News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರಾಷ್ಟ್ರಕ್ಕೆ 56 ಸಿಎನ್‌ಜಿ ಸ್ಟೇಶನ್ ಅರ್ಪಿಸಿದ ಧರ್ಮೇಂದ್ರ ಪ್ರಧಾನ್

ನವದೆಹಲಿ: ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಶುಕ್ರವಾರ ರಾಷ್ಟ್ರಕ್ಕೆ 56 ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ ಸ್ಟೇಶನ್‌ಗಳನ್ನು ಅರ್ಪಣೆ ಮಾಡಿದ್ದಾರೆ.

ಈ 56 ಸ್ಟೇಶನ್‌ಗಳು ಹನ್ನೊಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇರುವವುಗಳಾಗಿವೆ. ಗುಜರಾತ್, ಹರಿಯಾಣ, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ನವದೆಹಲಿ, ಪಂಜಾಬ್, ರಾಜಸ್ಥಾನ, ತೆಲಂಗಾಣ ಮತ್ತು ಉತ್ತರ ಪ್ರದೇಶಗಳಲ್ಲಿ ಸ್ಥಾಪನೆಯಾಗಿವೆ ಮತ್ತು ಇವುಗಳು 11 ವಿವಿಧ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳಿಗೆ ಸೇರಿವೆ.

ದೇಶದಲ್ಲಿ ಅನಿಲ ನೆಟ್ವರ್ಕ್ ಅನ್ನು ವಿಸ್ತರಣೆ ಮಾಡುವಲ್ಲಿ ಪ್ರಯತ್ನ ನಡೆಸಿದ ಎಲ್ಲಾ ಭಾಗಿದಾರರ ಪ್ರಯತ್ನಗಳನ್ನು ಸಾಗಿಸಿದ ಪ್ರಧಾನ್, ದೇಶದ ಶೇಕಡಾ 72ರಷ್ಟು ಜನಸಂಖ್ಯೆ ಶೀಘ್ರದಲ್ಲೇ ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್ ಅಡಿಯಲ್ಲಿ ಬರಲಿದೆ, ಶೇಕಡ 53ರಷ್ಟು ಭೂಪ್ರದೇಶದಲ್ಲಿ ಹರಡಲಿದೆ ಎಂದಿದ್ದಾರೆ.

ಭಾರತವು ಅನಿಲ ಆಧಾರಿತ ಆರ್ಥಿಕತೆಯತ್ತ ಮುನ್ನಡೆಯುತ್ತಿದೆ ಎಂದಿರುವ ಪ್ರಧಾನ್, ಸಿಎನ್‌ಜಿ ಸ್ಟೇಷನ್­ಗಳ ಸಂಖ್ಯೆ 25 ಲಕ್ಷದಿಂದ 60 ಲಕ್ಷಕ್ಕೆ ಏರಿಕೆಯಾಗಿದೆ ಎಂದಿದ್ದಾರೆ. ಅಲ್ಲದೆ 28 ಸಾವಿರ ಇಂಡಸ್ಟ್ರಿಯಲ್ ಗ್ಯಾಸ್ ಕನೆಕ್ಷನ್ 41 ಸಾವಿರಕ್ಕೆ ಏರಿಕೆಯಾಗಿದೆ ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top