
ನವದೆಹಲಿ: ರಿಷಿಕೇಶ-ಧರಸು ರಸ್ತೆ ಹೆದ್ದಾರಿಯ ಜನನಿಬಿಡ ಚಂಬಾ ಪಟ್ಟಣದ ಅಡಿಯಲ್ಲಿ 440 ಮೀಟರ್ ಉದ್ದದ ಸುರಂಗವನ್ನು ನಿರ್ಮಿಸಿದ್ದಕ್ಕಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಂಗಳವಾರ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (ಬಿಆರ್ಒ) ಅನ್ನು ಶ್ಲಾಘಿಸಿದ್ದಾರೆ ಮತ್ತು ತಂಡದ ಪ್ರಯತ್ನವನ್ನು ಅಭಿನಂದಿಸಿದ್ದಾರೆ.
ಟ್ವೀಟ್ ಮಾಡಿರುವ ಗಡ್ಕರಿ, ”ನಮ್ಮ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (ಬಿಆರ್ಒ) ತಂಡವು ಚಾರ್ಧಾಮ್ ಯೋಜನೆಯಲ್ಲಿ ಪ್ರಮುಖ ಪ್ರಗತಿಯನ್ನು ಸಾಧಿಸಿದೆ ಎಂದು ಘೋಷಿಸಲು ಸಂತೋಷವಾಗಿದೆ. ಅದು ರಿಷಿಕೇಶ-ಧರಸು ರಸ್ತೆ ಹೆದ್ದಾರಿ (ಎನ್ಎಚ್ 94)ಯಲ್ಲಿ ಜನನಿಬಿಡ ಚಂಬಾ ಪಟ್ಟಣದ ಕೆಳಗೆ 440 ಮೀಟರ್ ಉದ್ದದ ಸುರಂಗವನ್ನು ಯಶಸ್ವಿಯಾಗಿ ನಿರ್ಮಾಣ ಮಾಡಿದೆ” ಎಂದಿದೆ.
ಮತ್ತೊಂದು ಟ್ವೀಟ್ನಲ್ಲಿ ಅವರು ಬಿಆರ್ಒ ಮಾಡಿದ ಕೆಲಸವನ್ನು ಅಸಾಧಾರಣ ಸಾಧನೆ ಎಂದು ಉಲ್ಲೇಖಿಸಿದ್ದಾರೆ. “ಈ ಜಾಗತಿಕ ಸಾಂಕ್ರಾಮಿಕದ ಮಧ್ಯೆ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಮಾಡಿದ ಅಸಾಧಾರಣ ಸಾಧನೆಗಾಗಿ ಇಡೀ ಬಿಆರ್ಒ ತಂಡವನ್ನು ಅಭಿನಂದಿಸುತ್ತೇನೆ” ಎಂದು ಬರೆದಿದ್ದಾರೆ.
I congratulate the entire BRO team for their extraordinary feat in nation-building amidst this global pandemic. #PragatiKaHighway pic.twitter.com/N1APAW2c2e
— Nitin Gadkari (@nitin_gadkari) May 26, 2020
ಈ ಸುರಂಗದ ಪ್ರಗತಿಯು ತ್ವರಿತ ಸಂಚಾರಕ್ಕೆ ಅನುಕೂಲವಾಗಲಿದೆ, ದಟ್ಟಣೆ ಕಡಿಮೆ ಮಾಡಲಿದೆ ಮತ್ತು ಚಂಬಾ ಪಟ್ಟಣಕ್ಕೆ ಇರುವ ದೂರವನ್ನು ಕಡಿಮೆ ಮಾಡಲಿದೆ ಮತ್ತು ಚಾರ್ಧಾಮ್ ಯಾತ್ರೆಯಲ್ಲಿ ಯಾತ್ರಿಗಳ ಚಲನೆಯನ್ನು ಸರಾಗಗೊಳಿಸಲಿದೆ ಮತ್ತು ಆರ್ಥಿಕ ಸಮೃದ್ಧಿಯನ್ನು ತರುವಲ್ಲಿ ಬಹಳ ದೂರ ಸಾಗಲಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.
6 ಕಿ.ಮೀ ರಸ್ತೆ ಮತ್ತು 450 ಮೀಟರ್ ಸುರಂಗ ನಿರ್ಮಾಣ ಮಾಡಲು 88 ಕೋಟಿ ರೂಪಾಯಿ ವ್ಯಯವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


