ನವದೆಹಲಿ: ಶ್ರೀಲಂಕಾ ಮತ್ತು ಮಾಲ್ಡೀವ್ಸ್ನಿಂದ ಭಾರತೀಯರನ್ನು ಕರೆತಂದ ಬಳಿಕ ಇದೀಗ ಭಾರತೀಯ ನೌಕಾ ಹಡಗು ಇರಾನ್ನಿಂದ ಭಾರತೀಯರನ್ನು ಕರೆತರಲು ಸಜ್ಜಾಗಿದೆ. ಇರಾನ್ಗೆ ಮೊದಲ ಹಂತದ ಆಪರೇಷನ್ ಸೇತು ಭಾಗವಾಗಿ ಐಎನ್ಎಸ್ ಶಾರ್ದುಲ್ ಇರಾನಿನ ಬಂದರ್ ಅಬ್ಬಾಸ್ ಬಂದರಿನಿಂದ ಗುಜರಾತಿನ ಪೋರಬಂದರ್ಗೆ ಭಾರತೀಯರನ್ನು ಕರೆ ತರಲಿದೆ.
ಇದು ವಂದೇ ಭಾರತ್ ಮಿಷನ್ ಮೂರನೇ ಹಂತವಾಗಿದೆ.
ಐಎನ್ಎಸ್ ಶಾರ್ದುಲ್ನಲ್ಲಿ ಬರುತ್ತಿರುವ 200 ಮಂದಿ ಭಾರತೀಯರು ಗುಜರಾತಿ ಮೀನುಗಾರರು ಆಗಿದ್ದಾರೆ. ಕೆಲವು ಸೀಫೇರರ್ ಮತ್ತು ಕಾರ್ಮಿಕರು ಕೂಡ ಸೇರಿದ್ದಾರೆ. ಟೆಹರಾನ್ನಲ್ಲಿ ಭಾರತೀಯ ಮಿಷನ್ನ 15 ತಂಡಗಳು ಇವೆ. ಬಂದರ್ ಅಬ್ಬಾಸ್ ಮತ್ತು ಝಹೆದನ್ನಲ್ಲಿನ ರಾಯಭಾರಿಗಳು ಇದನ್ನು ಸಮನ್ವಯಗೊಳಿಸಲಿದ್ದಾರೆ.
ಇರಾನಿನ ಕಾರ್ಯಾಚರಣೆಯ 2ನೇ ಹಂತವು ತಮಿಳುನಾಡು ಮತ್ತು ಕೇರಳದ ಮೀನುಗಾರರನ್ನು ವಾಪಸ್ ಕರೆತರಲಿದೆ. ಇರಾನ್ನ ದಕ್ಷಿಣ ಪ್ರಾಂತ್ಯದಲ್ಲಿ ಸಾವಿರಕ್ಕೂ ಅಧಿಕ ಭಾರತೀಯ ಮೀನುಗಾರರು ಇದ್ದಾರೆ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.