
ನವದೆಹಲಿ: ಕೊರೋನವೈರಸ್ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಶ್ರೀಲಂಕಾದಲ್ಲಿ ಸಿಲುಕಿ ಹಾಕಿಕೊಂಡಿರುವ ಸುಮಾರು 700 ಮಂದಿ ಭಾರತೀಯರನ್ನು ವಾಪಾಸ್ ಕರೆ ತರಲು ಐಎನ್ಎಸ್ ಜಲಾಶ್ವ ಸನ್ನದ್ಧವಾಗಿದೆ. ಐಎಂಎಸ್ ಜಲಾಶ್ವ ಭಾರತೀಯರ ಪಾಲಿಗೆ ರಕ್ಷಕನಾಗಿದ್ದು, ಈಗಾಗಲೇ ಸುಮಾರು 1400 ಭಾರತೀಯರನ್ನು ಮಾಲ್ಡೀವ್ಸ್ನಿಂದ ಭಾರತಕ್ಕೆ ವಾಪಸ್ ಕರೆತಂದಿದೆ.
ವರದಿಗಳ ಪ್ರಕಾರ, ಭಾರತೀಯ ನೌಕಾ ಹಡಗು ಎಸ್ಎನ್ಎಸ್ ಜಲಾಶ್ವ, ‘ವಂದೇ ಭಾರತ್ ಮಿಷನ್’ ಭಾಗವಾಗಿರುವ ಎರಡನೇ ಹಂತದ ‘ಸಮುದ್ರ ಸೇತು’ ಕಾರ್ಯಾಚರಣೆಯ ಭಾಗವಾಗಿ ಸೋಮವಾರ ಕೊಲಂಬೋ ಬಂದರಿನಿಂದ ಏಳು ಮಂದಿ ಭಾರತೀಯರನ್ನು ಹೊತ್ತು ಭಾರತದತ್ತ ಹೊರಡಲಿದೆ.
ಇಂದು ಬೆಳಗ್ಗೆ ಕೊಲಂಬೋ ಬಂದರಿನಿಂದ ಎಎನ್ಎಸ್ ಜಲಾಶ್ವ ಹೊರಡಲಿದೆ ಮತ್ತು ತಮಿಳುನಾಡಿನ ತುತಿಕೊರಿನ್ಗೆ ಆಗಮಿಸಲಿದೆ. ಇದರ ಬಳಿಕ ನೌಕೆಯು ಮತ್ತೆ ಏಳು ಮಂದಿ ಸಿಬ್ಬಂದಿಗಳನ್ನು ಮಾಲ್ಡೀವ್ಸ್ನ ಮಾಲೆಯಿಂದ ತಮಿಳುನಾಡಿನ ತುತಿಕೋರಿನ್ಗೆ ತರಲಿದೆ ಎಂದು ನೌಕಾ ಮೂಲಗಳು ತಿಳಿಸಿವೆ.
ಸಾಮಾಜಿಕ ಅಂತರ ಮತ್ತು ಇತರ ಶಿಷ್ಟಾಚಾರಗಳಿಗೆ ಸಂಬಂಧಿಸಿದಂತೆ ನೌಕೆಯನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ರೆಡ್, ಆರೆಂಜ್ ಮತ್ತು ಗ್ರೀನ್ ಝೋನ್ಗಳು ಇರಲಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


