ನವದೆಹಲಿ: ಕೊರೋನವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಭಾರತದಲ್ಲಿ ವಿಧಿಸಲಾಗಿದ್ದ ಲಾಕ್ಡೌನ್ ಕಾರಣದಿಂದಾಗಿ ಭಾರತದಲ್ಲಿ ಸಿಲುಕಿ ಹಾಕಿಕೊಂಡಿದ್ದ ಸುಮಾರು 179 ಮಂದಿ ಪಾಕಿಸ್ಥಾನ ಪ್ರಜೆಗಳನ್ನು ಇಂದು ಅವರ ತವರಿಗೆ ವಾಪಸ್ ಕಳುಹಿಸಲಾಗಿದೆ.
ಅಟಾರಿ-ವಾಘಾ ಗಡಿ ಮೂಲಕ 179 ಪಾಕಿಸ್ತಾನಿಗಳನ್ನು ಅವರ ದೇಶಕ್ಕೆ ಕಳುಹಿಸಿಕೊಡಲಾಗಿದೆ ಎಂದು ವರದಿಗಳು ತಿಳಿಸಿವೆ.
ತಮ್ಮ ಬಂಧುಗಳನ್ನು ಭೇಟಿಯಾಗುವ ಸಲುವಾಗಿ ಮತ್ತು ಇತರ ಕಾರಣಕ್ಕಾಗಿ ಭಾರತಕ್ಕೆ ಬಂದಿದ್ದ ಪಾಕಿಸ್ಥಾನಿಗಳು, ಭಾರತದಲ್ಲಿ ಏಕಾಏಕಿ ಘೋಷಣೆಯಾದ ಲಾಕ್ಡೌನ್ ಕಾರಣದಿಂದಾಗಿ ಸಿಲುಕಿ ಹಾಕಿಕೊಂಡಿದ್ದರು. ಪ್ರಸ್ತುತ ಭಾರತದಲ್ಲಿ ಲೋಕ ಡಾನ್ಸ್ ಸಡಿಲಿಕೆ ಆಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ವಾಪಸ್ ಕಳುಹಿಸಲಾಗಿದೆ.
ಪತ್ನಿ ಮತ್ತು ಮಗುವಿನೊಂದಿಗೆ ಭಾರತಕ್ಕೆ ಆಗಮಿಸಿದ ವ್ಯಕ್ತಿಯೊಬ್ಬರು ಮಾತನಾಡಿ, “ನಾನು ತಂಗಿಯನ್ನು ಭೇಟಿಯಾಗುವ ಸಲುವಾಗಿ ಭಾರತಕ್ಕೆ ಎರಡು ತಿಂಗಳ ಹಿಂದೆ ಬಂದಿದ್ದೆ. ಆದರೆ ಲಾಕ್ಡೌನ್ ಕಾರಣದಿಂದಾಗಿ ಇಲ್ಲಿ ಉಳಿಯುವಂತೆ ಆಯಿತು. ಈ ದಿನ ನಾವು ಪಾಕಿಸ್ಥಾನಕ್ಕೆ ವಾಪಸ್ ಹೋಗುತ್ತಿದ್ದೇವೆ. ಇದಕ್ಕಾಗಿ ಭಾರತ ಸರ್ಕಾರಕ್ಕೆ ಧನ್ಯವಾದಗಳು. ಪಾಕಿಸ್ಥಾನದಲ್ಲಿ ಸಿಲುಕಿ ಹಾಕಿಕೊಂಡಿರುವ ಭಾರತೀಯರನ್ನು ಕೂಡ ಸರಕಾರ ಅದಷ್ಟು ಬೇಗ ಕಳುಹಿಸಿಕೊಡಬೇಕು” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.