ತಿರುವನಂತಪುರ: ಕೊರೋನಾವೈರಸ್ ಬಳಿಕ ಜನರಲ್ಲಿ ಸ್ವಚ್ಛತೆ, ಸ್ವ ರಕ್ಷಣೆಯ ಬಗ್ಗೆ ಹೆಚ್ಚು ಕಾಳಜಿಯ ಅರಿವು ಮೂಡುತ್ತಿದೆ. ಇದೀಗ ಕೇರಳದ ರಿಕ್ಷಾ ಚಾಲಕನೊಬ್ಬ ತನ್ನ ರಿಕ್ಷಾದಲ್ಲಿ ಪ್ರಯಾಣಿಕರಿಗೆ ಕೈ ತೊಳೆಯುವ ವ್ಯವಸ್ಥೆ ಮಾಡಿದ್ದು, ಆಟೋದೊಳಕ್ಕೆ ಬರಬೇಕಾದರೆ ಕೈ ತೊಳೆದುಕೊಂಡು, ಸ್ಯಾನಿಟೈಸರ್ ಬಳಸಿ ಬರುವಂತೆ ಮತ್ತು ಪ್ರಯಾಣ ಮುಂದುವರಿಸುವಂತೆ ಸೂಚಿಸುವ ಮೂಲಕ ಕೊರೋನಾ ಜಾಗೃತಿ ಮೂಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ.
ಈ ವಿಡಿಯೋವನ್ನು ಉದ್ಯಮಿ ಹರ್ಷ ಗೋಯೆಂಕ್ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಶೇರ್ ಮಾಡಿದ್ದು ‘ಕೈ ತೊಳೆಯುವ ಮತ್ತು ಸ್ಯಾನಿಟೈಸರ್ ವ್ಯವಸ್ಥೆ ಯನ್ನು ಒಳಗೊಂಡಿರುವ ಆಟೋ ರಿಕ್ಷಾ’ ಎಂದು ಬರೆಯುವ ಮೂಲಕ , ಈ ಬುದ್ಧಿವಂತ ರಿಕ್ಷಾ ಚಾಲಕನ ಸಮಯೋಚಿತ ಉಪಾಯವನ್ನು ಸಮಾಜಕ್ಕೆ ತಿಳಿಸುವ ಕೆಲಸ ಮಾಡಿದ್ದಾರೆ. ಈ ಟ್ವೀಟ್ ಅನ್ನು ಸುಮಾರು 2200 ಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದು, 500 ಮಂದಿ ರಿಟ್ವೀಟ್ ಮಾಡುವ ಮೂಲಕ ಈ ಚಾಲಕನ ಸಖತ್ ಐಡಿಯಾವನ್ನು ಮತ್ತಷ್ಟು ಪ್ರಚಾರ ನೀಡಿದ್ದಾರೆ.
Auto rickshaw with hand washing and sanitizer facilities #CoronaInnovation @NammaBengaluroo pic.twitter.com/30KBjAGxxG
— Harsh Goenka (@hvgoenka) June 2, 2020
ಈ ವಿಡಿಯೋವನ್ನು ಸಾದಿಕಾಸ್ರೋಡ್ ಅವರು ತಮ್ಮ ಟಿಕ್ಟಾಕ್ ಖಾತೆಯಲ್ಲಿ ಹಾಕಿದ್ದು, ಅದನ್ನು ಹರ್ಷ ಅವರು ತಮ್ಮ ಟ್ವಿಟ್ಟರ್ ಮೂಲಕ ಮತ್ತಷ್ಟು ಜನರಿಗೆ ತಿಳಿಸಿದ್ದಾರೆ.
ಇನ್ನು ಸಮಾಜದಲ್ಲಿ ಕಾಲಕ್ಕನುಗುಣವಾಗಿ ಬದುಕುವ ಹೊಸ ಹೊಸ ಮಾರ್ಗಗಳನ್ನು ಜನರು ಅನುಸರಿಸುತ್ತಾರೆ. ಕಳೆದ ಬಾರಿ ಆಟೋ ಚಾಲಕನೊಬ್ಬ ರಿಕ್ಷಾದಲ್ಲಿ ಸೋಷಿಯಲ್ ಡಿಸ್ಟೆನ್ಸ್ ಕ್ರಮವನ್ನು ಅಳವಡಿಸುವ ಮೂಲಕ ಮಾದರಿಯಾಗಿದ್ದರು. ಇದೀಗ ಕೇರಳದ ಈ ಆಟೋ ಚಾಲಕ ಹ್ಯಾಂಡ್ ವಾಷ್, ಸ್ಯಾನಿಟೈಸರ್ ಬಳಸಿ ಮನಸ್ಸಿದ್ದರೆ ಏನನ್ನೂ ಸಾಧಿಸಬಹುದು ಎಂಬುದನ್ನು ಸಾಬೀತು ಮಾಡಿ ತೋರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.