ನವದೆಹಲಿ: ದ್ವಿಪಕ್ಷೀಯ ಕಾರ್ಯತಂತ್ರದ ಸಂಬಂಧಗಳ ವಿಶಾಲ ಚೌಕಟ್ಟನ್ನು ಪರಿಶೀಲಿಸಲು ಮತ್ತು ವ್ಯಾಪಾರ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸುವ ಮಾರ್ಗಗಳನ್ನು ಅನ್ವೇಷಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಇಂದು ಆನ್ಲೈನ್ ಸಮಿಟ್ ನಡೆಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ಸಮಿಟ್ನಲ್ಲಿ, ಲಾಜಿಸ್ಟಿಕ್ಸ್ ಬೆಂಬಲಕ್ಕಾಗಿ ಮಿಲಿಟರಿ ನೆಲೆಗಳಿಗೆ ಪರಸ್ಪರ ಪ್ರವೇಶಕ್ಕೆ ಅನುಮತಿಸುವ ಬಗ್ಗೆ ಉಭಯ ದೇಶಗಳು ಒಂದು ಹೆಗ್ಗುರುತು ಒಪ್ಪಂದವನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ, ಜೊತೆಗೆ ಹಲವಾರು ಇತರ ಒಪ್ಪಂದಗಳಿಗೆ ಅಂತಿಮ ಮುದ್ರೆ ಬೀಳುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೋದಿಯವರು ವಿದೇಶಿ ನಾಯಕರೊಂದಿಗೆ “ದ್ವಿಪಕ್ಷೀಯ ವರ್ಚುವಲ್ ಸಮಿಟ್ʼ ನಡೆಸುತ್ತಿರುವುದು ಇದೇ ಮೊದಲು.
“ವರ್ಚುವಲ್ ಸಮಿಟ್, ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ವೃದ್ಧಿಸುತ್ತಿರುವ ಸಂಬಂಧಗಳ ಹಿನ್ನೆಲೆಯಲ್ಲಿ ಸಂಬಂಧದ ವಿಶಾಲ ಚೌಕಟ್ಟನ್ನು ಪರಿಶೀಲಿಸಲು ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಉಭಯ ನಾಯಕರಿಗೆ ಒಂದು ಅವಕಾಶವಾಗಿದೆ” ಎಂದು ವಿದೇಶಾಂಗ ಸಚಿವಾಲಯ ವ್ಯವಹಾರಗಳು ಹೇಳಿಕೆಯಲ್ಲಿ ತಿಳಿಸಿವೆ.
“ಭಾರತ ಮತ್ತು ಆಸ್ಟ್ರೇಲಿಯಾವು ಅತ್ಯಂತ ಸ್ನೇಹಪರ ಸಂಬಂಧವನ್ನು ಹೊಂದಿವೆ, ಈ ಸಂಬಂಧ ವಿಸ್ತರಿಸುತ್ತಿದೆ ಮತ್ತು ಸ್ಥಿರವಾಗಿ ಬೆಳೆಯುತ್ತಿದೆ” ಎಂದು ಹೇಳಿದೆ.
ಕಳೆದ ಒಂದೂವರೆ ವರ್ಷಗಳಲ್ಲಿ ಬಹುಪಕ್ಷೀಯ ಸಭೆಗಳ ಸಂದರ್ಭದಲ್ಲಿ ಇಬ್ಬರು ಪ್ರಧಾನ ಮಂತ್ರಿಗಳು ನಾಲ್ಕು ಬಾರಿ ಪರಸ್ಪರ ಭೇಟಿಯಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.