ನವದೆಹಲಿ: ಕೋವಿಡ್ -19 ಬಿಕ್ಕಟ್ಟಿನ ನಡುವೆ, ಕೇಂದ್ರ ಸರ್ಕಾರ ಗುರುವಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಪರಿಹಾರವಾಗಿ 36,400 ಕೋಟಿ ರೂ.ಗಳನ್ನು 2019ರ ಡಿಸೆಂಬರ್ನಿಂದ 2020ರ ಫೆಬ್ರವರಿವರೆಗಿನ ಅವಧಿಗೆ ಬಿಡುಗಡೆ ಮಾಡಿದೆ ಎಂದು ವರದಿಗಳು ತಿಳಿಸಿವೆ.
ಜಿಎಸ್ಟಿ ಜಾರಿಯಿಂದಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅನುಭವಿಸಿದ ನಷ್ಟವನ್ನು ಸರಿದೂಗಿಸಲು 2019 ರ ಏಪ್ರಿಲ್-ನವೆಂಬರ್ ಅವಧಿಗೆ ಕೇಂದ್ರವು ಈಗಾಗಲೇ 1,15,906 ಕೋಟಿ ರೂಪಾಯಿಗಳನ್ನು ನೀಡಿದೆ.
“ಕೋವಿಡ್-19 ರ ಕಾರಣದಿಂದಾಗಿ ತಮ್ಮ ಸಂಪನ್ಮೂಲಗಳು ತೀವ್ರ ಹೊಡೆತ ಅನುಭವಿಸಿದರೂ ರಾಜ್ಯಸರ್ಕಾರಗಳು ಖರ್ಚನ್ನು ಭರಿಸುತ್ತಿವೆ, ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರವು 2019 ರ ಡಿಸೆಂಬರ್ನಿಂದ 2020 ರ ಫೆಬ್ರವರಿ ಅವಧಿಗೆ ರೂ. 36,400 ಕೋಟಿಗಳನ್ನು ಜಿಎಸ್ಟಿ ಪರಿಹಾರವಾಗಿ ಬಿಡುಗಡೆ ಮಾಡಿದೆ ” ಎಂದು ಹಣಕಾಸು ಸಚಿವಾಲಯ ಗುರುವಾರ ಪ್ರಕಟಣೆಯಲ್ಲಿ ತಿಳಿಸಿದೆ.
“ಏಪ್ರಿಲ್-ನವೆಂಬರ್ 2019 ರ ಅವಧಿಗೆ ರೂ. 1,15,096 ಕೋಟಿಗಳ ಜಿಎಎಸ್ಟಿ ಪರಿಹಾರವನ್ನು ಈಗಾಗಲೇ ಕೇಂದ್ರ ಸರ್ಕಾರವು ರಾಜ್ಯಗಳಿಗೆ / ಯುಟಿಗಳಿಗೆ ಬಿಡುಗಡೆ ಮಾಡಿದೆ” ಎಂದು ಸಚಿವಾಲಯ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.