ನವದೆಹಲಿ: ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಿದೆ ಮತ್ತು ದೇಶದ ಮೊಬೈಲ್ ಉತ್ಪಾದನಾ ಸಾಮರ್ಥ್ಯವು 2019-20ರಲ್ಲಿ ಅಂದಾಜು 33 ಕೋಟಿಗಳಿಗೆ ಏರಿಕೆಯಾಗಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಹೇಳಿದ್ದಾರೆ.
ವಿದ್ಯುನ್ಮಾನ ಉತ್ಪಾದನಾ ಯೋಜನೆಯ ಆರಂಭದ ವೇಳೆ ಮಾತನಾಡಿದ ಅವರು, “ಕೇವಲ ಎರಡು ಫ್ಯಾಕ್ಟರಿಗಳಿಂದ ನಾವು ಈಗ 200 ಫ್ಯಾಕ್ಟರಿಗಳನ್ನು ಹೊಂದಿದ್ದೇವೆ. ಭಾರತದ ವಿದ್ಯುನ್ಮಾನ ಉತ್ಪಾದನೆಯ ಮೌಲ್ಯ 2014ರಲ್ಲಿ ರೂ.1,90,366 ಆಗಿತ್ತು. ಈಗ ಅದು ರೂ.4,58,000 ಆಗಿದೆ. ವಿದ್ಯುನ್ಮಾನದಲ್ಲಿ ಭಾರತದ ಜಾಗತಿಕ ಪಾಲು 2012ರಲ್ಲಿ ಇದ್ದ 1.3% ದಿಂದ 2018ಕ್ಕೆ 3%ಕ್ಕೆ ಏರಿಕೆಯಾಗಿದೆ. ವಿದ್ಯುನ್ಮಾನ ಉತ್ಪಾದನೆಗಳು ರಫ್ತನ್ನು ಮೀರಿದೆ”ಎಂದಿದ್ದಾರೆ.
ಭಾರತದಲ್ಲಿ ಅಭೂತಪೂರ್ವ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ನಿರ್ಮಾಣ ಮಾಡುವಲ್ಲಿ ಕೇಂದ್ರ ಸರಕಾರ ಕಾರ್ಯನಿರತವಾಗಿದೆ ಎಂದು ಅವರು ಹೇಳಿದ್ದಾರೆ.
“2019ರ ವಿದ್ಯುನ್ಮಾನ ರಾಷ್ಟ್ರೀಯ ನೀತಿಯು ಭಾರತವನ್ನು ವಿದ್ಯುನ್ಮಾನ ವ್ಯವಸ್ಥೆಯ ವಿನ್ಯಾಸ ಮತ್ತು ಉತ್ಪಾದನೆಯಲ್ಲಿ ಜಾಗತಿಕ ಕೇಂದ್ರವನ್ನಾಗಿ ಮಾಡುವ ಗುರಿಯನ್ನು ಹೊಂದಿದೆ. ಪ್ರಮುಖ ಬಿಡಿಭಾಗಗಳನ್ನು ಅಭಿವೃದ್ಧಿಪಡಿಸುವಂತೆ ಮತ್ತು ಕೈಗಾರಿಕೆಗಳಿಗೆ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಯೊಡ್ಡುವಂತೆ ಪ್ರೋತ್ಸಾಹಿಸುವುದು ಇದರ ಗುರಿಯಾಗಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.