ನವದೆಹಲಿ: ದೇಶದಾದ್ಯಂತ 14,000 ಆಧಾರ್ ಕೇಂದ್ರಗಳನ್ನು ಮರು ತೆರೆಯಲಾಗಿದೆ ಎಂದು ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ಇಂದು ಪ್ರಕಟಿಸಿದೆ. ಲಾಕ್ ಡೌನ್ ನಿಯಮಗಳನ್ನು ಸಡಿಲಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ. ಹೊಸ ಆಧಾರ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸಲು ಅಥವಾ ಅಸ್ತಿತ್ವದಲ್ಲಿರುವ ಆಧಾರ್ಗಳಿಗೆ ಕೆಲವು ಬದಲಾವಣೆಗಳನ್ನು ಮಾಡಲು ಬಯಸುವವರು ಇನ್ನು ಮುಂದೆ ಆ ಕಾರ್ಯವನ್ನು ಮಾಡಬಹುದಾಗಿದೆ ಎಂದು ವರದಿಗಳು ತಿಳಿಸಿವೆ.
“ಪ್ರಮುಖ ಪ್ರಕಟಣೆ: ಇಂದಿನ ದಿನಾಂಕದಿಂದ ರಾಜ್ಯ ಸರ್ಕಾರಗಳು, ಅಂಚೆ ಕಚೇರಿಗಳು, ಬ್ಯಾಂಕುಗಳು, ಬಿಎಸ್ಎನ್ಎಲ್ಗಳು ನಡೆಸುತ್ತಿರುವ 14,000 ಕ್ಕೂ ಹೆಚ್ಚು ಆಧಾರ್ ಕೇಂದ್ರವು ದೇಶಾದ್ಯಂತ ಕಾರ್ಯನಿರ್ವಹಿಸಲಿದೆ (ವಿವರಗಳು: https://appointments.uidai.gov.in/easearch.aspx). ನಾವು ತ್ವರಿತವಾಗಿ ಕಾರ್ಯಾಚರಣೆಯನ್ನು ಮರುಪ್ರಾರಂಭಿಸಲು ಅನುಮತಿಗಾಗಿ ಸ್ಥಳೀಯ ಆಡಳಿತಗಳೊಂದಿಗೆ ಸಂಪರ್ಕದಲ್ಲಿದ್ದೇವೆ” ಎಂದು ಯುಐಡಿಎಐ ಟ್ವೀಟ್ ಮಾಡಿದೆ.
IMPORTANT ANNOUNCEMENT:
As on date, over 14,000 #AadhaarKendra run by state govts, post offices, banks, BSNL are operational across the country (details: https://t.co/oCJ66DD0fK) We’re in touch with local administrations for permission to restart operations at other centres ASAP.— Aadhaar (@UIDAI) June 4, 2020
ವಿಳಾಸವನ್ನು ನವೀಕರಿಸುವಂತಹ ವಿವಿಧ ಸೇವೆಗಳನ್ನು ಪಡೆಯಲು ಕಾರ್ಡ್ ಹೊಂದಿರುವವರಿಗೆ ಆನ್ಲೈನ್ ಮೂಲಕ ಆಧಾರ್ ಪ್ರಾಧಿಕಾರವು ಅವಕಾಶ ನೀಡುತ್ತದೆ. ಆದರೆ ಹೊಸ ಕಾರ್ಡ್ಗಾಗಿ ಅರ್ಜಿ ಸಲ್ಲಿಸುವಂತಹ ಹಲವಾರು ಸೇವೆಗಳಿಗೆ ವೈಯಕ್ತಿಕವಾಗಿ ಆಧಾರ್ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ.
ಪಾಸ್ಪೋರ್ಟ್ ಸೇವಾ ಕೇಂದ್ರಗಳ ಮಾದರಿಯಲ್ಲಿ ವಿನ್ಯಾಸಗೊಳಿಸಲಾದ ಸುಮಾರು 30 ಆಧಾರ್ ಸೇವಾ ಕೇಂದ್ರಗಳನ್ನು ಯುಐಡಿಎಐ ಭಾರತದ ಹಲವಾರು ಭಾಗಗಳಲ್ಲಿ ನಡೆಸುತ್ತದೆ, ಇದಕ್ಕಾಗಿ ಆನ್ಲೈನ್ನಲ್ಲಿ ಅಪಾಯ್ಮೆಂಟ್ ಅನ್ನು ಕಾಯ್ದಿರಿಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.