವಿತರಣೆಯಲ್ಲಿನ ಸವಾಲುಗಳನ್ನು ಅದು ಸಮರ್ಥವಾಗಿ ನಿಭಾಯಿಸಿದೆ.
“ಲಾಕ್ ಡೌನ್ ಸಮಯದಲ್ಲಿ, ಪಾರ್ಲೆ-ಜಿ ಅನೇಕರಿಗೆ ಸುಲಭದ ಆಹಾರವಾಯಿತು ಮತ್ತು ಕೆಲವರಿಗೆ ಅದು ಅವರ ಏಕೈಕ ಆಹಾರವಾಗಿತ್ತು. ಇದು ಸಾಮಾನ್ಯ ಮನುಷ್ಯನ ಬಿಸ್ಕತ್ತು, ಬ್ರೆಡ್ ಪಡೆಯಲು ಸಾಧ್ಯವಾಗದ ಜನರು ಪಾರ್ಲೆ ಖರೀದಿಸಿದರು” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.