ನವದೆಹಲಿ: ದೇಶದಾದ್ಯಂತ ಪ್ಯಾರಾ ಮಿಲಿಟರಿ ಕ್ಯಾಂಟೀನ್ಗಳನ್ನು ನಡೆಸುವ ಕೇಂದ್ರೀಯ ಪೊಲೀಸ್ ಕಲ್ಯಾಣ ಭಂಡಾರ (ಕೆಪಿಕೆಬಿ)ದಲ್ಲಿ ಇನ್ನು ಮುಂದೆ ವಿದೇಶಿ ವಸ್ತುಗಳು ಲಭ್ಯವಾಗುವುದಿಲ್ಲ. ಮೈಕ್ರೋವೇವ್ ಓವನ್ನಿಂದ ಹಿಡಿದು ಚಪ್ಪಲಿಗಳವರೆಗೆ ಎಲ್ಲಾ ವಿದೇಶಿ ಬ್ರಾಂಡ್ಗಳನ್ನು ಮಾರಾಟ ಮಾಡದಿರಲು ಇದು ನಿರ್ಧರಿಸಿದೆ.
ಜೂನ್ 1 ರಿಂದಲೇ ಸುಮಾರು ಒಂದು ಸಾವಿರ ವಿದೇಶಿ ವಸ್ತುಗಳ ಮಾರಾಟವನ್ನು ಕೈಬಿಡಲಾಗಿದೆ.
ಕೇಂದ್ರ ಗೃಹ ಸಚಿವಾಲಯವು ಕೆಪಿಕೆಬಿಗಳಲ್ಲಿ ಸ್ವದೇಶಿ ವಸ್ತುಗಳು ಮಾತ್ರ ಲಭ್ಯವಾಗಲಿದೆ ಎಂದು ಘೋಷಣೆ ಮಾಡಿದ ತರುವಾಯ ಈ ಬೆಳವಣಿಗೆ ನಡೆದಿದೆ.
1000 ವಿದೇಶಿ ವಸ್ತುಗಳು ಮಾತ್ರವಲ್ಲದೇ, ಸ್ಕೆಚರ್ಸ್, ಫೆರೆರೊ, ರೆಡ್ ಬುಲ್, ವಿಟ್ಟೋರಿ ನಾಕ್ಸ್, ಸಫಿಲೊ (ಪೊಲರೈಡೋ, ಕರೇರಾ)ಗಳನ್ನು ಕೂಡ ಪಟ್ಟಿಯಿಂದ ಕೈಬಿಡಲಾಗಿದೆ. ತಾವು ಕೇಳಿದ ಮಾಹಿತಿಯನ್ನು ನೀಡದ ಇನ್ನಿತರ ಹಲವು ಕಂಪನಿಗಳನ್ನು ಕೂಡ ಕೈಬಿಡಲಾಗಿದೆ.
ಭಾರತವನ್ನು ಸ್ವಾವಲಂಬಿಯಾಗಿ ಮಾಡುವ ನಿಟ್ಟಿನಲ್ಲಿ ಸ್ಥಳೀಯ ಉತ್ಪನ್ನಗಳನ್ನು ಬಳಕೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಕರೆ ನೀಡಿದ್ದಾರೆ. ಇದಕ್ಕೆ ಅನುಗುಣವಾಗಿ ಕೇಂದ್ರ ಗೃಹ ಸಚಿವಾಲಯವು ಪ್ಯಾರಾಮಿಲಿಟರಿ ಕ್ಯಾಂಟೀನುಗಳಲ್ಲಿ ಆಮದು ಆದ ವಸ್ತುಗಳನ್ನು ಮಾರಾಟ ಮಾಡುವುದಿಲ್ಲ ಎಂದು ಘೋಷಣೆ ಮಾಡಿತ್ತು. ಅದರಂತೆ ಇದೀಗ ಸುಮಾರು ಸಾವಿರಕ್ಕೂ ಅಧಿಕ ವಸ್ತುಗಳನ್ನು ಮಾರಾಟದ ಪಟ್ಟಿಯಿಂದ ಕೈಬಿಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.