ಲಕ್ನೋ: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣದ ಕಾರ್ಯ ಇಂದಿನಿಂದ ಆರಂಭಗೊಂಡಿದೆ. ಈ ಬಗ್ಗೆ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮುಖ್ಯಸ್ಥ ಮಹಾಂತ ನೃತ್ಯ ಗೋಪಾಲದಾಸ್ ಅವರು ಘೋಷಣೆ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಪ್ರಸ್ತುತ ರಾಮಲಲ್ಲಾ ಮೂರ್ತಿಗಳನ್ನು ಇಡಲಾಗಿರುವ ಹೊಸದಾಗಿ ರಚಿಸಲಾದ ತಾತ್ಕಾಲಿಕ ದೇಗುಲ ಮಾದರಿಯಲ್ಲಿ ಪೂಜೆಯನ್ನು ಸಲ್ಲಿಸಿದ ಬಳಿಕ ಮಹಂತಾ ಅವರು ಈ ಘೋಷಣೆಯನ್ನು ಮಾಡಿದ್ದಾರೆ. ಮಾನಸ ಭವನದಲ್ಲಿ ಈ ದೇಗುಲದ ಮಾದರಿ ಇದ್ದು, ಫೈಬರ್ ಬಳಸಿ ಇದನ್ನು ನಿರ್ಮಾಣ ಮಾಡಲಾಗಿದೆ.
#Breaking | Ayodhya: Construction of Ram Mandir begins. pic.twitter.com/bEZPerqH8j
— TIMES NOW (@TimesNow) May 26, 2020
ಈಗಾಗಲೇ ನೆಲವನ್ನು ಸಮತಟ್ಟುಗೊಳಿಸುವ ಮತ್ತು ಅವಶೇಷಗಳನ್ನು ತೆರವುಗೊಳಿಸುವ ಕಾರ್ಯಗಳು ಸ್ಥಳದಲ್ಲಿ ನಡೆದಿವೆ. ಈ ಸಂದರ್ಭದಲ್ಲಿ ಅವಶೇಷಗಳಡಿ ಐದು ಅಡಿ ಎತ್ತರದ ಶಿವಲಿಂಗ, ಕಪ್ಪು ಶಿಲೆಯ ಏಳು ಕಂಬಗಳು, ಕೆಂಪುಕಲ್ಲಿನ 6 ಕಂಬಗಳು ಮತ್ತು ದೇವರುಗಳ ಮೂರ್ತಿಗಳು ಲಭಿಸಿವೆ.
ಅಲ್ಲದೇ, ಕೊರೋನಾವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲೂ ಜನರು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ಗೆ ದೇಣಿಗೆಗಳನ್ನು ನೀಡುತ್ತಿದ್ದಾರೆ. ಈ ಟ್ರಸ್ಟ್ ದೇಗುಲ ನಿರ್ಮಾಣದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡಿದೆ.
ಲಾಕ್ ಡೌನ್ ಅವಧಿಯಲ್ಲಿ ಟ್ರಸ್ಟ್ನ ಎರಡು ಖಾತೆಗಳಲ್ಲಿ ಸುಮಾರು 4.60 ಕೋಟಿ ರೂಪಾಯಿಗಳು ಜಮೆ ಆಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.