ನವದೆಹಲಿ: ಭಾರತ-ಚೀನಾ ಸಂಬಂಧಗಳು ಹದಗೆಟ್ಟಿರುವ ಹಿನ್ನಲೆಯಲ್ಲಿ, ಹೆಚ್ಚಿನ ಭಾರತೀಯ ಉದ್ಯಮಿಗಳು ‘ಮೇಡ್ ಇನ್ ಇಂಡಿಯಾ ಉತ್ಪನ್ನಗಳನ್ನು’ ಮಾತ್ರ ಮಾರಾಟ ಮಾಡಲು ಮನಸ್ಸು ಮಾಡಿದ್ದಾರೆ. ಭಾರತದಲ್ಲಿ ಚೀನಾದ ಸರಕುಗಳ ಮಾರಾಟವನ್ನು ನಿಷೇಧ ಮಾಡಬೇಕು ಎಂಬ ಕೂಗು ಕೇಳಿ ಬರುತ್ತಿದೆ.
ಇಂತಹ ಸಂದರ್ಭದಲ್ಲಿ ಚೀನಾಗೆ ಮತ್ತೊಂದು ದೊಡ್ಡ ಹೊಡೆತ ಬಿದ್ದಿದೆ, ಜರ್ಮನಿಯ ಪ್ರಮುಖ ಪಾದರಕ್ಷೆಗಳ ಕಂಪನಿ ಕಾಸಾ ಎವರ್ಜ್ Gmbh ತನ್ನ ಚೀನಾದಲ್ಲಿನ ಉತ್ಪಾದನೆಯ ಘಟಕವನ್ನು ಭಾರತದ ಆಗ್ರಾಕ್ಕೆ ವರ್ಗಾಯಿಸಲು ಒಲವು ತೋರಿಸುತ್ತಿದೆ. ಇದು ಈ ನಗರದಲ್ಲಿ 10,000 ಉದ್ಯೋಗಗಳನ್ನು ಸೃಷ್ಟಿಸುವ ಭರವಸೆ ಇದೆ.
ವಾನ್ ವೆಲ್ಕ್ಸ್ ಎಂಬ ಬ್ರ್ಯಾಂಡ್ನಲ್ಲಿ ಮಾರಾಟವಾಗುವ ಪಾದರಕ್ಷೆಗಳು ಆಗ್ರಾದಲ್ಲಿ ಉತ್ಪಾದನೆಯಾಗುವ ನಿರೀಕ್ಷೆಯಿದೆ, ಇದು ಪಾದರಕ್ಷೆಗಳ ಉದ್ಯಮಕ್ಕೆ ಹೆಸರುವಾಸಿಯಾದ ನಗರದಲ್ಲಿ ಶಾಪ್ ಸ್ಥಾಪಿಸಿದ ಮೊದಲ ಅಂತರರಾಷ್ಟ್ರೀಯ ಬ್ರಾಂಡ್ ಆಗಲಿದೆ.
ಆಗ್ರಾಗೆ ಬರುವ ಯೋಜನೆಯನ್ನು ಅಂತಿಮಗೊಳಿಸಿದರೆ ಕಂಪನಿಗೆ ಭೂಮಿ ಮತ್ತು ಸೌಲಭ್ಯಗಳನ್ನು ಒದಗಿಸುವುದಾಗಿ ಉತ್ತರ ಪ್ರದೇಶ ಸರ್ಕಾರ ಭರವಸೆ ನೀಡಿದೆ ಎಂದು ಎಂಎಸ್ಎಂಇ ಸಚಿವ ಸಿದ್ಧಾರ್ಥ್ ನಾಥ್ ಸಿಂಗ್ ಮತ್ತು ರಾಜ್ಯ ಸಚಿವ ಉದಯಭನ್ ಸಿಂಗ್ ಅವರು ಕಾಸಾ ಎವರ್ಜ್ Gmbh ನಿರ್ದೇಶಕರೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮಗಳಿಗೆ ತಿಳಿಸಿದರು.
ಈ ಕ್ರಮಕ್ಕೆ ಅನುಕೂಲವಾಗುವಂತೆ ಪ್ರಮುಖ ನೀತಿ ಬದಲಾವಣೆಗಳನ್ನು ತರಲು ನಿರ್ಧರಿಸಲಾಗಿದೆ ಮತ್ತು ಈ ನಿಟ್ಟಿನಲ್ಲಿ ಇತ್ತೀಚೆಗೆ ಲಕ್ನೋದಲ್ಲಿ ಉನ್ನತ ಮಟ್ಟದ ಸಭೆಯನ್ನು ಕೂಡ ನಡೆಸಲಾಗಿದೆ.
ಲಭ್ಯವಿರುವ ಮಾಹಿತಿಯ ಪ್ರಕಾರ, ಕಂಪನಿಯು ಆಗ್ರಾದಲ್ಲಿ ಕಾರ್ಖಾನೆ ಸ್ಥಾಪಿಸಲು ಲ್ಯಾಟ್ರಿಕ್ಸ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಲ್ಯಾಟ್ರಿಕ್ಸ್ ಸಿಇಒ ಆಶಿಶ್ ಜೈನ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಅಧ್ಯಕ್ಷ ರಾಜ್ ಕುಮಾರ್ ಜೈನ್ ಅವರು ಇತ್ತೀಚೆಗೆ ಪ್ರಧಾನ ಕಾರ್ಯದರ್ಶಿ ನವನೀತ್ ಸೆಹಗಲ್ ಅವರನ್ನು ಭೇಟಿಯಾಗಿ ಈ ಕ್ರಮದ ನೀಲನಕ್ಷೆಯನ್ನು ಅಂತಿಮಗೊಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಒಂದು ಅಂತಾರಾಷ್ಟ್ರೀಯ ಕಂಪನಿ ಆಗ್ರಾಗೆ ಬಂದರೆ, ಅದು ಹಲವಾರು ಇತರ ಕಂಪನಿಗಳು ನಗರಕ್ಕೆ ಬರಲು ಬಾಗಿಲು ತೆರೆಯುತ್ತದೆ ಮತ್ತು ಈ ಕಂಪನಿಗಳಿಗೆ ಯಶಸ್ವಿಯಾಗಿ ಕಾರ್ಯನಿರ್ವಹಿಸಲು ಬೇಕಾದ ಯಾವುದೇ ಸೌಲಭ್ಯಗಳನ್ನು ಒದಗಿಸಲಾಗುವುದು. ಈ ಹೊಸ ಕಂಪನಿಗಳನ್ನು ಸ್ಥಾಪಿಸುವುದರಿಂದ ಆಗ್ರಾದ ಯುವಕರಿಗೆ ಹೊಸ ಉದ್ಯೋಗಗಳು ಸಿಗುತ್ತವೆ. ಆಗ್ರಾದ ಪಾದರಕ್ಷೆಗಳು ವಿಶ್ವಪ್ರಸಿದ್ಧವಾಗಿದ್ದು, ಈಗ ಅಂತರರಾಷ್ಟ್ರೀಯ ಕಂಪನಿಗಳು ಭಾರತಕ್ಕೆ ಮರಳಲು ಮನಸ್ಸು ಮಾಡುತ್ತಿವೆ ಎಂದು ಸಿಂಗ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.