ನವದೆಹಲಿ: ಒಂದು ಪ್ರಮುಖ ಬೆಳವಣಿಗೆಯಲ್ಲಿ, ಸುಪ್ರೀಂ ಕೋರ್ಟ್ನ ವರ್ಚುವಲ್ ಕೋರ್ಟ್ ಸೋಮವಾರ ಸಂಪೂರ್ಣವಾಗಿ ಕಾಗದರಹಿತವಾಗಿ ಹೊರಹೊಮ್ಮಿದೆ. ನ್ಯಾಯಾಂಗದಲ್ಲಿ ಈ ಬೆಳವಣಿಗೆ ಮೊದಲ ಬಾರಿ ನಡೆದಿದ್ದು, ದಾಖಲೆ ನಿರ್ಮಿಸಿದೆ. ಯಾಕೆಂದರೆ ಇದು ವಾರ್ಷಿಕವಾಗಿ 10 ಬಿಲಿಯನ್ ಕಾಗದದ ಹಾಳೆಗಳನ್ನು ಬಳಸುತ್ತದೆ ಎನ್ನಲಾಗಿದೆ.
ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ, ಹೇಮಂತ್ ಗುಪ್ತಾ ಮತ್ತು ಅಜಯ್ ರಸ್ತೋಗಿ ತಮ್ಮ ಲ್ಯಾಪ್ಟಾಪ್ಗಳೊಂದಿಗೆ ವರ್ಚುವಲ್ ಕೋರ್ಟ್ಗೆ ಕಾಲಿಟ್ಟಿದ್ದಾರೆ, ಅವರ ಟೇಬಲ್ ಮೇಲೆ ಇದ್ದ ಸಾಕಷ್ಟು ಪ್ರಮಾಣದ ಫೈಲ್ಗಳ ಭಂಡಾರ ಈಗ ಕಾಣುತ್ತಿಲ್ಲ.
ನ್ಯಾಯಾಧೀಶರು ತಮ್ಮ ಲ್ಯಾಪ್ಟಾಪ್ಗಳಲ್ಲಿಯೇ ಪ್ರಕರಣಗಳನ್ನು ಆಲಿಸಿದರು, ಹೆಚ್ಚಿನ ವಕೀಲರು ವೀಡಿಯೊ ಲಿಂಕ್ಗಳ ಮೂಲಕ ಸಂಪರ್ಕ ಹೊಂದಿದ್ದಾರೆ. ಅವರಲ್ಲಿ ಹಲವರು ಪೇಪರ್ ಕೇಸ್ ಫೈಲ್ಗಳನ್ನು ಬಳಸುತ್ತಿದ್ದಾರೆ.
ಉನ್ನತ ನ್ಯಾಯಾಲಯದ ವಿಚಾರಣೆಯನ್ನು ಕಾಗದರಹಿತವಾಗಿಸುವ ಮೊದಲ ಕ್ರಮವನ್ನು 2017 ರಲ್ಲಿ ಅಂದಿನ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಜೆ.ಎಸ್. ಖೇಹರ್ ಅವರು ಪ್ರಾರಂಭಿಸಿದರು. ಆದರೂ, ನ್ಯಾಯಾಲಯದ ಕೆಲಸಕ್ಕಾಗಿ ವಿನ್ಯಾಸಗೊಳಿಸಲಾದ ಸಾಫ್ಟ್ವೇರ್ನಲ್ಲಿನ ನ್ಯೂನತೆಗಳನ್ನು ಉಲ್ಲೇಖಿಸಿ, ನ್ಯಾಯಮೂರ್ತಿಗಳು ಆಗಿನ ಬೆಳವಣಿಗೆಯ ಬಗ್ಗೆ ತಮ್ಮ ಅಸಮಾಧಾವನ್ನು ವ್ಯಕ್ತಪಡಿಸಿದ್ದರು.
ಹೊಸ ಸಾಫ್ಟ್ವೇರ್, ನ್ಯಾಯಮೂರ್ತಿಗಳಿಗೆ ವಿಶೇಷ ಪೆನ್ನುಗಳೊಂದಿಗೆ ಕಂಪ್ಯೂಟರ್ ಪರದೆಯಲ್ಲಿ ಟಿಪ್ಪಣಿಗಳನ್ನು ಮಾಡಲು ಅನುಮತಿಸುತ್ತದೆ, ಮತ್ತು ಈ ಟಿಪ್ಪಣಿಗಳನ್ನು ಗೌಪ್ಯವಾಗಿ ಸಂರಕ್ಷಿಸಬಹುದು. ಇದು ಕಾನೂನು ಗುಮಾಸ್ತರ ಟಿಪ್ಪಣಿಗಳು ಮತ್ತು ನ್ಯಾಯಮೂರ್ತಿಗಳ ಟಿಪ್ಪಣಿಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ಸಹ ಅನುಕೂಲ ಒದಗಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.