
ನವದೆಹಲಿ: ಮೇ 7 ರಿಂದ ಕೇಂದ್ರ ಸರ್ಕಾರವು ʼವಂದೇ ಭಾರತ್ ಮಿಷನ್ʼ ಬೃಹತ್ ಸ್ಥಳಾಂತರ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗಿನಿಂದ 1.07 ಲಕ್ಷಕ್ಕೂ ಹೆಚ್ಚು ಭಾರತೀಯರು ವಿದೇಶದಿಂದ ಸ್ವದೇಶಕ್ಕೆ ಮರಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಗುರುವಾರ ತಿಳಿಸಿದೆ.
ಜೂನ್ 13 ರಂದು ಎರಡನೇ ಹಂತದ ಸ್ಥಳಾಂತರಿಸುವಿಕೆಯು ಪೂರ್ಣಗೊಂಡ ನಂತರ ಮೂರನೇ ಹಂತದ ಕಾರ್ಯಾಚರಣೆಗೆ ಸರ್ಕಾರ ಸಿದ್ಧತೆ ಆರಂಭಿಸಿದೆ ಎಂದು ಅದು ಹೇಳಿದೆ ಎಂದು ವರದಿಗಳು ತಿಳಿಸಿವೆ.
31 ದೇಶಗಳ 337 ಅಂತರರಾಷ್ಟ್ರೀಯ ವಿಮಾನಗಳಲ್ಲಿ ಈ ಹಂತದಲ್ಲಿ ಸುಮಾರು 38,000 ಜನರನ್ನು ವಾಪಸ್ ಕರೆತರುವ ನಿರೀಕ್ಷೆಯಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ತಿಳಿಸಿದ್ದಾರೆ.
ಮೇ 7 ರಿಂದ 15 ರ ವರೆಗಿನ ಕಾರ್ಯಾಚರಣೆಯ ಮೊದಲ ಹಂತದಲ್ಲಿ ಸರ್ಕಾರವು 12 ದೇಶಗಳಿಂದ ಸುಮಾರು 15,000 ಜನರನ್ನು ಸ್ಥಳಾಂತರಿಸಿತು. ಸ್ಥಳಾಂತರಿಸುವ ಕಾರ್ಯಾಚರಣೆಯ ಎರಡನೇ ಹಂತವನ್ನು ಮೇ 17 ರಿಂದ 22 ರವರೆಗೆ ನಿಗದಿಪಡಿಸಲಾಗಿದೆ. ಇದೀಗ ಸರ್ಕಾರ ಇದನ್ನು ಜೂನ್ 13ರವರೆಗೆ ವಿಸ್ತರಿಸಿದೆ.
ವಿದೇಶದಿಂದ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಮರಳಿ ಕರೆತರಲು ಏರ್ ಇಂಡಿಯಾ ಎರಡನೇ ಹಂತದ 103 ವಿಮಾನಗಳನ್ನು ನಿರ್ವಹಿಸಿದೆ ಎಂದು ಶ್ರೀವಾಸ್ತವ ಹೇಳಿದ್ದಾರೆ. ಶ್ರೀಲಂಕಾ ಮತ್ತು ಮಾಲ್ಡೀವ್ಸ್ನಿಂದ ಭಾರತೀಯರನ್ನು ಮರಳಿ ಕರೆತರಲು ಭಾರತೀಯ ನೌಕಾಪಡೆಯು ಸಹಕರಿಸಿದೆ.
“ಮೇ 7 ರಂದು ವಂದೇ ಭಾರತ್ ಮಿಷನ್ ಪ್ರಾರಂಭವಾದ ನಂತರ, ವಿದೇಶಿ ವಿಮಾನಗಳು ಸೇರಿದಂತೆ ಒಟ್ಟು 454 ವಿಮಾನಗಳು ಸಿಲುಕಿ ಹಾಕಿದ ಭಾರತೀಯರನ್ನು ವಾಪಸ್ ಕರೆತಂದಿವೆ. ಇಲ್ಲಿಯವರೆಗೆ 1,07,123 ಭಾರತೀಯರು ಮರಳಿದ್ದಾರೆ” ಎಂದು ಅವರು ಹೇಳಿದ್ದಾರೆ.
ಭಾರತಕ್ಕೆ ಮರಳಿದವರಲ್ಲಿ 17,485 ವಲಸೆ ಕಾರ್ಮಿಕರು, 11,511 ವಿದ್ಯಾರ್ಥಿಗಳು ಮತ್ತು 8,633 ವೃತ್ತಿಪರರು ಸೇರಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


