ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಗುರುವಾರ ಯುಕೆ ಆಯೋಜಿಸಿದ್ದ ಜಾಗತಿಕ ಲಸಿಕೆ ಶೃಂಗಸಭೆಯಲ್ಲಿ ಅಂತರರಾಷ್ಟ್ರೀಯ ಲಸಿಕೆ ಒಕ್ಕೂಟ ಗವಿ (Gavi)ಗೆ ಭಾರತದ ಕೊಡುಗೆಯಾಗಿ 15 ಮಿಲಿಯನ್ ಡಾಲರ್ ನೀಡುವ ವಾಗ್ದಾನ ಮಾಡಿದ್ದಾರೆ.
ಯುನೈಟೆಡ್ ಕಿಂಗ್ಡಮ್ ಪ್ರಧಾನಿ ಬೋರಿಸ್ ಜಾನ್ಸನ್ ಆಯೋಜಿಸಿದ್ದ ಜಾಗತಿಕ ಲಸಿಕೆ ಶೃಂಗಸಭೆಯಲ್ಲಿ ಮೋದಿ ಮಾತನಾಡಿದರು. ಕೊರೋನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಜಾಗತಿಕ ಲಾಕ್ಡೌನ್ ದೃಷ್ಟಿಯಿಂದ ಈ ಶೃಂಗಸಭೆಯನ್ನು ವರ್ಚುವಲ್ ಆಗಿ ನಡೆಸಲಾಯಿತು.
ವರ್ಚುವಲ್ ಶೃಂಗಸಭೆಯಲ್ಲಿ 50 ಕ್ಕೂ ಹೆಚ್ಚು ದೇಶಗಳು, ಉದ್ಯಮ ಮುಖಂಡರು, ಯುಎನ್ ಏಜೆನ್ಸಿಗಳು, ನಾಗರಿಕ ಸಮಾಜ, ಸಚಿವರುಗಳು, ದೇಶದ ನಾಯಕರು ಭಾಗವಹಿಸಿದ್ದರು.
ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಈ ಸವಾಲಿನ ಕಾಲದಲ್ಲಿ ಭಾರತವು ಜಗತ್ತಿನೊಂದಿಗೆ ಒಗ್ಗಟ್ಟಾಗಿ ನಿಂತಿದೆ ಎಂದು ಹೇಳಿದ್ದಾರೆ ಎಂದು ವರದಿಗಳು ತಿಳಿಸಿವೆ.
ಕೋವಿಡ್- 19 ಸಾಂಕ್ರಾಮಿಕ ರೋಗವು ಕೆಲವು ರೀತಿಯಲ್ಲಿ ಜಾಗತಿಕ ಸಹಕಾರದ ಮಿತಿಗಳನ್ನು ಬಹಿರಂಗಪಡಿಸಿದೆ ಮತ್ತು ಇತ್ತೀಚಿನ ಇತಿಹಾಸದಲ್ಲಿ ಮೊದಲ ಬಾರಿಗೆ ಮಾನವ ಜಗತ್ತು ಒಂದೇ ಶತ್ರುವನ್ನು ಎದುರಿಸುತ್ತಿದೆ ಎಂದು ಮೋದಿ ಹೇಳಿದರು.
ಗವಿಯನ್ನು ಉಲ್ಲೇಖಿಸಿದ ಮೋದಿ, ಇದು ಕೇವಲ ಜಾಗತಿಕ ಮೈತ್ರಿ ಮಾತ್ರವಲ್ಲ, ಜಾಗತಿಕ ಒಗ್ಗಟ್ಟಿನ ಸಂಕೇತವಾಗಿದೆ ಮತ್ತು ಇತರರಿಗೆ ಸಹಾಯ ಮಾಡುವ ಮೂಲಕ ನಾವು ನಮಗೆಯೇ ಸಹಾಯ ಮಾಡಬಹುದು ಎಂದು ಹೇಳಿದರು.
ಭಾರತವು ಲಸಿಕೆಗಳನ್ನು ಉತ್ಪಾದಿಸುವ ವಿಶ್ವದ ಅಗ್ರಗಣ್ಯ ರಾಷ್ಟ್ರವಾಗಿದೆ ಮತ್ತು ವಿಶ್ವದ ಸುಮಾರು 60 ಪ್ರತಿಶತದಷ್ಟು ಮಕ್ಕಳ ರೋಗನಿರೋಧಕ ಶಕ್ತಿಗೆ ಕೊಡುಗೆ ನೀಡುತ್ತಿರುವುದು ನಮ್ಮ ಅದೃಷ್ಟ ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.