ಬೆಳ್ತಂಗಡಿ : ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರು ವೇತನವನ್ನು ಪರಿಷ್ಕರಿಸುವಂತೆ ಹಾಗೂ ನೌಕರರನ್ನು ಖಾಯಂಗೊಳಿಸುವಂತೆ ಇಲ್ಲಿನ ಎಪಿಎಂಸಿ ಹೊರಗುತ್ತಿಗೆ ನೌಕರರು ಗುರುವಾರ ಪ್ರತಿಭಟನೆ ನಡೆಸಿ, ಮನವಿ ನೀಡಿದರು.
ಬೆಳ್ತಂಗಡಿ ಎಪಿಎಂಸಿಯಲ್ಲಿ ಕಳೆದ ಹದಿನೈದು ವರ್ಷಗಳಿಂದ ಬೇರೆ ಬೇರೆ ಏಜೆನ್ಸಿಯವರಿಂದ ಹೊರಗುತ್ತಿಗೆ ನೌಕರರಾಗಿ ದುಡಿಯುತ್ತಿದ್ದು ನೌಕರರಿಗೆ ಸರಕಾರ ಕನಿಷ್ಟ ವೇತನ ನೀಡುತ್ತಿದ್ದಾರೆ. ಇದು ಜೀವನ ನಿರ್ವಹಣೆ ತುಂಬಾ ಕಷ್ಟಕರವಾಗಿದೆ. ಹೊರಗುತ್ತಿಗೆ ಏಜೆನ್ಸಿಯವರು ವೇತನ ಏರಿಸುತ್ತಿಲ್ಲ. ಸಮಿತಿಯವರು ಕನಿಷ್ಟ ವೇತನಕ್ಕೆ ಗುತ್ತಿಗೆ ನೀಡಿರುವುದರಿಂದ ಗರಿಷ್ಟ ವೇತನ ನೀಡಲು ಸಾಧ್ಯವಿಲ್ಲ ಎಂದು ಹೇಳಿರುತ್ತಾರೆ.
ಹೊರಗುತ್ತಿಗೆ ನೌಕರರಿಗೆ ಪಿಎಫ್, ಇಎಸ್ಐ ಕಡಿತಗೊಳಿಸಿ ೫೭೦೦ ರೂ. ಸಿಗುತ್ತಿದೆ. ಆದರೆ ಇದು ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ. ವೇತನವನ್ನು ಪರಿಷ್ಕರಣೆ ಮಾಡಿ ೧೫ ಸಾವಿರ ರೂ. ನೀಡಬೇಕು. ನೌಕರಿಯನ್ನು ಖಾಯಂಗೊಳಿಸಬೇಕು ಎಂದು ಬೇಡಿಕೆಯನ್ನು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಬಳಿಕ ಹೊರಗುತ್ತಿಗೆ ನೌಕರರು ಎಪಿಎಂಸಿ ಸಹಾಯಕ ನಿರ್ದೇಶಕ ಎಸ್. ಬಸವರಾಜು, ಕಾರ್ಯದರ್ಶಿ ಕೃಷ್ಣಮೂರ್ತಿಯವರಿಗೆ ಮನವಿಯನ್ನು ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.