ನವದೆಹಲಿ: ಭಾರತದ ಖ್ಯಾತ ಡೈರಿ ಸಂಸ್ಥೆ ಅಮೂಲ್ ಚೀನಾಗೆ ಟಾಂಟ್ ನೀಡಿ ಮಾಡಿದ ʼಎಕ್ಸಿಟ್ ದಿ ಡ್ರ್ಯಾಗನ್ʼ ಪೋಸ್ಟ್ಗಾಗಿ ಅದರ ಅಧಿಕೃತ ಟ್ವಿಟರ್ ಹ್ಯಾಂಡಲ್ ಅನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆದರೆ ಬಳಿಕ ಅದನ್ನು ರಿಸ್ಟೋರ್ ಮಾಡಿದೆ.
ವರದಿಗಳ ಪ್ರಕಾರ, ಚೀನಾ ಮಿಲಿಟರಿ ಭಾರತದ ಭೂಪ್ರದೇಶವನ್ನು ಪ್ರವೇಶಿಸುವ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿ ʼಎಕ್ಸಿಟ್ ದಿ ಡ್ರ್ಯಾಗನ್’ ಎಂದು ಬರೆದಿರುವ ಪೋಸ್ಟ್ ಅನ್ನು ಅಮೂಲ್ ಟ್ವಿಟ್ ಮಾಡಿತ್ತು. ಈ ಟ್ವಿಟ್ಗಾಗಿ ಅದನ್ನು ಸ್ಥಗಿತಗೊಳಿಸಲಾಗಿತ್ತು. ಕೆಲವೇ ಸಮಯದಲ್ಲಿ ಮತ್ತೆ ಸಹಜ ಸ್ಥಿತಿಗೆ ತರಲಾಗಿದೆ.
ಅಮೂಲ್ ಜಾಹೀರಾತಿನಲ್ಲಿ ಡ್ರ್ಯಾಗನ್ ಚಿತ್ರವಿದೆ, ಅದನ್ನು ಅಮೂಲ್ ಬಾಲಕಿ ಹೊರ ಹೋಗಲು ಹೇಳುವಂತೆ ಚಿತ್ರ ಬಿಡಿಸಲಾಗಿದೆ. ಇದಕ್ಕೆ ʼಎಕ್ಸಿಟ್ ದಿ ಡ್ರ್ಯಾಗನ್?ʼ ಎಂದು ತಲೆ ಬರಹ ನೀಡಲಾಗಿದೆ. ಕೆಳಗೆ ಅಮೂಲ್ ಮೇಡ್ ಇನ್ ಇಂಡಿಯಾ ಎಂದು ಬರೆಯಲಾಗಿದೆ.
ಅಮೂಲ್ ಜಾಗತಿಕ ಮತ್ತು ಸ್ಥಳೀಯ ವಿಷಯಗಳ ಸೃಜನಶೀಲತೆಗಳಿಗೆ ಹೆಸರುವಾಸಿಯಾಗಿದೆ. ಅಮೂಲ್ನ ಇತ್ತೀಚಿನ ಸೃಜನಶೀಲ ಚಿತ್ರಗಳು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆತ್ಮನಿರ್ಭರ (ಸ್ವಾವಲಂಬನೆ)ತೆ ಬಗೆಗೆ ಮತ್ತು ಹೆಚ್ಚುತ್ತಿರುವ ಚೀನಾ ವಿರೋಧಿ ಭಾವನೆಗಳ ಮೇಲೆ ಕೇಂದ್ರೀಕರಿಸಿದೆ.
ಅಮೂಲ್ ಸಂಸ್ಥೆಯು ಈ ಬಗ್ಗೆ ಟ್ವಿಟರ್ನಿಂದ ಕಾರಣಗಳನ್ನು ಕೇಳಿದೆ. ಆದರೆ ಇದುವರೆಗೆ ಯಾವುದೇ ಪ್ರತಿಕ್ರಿಯೆಗಳು ಬಂದಿಲ್ಲ ಎಂದು ಅಮೂಲ್ ಮುಖ್ಯಸ್ಥ ಆರ್.ಎಸ್ ಸೋಧಿ ಹೇಳಿದ್ದಾರೆ.
#Amul Topical: About the boycott of Chinese products… pic.twitter.com/ZITa0tOb1h
— Amul.coop (@Amul_Coop) June 3, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.