ಕೊಡಗು: 2018 ರಲ್ಲಿ ಕೊಡಗನ್ನು ನಡುಗಿಸಿದ್ದ ನೆರೆಯಲ್ಲಿ ಅದೆಷ್ಟೋ ಕುಟುಂಬಗಳು ಸೂರು ಕಳೆದುಕೊಳ್ಳುವಂತಾಗಿತ್ತು. ಅಂತಹ ಸಂತ್ರಸ್ತ ಕುಟುಂಬಗಳಿಗೆ ಸರ್ಕಾರ ಇದೀಗ ಸುಸಜ್ಜಿತ ಸೂರು ಒದಗಿಸಿಕೊಟ್ಟಿದೆ. ಪರಿಹಾರ ಮನೆಗಳ ಕೀಲೀ ಕೈಗಳನ್ನು ಇಂದು ಸಂತ್ರಸ್ತ ಕುಟುಂಬಗಳಿಗೆ ಹಸ್ತಾಂತರ ಮಾಡುವ ಮೂಲಕ ಸರ್ಕಾರ ಮನೆಗಳನ್ನು ಬಿಟ್ಟುಕೊಟ್ಟಿದೆ.
ಸೋಮವಾರ ಪೇಟೆಯ ಜಂಬೂರಿನಲ್ಲಿ 383, ಮಡಿಕೇರಿಯಲ್ಲಿ 80 ಮನೆಗಳನ್ನು ಸರ್ಕಾರ ಇಂದು ಸಂತ್ರಸ್ತರಿಗೆ ಹಸ್ತಾಂತರ ಮಾಡಿದೆ. ಜಂಬೂರಿನ ಮನೆ ನಿರ್ಮಿತವಾಗಿರುವ ಪ್ರದೇಶಕ್ಕೆ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಬಡಾವಣೆ ಎಂದು ನಾಮಕರಣವನ್ನೂ ಮಾಡಲಾಗಿದೆ. ಆಧುನಿಕ ಸೌಲಭ್ಯಗಳನ್ನು ಒಳಗೊಂಡಂತೆ ಎರಡು ಬೆಡ್ ರೂಂಗಳನ್ನು ಈ ಮನೆಗಳು ಹೊಂದಿದ್ದು, ಪ್ರತಿ ಮನೆಗೆ 9.85 ಲಕ್ಷ ರೂ. ಗಳನ್ನು ಖರ್ಚು ಮಾಡಲಾಗಿರುವುದಾಗಿಯೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜೊತೆಗೆ ನೆರೆಯಿಂದಾಗಿ ಮನೆ ಕಳೆದುಕೊಂಡಿದ್ದ ಮೊಣ್ಣಂಗೇರಿ, ಮಾದಾಪುರ, ಮಡಿಕೇರಿ, ಸಂಪಾಜೆ, ಸೂರ್ಲಬ್ಬಿ, ಉದಯಗಿರಿ, ಮದೆನಾಡು, ಹಾಲೇರಿ, ಕರ್ಣಂಗೇರಿ, ಕಾಲೂರು ಪ್ರದೇಶದ ನಿವಾಸಿಗಳಿಗೂ ಸರ್ಕಾರದ ವತಿಯಿಂದ ಆಶ್ರಯ ಮನೆಯನ್ನು ವಿತರಣೆ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.