
ನವದೆಹಲಿ: ಚೈನೀಸ್ ಆ್ಯಪ್ ಟಿಕ್ಟಾಕ್ ಬಳಕೆ ಕಡಿಮೆಯಾದಂತೆ, ಭಾರತೀಯರಿಂದಲೇ ಅಭಿವೃದ್ಧಿ ಹೊಂದಿದ ಮಿತ್ರಾನ್ ಅಪ್ಲಿಕೇಶನ್ ಇದೀಗ ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. ಕಳೆದೊಂದು ತಿಂಗಳಿನಿಂದ ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿರುವ ಈ ಆ್ಯಪ್ನಲ್ಲಿ ವಿಡಿಯೋಗಳನ್ನು ಸ್ವತಃ ರಚಿಸಲು, ಶೇರ್ ಮಾಡಲು, ಡೌನ್ಲೋಡ್ ಮಾಡಿಟ್ಟುಕೊಳ್ಳುವ ನೆಲೆಯಲ್ಲಿಯೂ ಕಾರ್ಯ ನಿರ್ವಹಿಸುತ್ತದೆ. ಅಲ್ಲದೆ ಪ್ರಪಂಚದ ಯಾವುದೇ ವಿಡಿಯೋಗಳನ್ನು ಬ್ರೌಸ್ ಮಾಡುವಲ್ಲಿಯೂ ಈ ಭಾರತೀಯ ಮೂಲದ ಆ್ಯಪ್ ಅನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಬಹುದಾಗಿದೆ.
ದೇಶದಾದ್ಯಂತ ಹವಾ ಸೃಷ್ಟಿಸಿದ್ದ ಚೈನೀಸ್ ಆ್ಯಪ್ ಟಿಕ್ಟಾಕ್ ಅನ್ನು ಕೊರೋನಾ ನಂತರದಲ್ಲಿ ಭಾರತೀಯ ಬಳಕೆದಾರರು ಕಡಿಮೆ ಪ್ರಮಾಣದಲ್ಲಿ ಬಳಕೆ ಮಾಡುತ್ತಿದ್ದಾರೆ. ಅಲ್ಲದೆ ಅನೇಕ ಭದ್ರತಾ ಲೋಪಗಳಿಗೆ ಸಂಬಂಧಿಸಿದಂತೆ ಮತ್ತು ಜನರನ್ನು ದುಷ್ಪ್ರೇರಣೆ ಮಾಡುವ ಮೂಲಕ ಹಾದಿ ತಪ್ಪಿಸುತ್ತಿದೆ ಎಂಬ ಕಾರಣದಿಂದ ಟಿಕ್ಟಾಕ್ ಬ್ಯಾನ್ಗೆ ಭಾರತೀಯ ಮಹಿಳಾ ಆಯೋಗವೂ ಕೇಂದ್ರ ಸರ್ಕಾರಕ್ಕೆ ಈ ಹಿಂದೆ ಮನವಿಯನ್ನು ಸಲ್ಲಿಸಿದೆ. ಜೊತೆಗೆ ಭಾರತೀಯರ ಭಾವನೆಗಳನ್ನು ನೋಯಿಸುವ ಚೀನಾದ ಆ್ಯಪ್ ಬಳಕೆಯನ್ನು ಇಲ್ಲಿನ ಯುವಜನರೇ ಸ್ವ ಪ್ರೇರಣೆಯಿಂದ ಕಡಿಮೆ ಮಾಡಿವ ಮೂಲಕ ಅದರ ರೇಟಿಂಗ್ ಅನ್ನು 1.2 ಗೆ ಇಳಿಯುವಂತೆಯೂ ಮಾಡಿದ್ದಾರೆ. ಅಲ್ಲದೆ ದೇಶದಲ್ಲಿ ಈ ಚೈನೀಸ್ ಆ್ಯಪ್ಗೆ ನಿಷೇಧ ಹೇರುವಂತೆಯೂ ಜನರು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಮಿತ್ರಾನ್ ಆ್ಯಪ್ನ ಡೌನ್ಲೋಡ್ ಮತ್ತು ಬಳಕೆದಾರರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದೆ. ಇದು ಹೆಚ್ಚು ಕಡಿಮೆ ಟಿಕ್ಟಾಕ್ನ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ಕೇವಲ 40-50 ಪೋಸ್ಟ್ಗಳಲ್ಲಿಯೇ ಸುಮಾರು 80,000 ದಷ್ಟು ಫಾಲೋವರ್ಸ್ಗಳನ್ನು ಗಳಿಸಿ ಜನಮನ್ನಣೆ ಪಡೆದಿದೆ. ಇನ್ನು ಎಪ್ರಿಲ್ ತಿಂಗಳಲ್ಲಿ ಮಿಲಿಯನ್ನಷ್ಟು ಡೌನ್ಲೋಡ್ ಆಗಿದ್ದ ಮಿತ್ರಾನ್ ಆ್ಯಪ್ ಸದ್ಯ ಸುಮಾರು ಐದು ಮಿಲಿಯನ್ಗಳಷ್ಟು ಜನರು ಡೌನ್ಲೋಡ್ ಮಾಡಿಕೊಂಡು ಈ ಆ್ಯಪ್ ಮೂಲಕ ಮನೋರಂಜನೆ ಪಡೆಯುತ್ತಿದ್ದಾರೆ. ಸದ್ಯ ಈ ಆ್ಯಪ್ 4.5 ರಷ್ಟು ರೇಟಿಂಗ್ ಮೂಲಕ ಚೀನಾದ ಟಿಕ್ಟಾಕ್ ಅನ್ನು ಹಿಂದಿಕ್ಕಿದೆ.
ಕಳೆದ ಒಂದು ತಿಂಗಳಿನಲ್ಲಿ ಪ್ಲೇ ಸ್ಟೋರ್ನಿಂದ ಡೌನ್ಲೋಡ್ ಆದ ಆ್ಯಪ್ಗಳಲ್ಲಿ ಮಿತ್ರಾನ್ ಎರಡನೇ ಸ್ಥಾನದಲ್ಲಿದ್ದರೆ, ಆರೋಗ್ಯ ಸೇತು ಆ್ಯಪ್ ಮೊದಲನೇ ಸ್ಥಾನವನ್ನು ಕಾಪಾಡಿಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



