ನವದೆಹಲಿ: ಕೊರೋನಾ ವಿರುದ್ಧದ ಹೋರಾಟದಲ್ಲಿ ವಾಯುಪಡೆಯ ಚಿಕೂನ್ ಹೆಲಿಕಾಪ್ಟರ್ಗಳು ಕಾರ್ಯ ನಿರ್ವಹಿಸಲಾರಂಭಿಸಿವೆ. ಕೋವಿಡ್-19 ನಿಯಂತ್ರಣಕ್ಕೆ ಬೇಕಾದ ಪೂರಕ ಸೌಲಭ್ಯಗಳನ್ನು ಹೊತ್ತುಕೊಂಡು ಭಾರತದ ಕಠಿಣ ಪ್ರದೇಶಗಳಿಗೆ ತನ್ನ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಸಿಎಚ್-47 ಎಫ್ ಹೆವೀಲಿಫ್ಟ್ ಹೆಲಿಕಾಪ್ಟರ್ಗಳನ್ನು ಕೇಂದ್ರ ಸರ್ಕಾರ ಬಳಕೆ ಮಾಡುತ್ತಿದೆ.
ಅಮೆರಿಕ ನಿರ್ಮಿತ ಈ ಹೆಲಿಕಾಪ್ಟರ್ಗಳನ್ನು ಕಳೆದ ವರ್ಷವಷ್ಟೇ ಭಾರತ ಖರೀದಿ ಮಾಡಿತ್ತು. ಈ ಹೆಲಿಕಾಪ್ಟರ್ಗಳನ್ನು ಬಳಸಿಕೊಂಡು ಇದೀಗ ಅರುಣಾಚಲ ಪ್ರದೇಶದ ಜೀವನಾವಶ್ಯಕ ಸೌಲಭ್ಯ ವಂಚಿತ ಪ್ರದೇಶಗಳಿಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲಾಗುತ್ತಿದೆ. ಇದರ ವಿಶೇಷತೆಗಳನ್ನು ಗಮನಿಸುವುದಾದರೆ, ಸುಮಾರು 11 ಟನ್ಗಳಷ್ಟು ಭಾರವನ್ನು ಹೊತ್ತೊಯ್ಯುಬಲ್ಲ ಸಾಮರ್ಥ್ಯ ಈ ಹೆಲಿಕಾಪ್ಟರ್ಗೆ ಇದೆ. ಏಕಕಾಲಕ್ಕೆ ಶಸ್ತ್ರಸಜ್ಜಿತ 54 ಯೋಧರು ಇದರಲ್ಲಿ ಕುಳಿತುಕೊಳ್ಳಬಹುದಾಗಿದೆ. ಏಕಕಾಲಕ್ಕೆ 24 ಸ್ಟ್ರೆಚರ್ಗಳನ್ನು ಸಾಗಿಸುವ ಸಾಮರ್ಥ್ಯವನ್ನು ಈ ಹೆಲಿಕಾಪ್ಟರ್ ಹೊಂದಿದೆ.
ಇನ್ನು ಅರುಣಾಚಲ ಪ್ರದೇಶದಲ್ಲಿ ಈ ವಿಮಾನಗಳು ನೀಡುತ್ತಿರುವ ಸೇವೆಯ ಬಗ್ಗೆ ಅಲ್ಲಿನ ಮುಖ್ಯಮಂತ್ರಿ ಪೆಮ ಖಂಡು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದು, ಈ ಹೆಲಿಕಾಪ್ಟರ್ಗಳ ಕಾರಣದಿಂದಲೇ ಕಠಿಣ ಪ್ರದೇಶಗಳಿಗೆ ಬೇಕಾದ ಅಗತ್ಯ ನೆರವನ್ನು ನೀಡುವುದು ಸಾಧ್ಯವಾಗುತ್ತಿದೆ ಎಂಬುದಾಗಿ ತಿಳಿಸಿದ್ದಾರೆ.
There goes Chinook Helicopter of @IAF_MCC carrying 83 quintals of essential commodities for remote Vijoynagar in Changlang dist from Miao today. Thankfully weather cleared enabling essential items to be delivered to the needy in this pandemic, completing day’s task in 2 sorties. pic.twitter.com/8xKlfp1zQh
— Pema Khandu (@PemaKhanduBJP) May 28, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.