ನವದೆಹಲಿ: ಸತತ ಎರಡನೇ ಬಾರಿಗೆ ಕೇಂದ್ರದ ಆಡಳಿತ ಚುಕ್ಕಾಣಿಯನ್ನು ಹಿಡಿದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಇಂದಿಗೆ 1 ವರ್ಷವನ್ನು ಪೂರೈಸಿದ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರು ಮೋದಿ ಸರ್ಕಾರಕ್ಕೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ನಡ್ಡಾ, ಮೋದಿ ಅವರ ಸರ್ಕಾರ 2.0 ಆಡಳಿತದ ಅವಧಿಯಲ್ಲಿ ಬಹಳಷ್ಟು ಸಾಧನೆಗಳನ್ನು ಮಾಡಿದೆ. ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಭಾರತ ಹೊಸ ದಿಕ್ಕಿನತ್ತ ಪ್ರಯಾಣ ಆರಂಭಿಸಿದೆ. ಇದು ಅಭೂತಪೂರ್ವ, ಐತಿಹಾಸಿಕ ಮತ್ತು ಅಮೋಘ ಎಂಬುದಾಗಿಯೂ ಅವರು ತಿಳಿಸಿದ್ದಾರೆ.
ಮೋದಿ ಅವರದ್ದು ದೂರದರ್ಶಿತ್ವವುಳ್ಳ ರಾಜಕಾರಣ. ಮುಂದಾಲೋಚನೆಗಳನ್ನಿಟ್ಟುಕೊಂಡೇ ಅವರು ಹೊಸ ಆಲೋಚನೆಗಳಿಗೆ ಜೀವ ತುಂಬುತ್ತಾರೆ. ಭಾರತವನ್ನು ಸಮರ್ಥವಾಗಿ ಮುನ್ನಡೆಸುವ ನಿಟ್ಟಿನಲ್ಲಿ ಅವರು ತೆಗೆದುಕೊಂಡಿರುವ ನೀತಿಗಳು, ಟೀಂ ಇಂಡಿಯಾ ಎಂಬ ಅವರ ಕಲ್ಪನೆ ದೇಶವನ್ನು ಮತ್ತಷ್ಟು ಬಲಪಡಿಸಿದೆ. ಸಾರ್ವಜನಿಕರ ಹಿತಾಸಕ್ತಿಯ ಆಶಯ ಮೋದಿ ಅವರ ಪ್ರತಿಯೊಂದು ನಿರ್ಧಾರದಲ್ಲಿಯೂ ಅಡಕವಾಗಿದೆ. ತಮ್ಮ ಜನಸ್ನೇಹಿ ಆಡಳಿತದ ಮೂಲಕವೇ ಮೋದಿ ಅವರು ಪ್ರಜಾಪ್ರಭುತ್ವ ವ್ಯವಸ್ಥೆಗೆ ಹೊಸ ಅರ್ಥವನ್ನು ನೀಡಿದ್ದಾರೆ ಎಂದು ನಡ್ಡಾ ತಿಳಿಸಿದ್ದಾರೆ.
मैं पुनः करोड़ों- करोड़ों भाजपा कार्यकर्ताओं की तरफ़ से प्रधानमंत्री श्री @narendramodi जी का उनकी सरकार के कार्यकाल का एतिहासिक और अभूतपूर्व एक साल के पूर्ण होने पर अभिनंदन करता हूँ। हम सभी भाजपा कार्यकर्ता पूरी निष्ठा के साथ देश निर्माण में मोदी जी का साथ देंगे। #1YearofModi2
— Jagat Prakash Nadda (@JPNadda) May 30, 2020
ತಮ್ಮ ಸರ್ಕಾರ ಎರಡನೇ ಅವಧಿಯಲ್ಲಿ ಒಂದನೇ ವರ್ಷ ಪೂರೈಸಿ, ಜನಾನುರಾಗಿಯಾಗಿ ಕೆಲಸ ಮಾಡುತ್ತಿದ್ದು ಇದಕ್ಕೆ ಕಾರಣರಾದ ಮೋದಿ ಅವರಿಗೆ ದೇಶದ ಎಲ್ಲಾ ಬಿಜೆಪಿ ಪಕ್ಷದ ಕಾರ್ಯಕರ್ತರ ಪರವಾಗಿಯೂ ನಡ್ಡಾ ಶುಭಾಷಯಗಳನ್ನು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.