ನವದೆಹಲಿ: ಭಾರತದಲ್ಲಿ ದಿನದಿಂದ ದಿನಕ್ಕೆ ಚೀನಾ ವಿರೋಧಿ ಭಾವನೆ ಹೆಚ್ಚಾಗುತ್ತಿದೆ. ಕರೋನವೈರಸ್ ಮತ್ತು ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಇವುಗಳು ಭಾರತೀಯರ ಮನಸ್ಸಿನಲ್ಲಿ ಚೀನಾದ ಬಗ್ಗೆ ಆಕ್ರೋಶವನ್ನು ಸೃಷ್ಟಿ ಮಾಡಿದೆ. ದೇಶದಾದ್ಯಂತ ಪ್ರಸ್ತುತ ಚೀನಾ ವಸ್ತುಗಳನ್ನು ನಿಷೇಧ ಮಾಡಬೇಕು ಎಂಬ ಕೂಗು ದೃಢವಾಗಿ ಕೇಳಿಬರುತ್ತಿದೆ. ಕೆಲವರು ತಮ್ಮ ಮೊಬೈಲ್ನಲ್ಲಿ ಅಳವಡಿಸಲಾಗಿರುವ ಚೀನಾ ಆ್ಯಪ್ಗಳನ್ನು ತೆಗೆದುಹಾಕಲು ಆರಂಭಿಸಿದ್ದಾರೆ.
ಇಂತಹ ಸಂದರ್ಭದಲ್ಲಿ ಹೊರತರಲಾಗಿರುವ ‘Remove China Apps’ ಎಂಬ ಆಫ್ ಭಾರೀ ವೈರಲ್ ಆಗಿದೆ. ನಾವು ನಮ್ಮ ಮೊಬೈಲ್ನಲ್ಲಿ ಇನ್ಸ್ಟಾಲ್ ಮಾಡಿಕೊಂಡಿರುವ ಚೀನಾ ಆ್ಯಪ್ಗಳನ್ನು ಗುರುತಿಸಲು ಮತ್ತು ಅದನ್ನು ತೆಗೆದುಹಾಕಲು ಈ ಅಪ್ಲಿಕೇಶನ್ ಸಹಾಯ ಮಾಡುತ್ತದೆ.
ಮೇ 17 ರಂದು ಈ ಆ್ಯಪ್ ಬಿಡುಗಡೆಯಾಗಿದ್ದು, ಕೇವಲ ಹತ್ತೇ ದಿನದಲ್ಲಿ 10 ಲಕ್ಷ ಡೌನ್ಲೋಡ್ಗಳನ್ನು ಕಂಡಿದೆ. ಬಳಕೆದಾರರು ಇದಕ್ಕೆ ಉತ್ತಮ ರೇಟಿಂಗ್ ಅನ್ನು ನೀಡಿದ್ದಾರೆ.
ಈ ಆಪ್ ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿದೆ. ಇದನ್ನು ಇನ್ಸ್ಟಾಲ್ ಮಾಡಿಕೊಂಡರೆ, ನಮ್ಮ ಮೊಬೈಲಿನಲ್ಲಿರುವ ಚೀನಾ ಆ್ಯಪ್ಗಳನ್ನು ಪತ್ತೆ ಮಾಡುತ್ತದೆ ಮತ್ತು ಅಳಿಸಿಹಾಕುತ್ತದೆ.
ಜೈಪುರ ಮೂಲದ ಒನ್ ಟಚ್ ಆಫ್ ಲ್ಯಾಬ್ಸ್ ಕಂಪನಿಯು ಇದನ್ನು ಅಭಿವೃದ್ಧಿಪಡಿಸಿದೆ. ಇದು ಬಳಕೆದಾರರು ಪ್ಲೇಸ್ಟೋರ್ ಅಥವಾ ಇತ್ಯಾದಿ ಕಡೆಗಳಿಂದ ಇನ್ಸ್ಟಾಲ್ ಮಾಡಿಕೊಂಡ ಆ್ಯಪ್ಗಳನ್ನು ಮಾತ್ರ ಗುರುತಿಸುತ್ತದೆ, ಮೊಬೈಲುಗಳಲ್ಲಿ ಮೊದಲೇ ಇನ್ ಸ್ಟಾಲ್ ಆಗಿ ಬರುವ ಆ್ಯಪ್ಗಳನ್ನು ಗುರುತಿಸುವುದಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.