ವಾಷಿಂಗ್ಟನ್: ಭಾರತದ ಗಡಿ ಪ್ರದೇಶದಲ್ಲಿ ಅತಿಕ್ರಮಣವನ್ನು ನಡೆಸುತ್ತಿರುವ ಚೀನಾ ವಿರುದ್ಧ ಅಮೆರಿಕ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದೆ. ಭಾರತದ ವಿರುದ್ಧ ಚೀನಿ ಅತಿಕ್ರಮಣದ ಬಗ್ಗೆ ಕಾಳಜಿ ಹೊಂದಿರುವುದಾಗಿ ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಫಾರಿನ್ ಅಫೇರ್ಸ್ ಕಮಿಟಿ ಮುಖ್ಯ ಎಲ್ಲಿವೊಟ್ ಇಂಜಲ್ ಹೇಳಿದ್ದಾರೆ.
ಲಡಾಖ್ನ ವಾಸ್ತವ ಗಡಿರೇಖೆ ಸಮೀಪ ಚೀನಾ ನಡೆಸುತ್ತಿರುವ ಅತಿಕ್ರಮಣದ ಬಗ್ಗೆ ಅತೀವ ಕಾಳಜಿ ಇದೆ ಎಂದಿರುವ ಅವರು, ಚೀನಾವು ನಿಯಮಗಳನ್ನು ಪಾಲನೆ ಮಾಡಬೇಕು ಮತ್ತು ಗಡಿ ವಿವಾದಗಳನ್ನು ಇತ್ಯರ್ಥಪಡಿಸಲು ಅದು ರಾಜತಾಂತ್ರಿಕ ಮತ್ತು ಪ್ರಚಲಿತವಿರುವ ಯಾಂತ್ರೀಕರಣಗಳನ್ನು ಬಳಸಿಕೊಳ್ಳಬೇಕು ಎಂದಿದ್ದಾರೆ.
“ಭಾರತ-ಚೀನಾ ಗಡಿಯ ವಾಸ್ತವ ಗಡಿನಿಯಂತ್ರಣ ಪ್ರದೇಶದಲ್ಲಿ ಚೀನಾ ನಡೆಸುತ್ತಿರುವ ಅತಿಕ್ರಮಣದ ಬಗ್ಗೆ ಅತೀವ ಕಾಳಜಿ ಹೊಂದಿದ್ದೇನೆ. ತಾನು ವಿವಾದಗಳನ್ನು ಅಂತರಾಷ್ಟ್ರೀಯ ಕಾನೂನುಗಳ ಮೂಲಕ ಬಗೆಹರಿಸುವ ಬದಲು, ನೆರೆಹೊರೆಯ ರಾಷ್ಟ್ರಗಳನ್ನು ಆಕ್ರಮಣಕಾರಿ ಧೋರಣೆ ಮೂಲಕ ಸದೆಬಡಿಯಲು ಮುಂದಾಗುವ ಬುದ್ಧಿಯನ್ನು ಚೀನಾ ಮತ್ತೊಮ್ಮೆ ತೋರಿಸಿಕೊಟ್ಟಿದೆ” ಎಂದಿದ್ದಾರೆ.
ಚೀನಾದ ಪಡೆಗಳು ಭಾರತದ ಗಡಿ ಪ್ರದೇಶವನ್ನು ಅತಿಕ್ರಮಣ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿಯು ಕೆಲದಿನಗಳಿಂದ ಉದ್ಭವಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.