ನವದೆಹಲಿ: ವಿಶ್ವಸಂಸ್ಥೆ ಭದ್ರತಾ ಮಂಡಳಿ (UNSC) ಯು ಮುಂದಿನ ತಿಂಗಳು ಐದು ಖಾಯಂ ಅಲ್ಲದ ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಸಲು ನಿರ್ಧರಿಸಿದ್ದು, ಭಾರತ ಖಾಯಂ ಅಲ್ಲದ ಸದಸ್ಯನಾಗಿ ಮಂಡಳಿಯನ್ನು ಸೇರ್ಪಡೆಗೊಳ್ಳಲು ಸಜ್ಜಾಗಿದೆ. ಭಾರತವು ಏಷ್ಯಾ ಪೆಸಿಫಿಕ್ ಸ್ಥಾನಕ್ಕೆ ಏಕೈಕ ಸ್ಪರ್ಧಿಯಾಗಿದೆ ಎಂದು ವರದಿಗಳು ತಿಳಿಸಿವೆ.
ವಿಶ್ವಸಂಸ್ಥೆಯ 193 ಸದಸ್ಯರ ಪ್ರಬಲ ಸಾಮಾನ್ಯ ಸಭೆ ಶುಕ್ರವಾರ, ಕೋವಿಡ್-19 ಬೆದರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಪ್ಲೀನರಿ ನಡೆಯದೆ ರಹಸ್ಯ ಮತಪತ್ರಗಳ ಬಳಕೆ ಮೂಲಕ ಚುನಾವಣೆ ನಡೆಸಲು ನಿರ್ಧರಿಸಿದೆ.
ಯುಎನ್ಎಸ್ಸಿಯ ಐದು ಸ್ಥಾನಗಳಿಗೆ ಚುನಾವಣೆಗಳ ಹೊರತಾಗಿ, ಯುಎನ್ನ ಸಾಮಾನ್ಯ ಸಭೆಯು ಆರ್ಥಿಕ ಮತ್ತು ಸಾಮಾಜಿಕ ಮಂಡಳಿಗೆ ಸದಸ್ಯರ ಚುನಾವಣೆಯನ್ನು ಇದೇ ಮಾದರಿಯಲ್ಲಿ ನಡೆಸಲು ನಿರ್ಧರಿಸಿದೆ.
ಈ ಚುನಾವಣೆಯು ಯುಎನ್ಎಸ್ಸಿ ಸದಸ್ಯರ ಉನ್ನತ ಕೋಷ್ಟಕದಲ್ಲಿ 2021-22ರ ಅವಧಿಗೆ ಭಾರತಕ್ಕೆ ಸ್ಥಾನವನ್ನು ನೀಡುತ್ತದೆ. ಇದಕ್ಕಾಗಿ ಭಾರತದ ಉಮೇದುವಾರಿಕೆಯು ಕಳೆದ ವರ್ಷ ಜೂನ್ ತಿಂಗಳಲ್ಲಿ ಚೀನಾ ಮತ್ತು ಪಾಕಿಸ್ಥಾನ ಸೇರಿದಂತೆ ಏಷ್ಯಾ ಪೆಸಿಫಿಕ್ ಗುಂಪಿನ 55 ಸದಸ್ಯರಿಂದ ಸರ್ವಾನುಮತದ ಬೆಂಬಲವನ್ನು ಗಳಿಸಿತ್ತು.
ಚುನಾಯಿತರಾದ ನಂತರ, ಭಾರತದ ಅವಧಿ 2021 ರ ಜನವರಿಯಲ್ಲಿ ಪ್ರಾರಂಭವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.