ಸಂವಿಧಾನದ ಕಲಂ 370 ಮತ್ತು 35 ಎ ಅನ್ನು ನಿರ್ಮೂಲನೆ ಮಾಡಿದ ಬಳಿಕ ಜಮ್ಮು-ಕಾಶ್ಮೀರದಲ್ಲಿ ಹೊಸ ಭರವಸೆಯ ಯುಗದ ಪ್ರಾರಂಭವಾಗಿದೆ. ಅಲ್ಲಿ ರಚನೆಗೊಂಡ ಸರಕಾರಗಳು ಹಿಂದಿನಿಂದಲೂ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜನರನ್ನು ಬಲಿ ಕೊಟ್ಟಿದ್ದವು. ಅಲ್ಲಿನ ರಾಜಕಾರಣಿಗಳು ಜನರ ಕುಂದುಕೊರತೆಗಳನ್ನು ಆಲಿಸುವ ಬದಲು ತಮ್ಮ ಹಿತಾಸಕ್ತಿಗಳನ್ನು ಮಾತ್ರ ಪೋಷಿಸುತ್ತಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿಯ ನೇತೃತ್ವದಲ್ಲಿ ಕೇಂದ್ರದಲ್ಲಿ ರಚನೆಗೊಂಡ ಅತ್ಯಂತ ಕ್ರಿಯಾಶೀಲ ಸರ್ಕಾರ ಜಮ್ಮು ಕಾಶ್ಮೀರದ ಸಮಸ್ಯೆಯನ್ನು ನಿವಾರಣೆಗೊಳಿಸುವ ನಿಟ್ಟಿನಲ್ಲಿ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿತ್ತು. ನಮ್ಮ ಸರಕಾರ ವಿಭಿನ್ನ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಸಾರ್ವಜನಿಕರ ಹಾಗೂ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡುತ್ತದೆ ಎಂಬುದನ್ನು ಗೃಹಸಚಿವ ಅಮಿತ್ ಶಾ ಅವರು ತೋರಿಸಿಕೊಟ್ಟರು.
16-5-2020ರಲ್ಲಿ ವಿಪತ್ತು ನಿರ್ವಹಣೆ, ಪರಿಹಾರ ಪುನರ್ವಸತಿ ಮತ್ತು ಜಮ್ಮು-ಕಾಶ್ಮೀರ ಮರುನಿರ್ಮಾಣ ಇಲಾಖೆಯು, ಮೂಲ ನಿವಾಸಿಗಳ ಪ್ರಮಾಣ ಪತ್ರ ಪುನರ್ ನಿರ್ಧಾರವನ್ನು ಹೊರಡಿಸಿತು. ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವು ವರ್ಷಗಳಿಂದ ಜೀವಿಸಿದರೂ ಕೂಡ ಅಲ್ಲಿನ ನಿವಾಸಿಗಳು ಎಂದು ಪ್ರಮಾಣಪತ್ರವನ್ನು ಪಡೆಯಲು ಸಾಧ್ಯವಾಗದ ಮತ್ತು ಜಮ್ಮು-ಕಾಶ್ಮೀರದ ಮೂಲನಿವಾಸಿಗಳಾಗಿ ಬೇರೆ ರಾಜ್ಯದಲ್ಲಿ ವಾಸಿಸುತ್ತಿರುವ ಅದೆಷ್ಟು ಜನರಿಗೆ ಈ ನಿರ್ಧಾರವು ಸಂಜೀವಿನಿ ಆಗಿದೆ. ಕೇಂದ್ರ ಸರಕಾರವು ತೆಗೆದುಕೊಂಡ ನಿರ್ಧಾರ ಐತಿಹಾಸಿಕ ಮತ್ತು ನಿರ್ಣಾಯಕವಾಗಿದೆ. ನೋಂದಣಿ ಇಲ್ಲದೆ ಜಮ್ಮು ಮತ್ತು ಕಾಶ್ಮೀರ ರಾಜ್ಯದೊಳಗೆ ಜೀವಿಸುತ್ತಿದ್ದ ಕುಟುಂಬಗಳು ಇನ್ನುಮುಂದೆ ಅಲ್ಲಿನ ಪ್ರಮಾಣಪತ್ರವನ್ನು ಪಡೆದುಕೊಳ್ಳಬಹುದಾಗಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ಸ್ಥಳಾಂತರಗೊಂಡ ಅದೆಷ್ಟೋ ಕುಟುಂಬಗಳು ನಮ್ಮನ್ನು ಮೂಲನಿವಾಸಿಗಳು ಎಂಬ ಪಟ್ಟಿಗೆ ಸೇರಿಸಿ ಎಂದು ಬೇಡಿಕೆ ಇಡುತ್ತಲೇ ಬಂದಿವೆ. ಆದರೆ ಅಲ್ಲಿ ಮತ್ತು ಕೇಂದ್ರದಲ್ಲಿ ರಚನೆಯಾದ ಸರ್ಕಾರಗಳು ಈ ಬಗ್ಗೆ ಭರವಸೆಯನ್ನು ನೀಡುತ್ತಾ ಬಂದಿತೇ ಹೊರತು ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಎಂದೂ ಮಾಡಲೇ ಇಲ್ಲ. ಇದೀಗ ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಜಮ್ಮು ಮತ್ತು ಕಾಶ್ಮೀರವನ್ನು ಸಂಪೂರ್ಣ ರಾಷ್ಟ್ರೀಯ ಏಕೀಕರಣದತ್ತ ಮುಖಮಾಡುವಂತೆ ಮಾಡಿದ ಕೀರ್ತಿ ಮೋದಿ ಸರ್ಕಾರಕ್ಕೆ ಸಲ್ಲುತ್ತದೆ.
ಜಮ್ಮು-ಕಾಶ್ಮೀರ ಮೂಲನಿವಾಸಿ ಪ್ರಮಾಣಪತ್ರದ ಪುನರ್ ನಿರ್ಧಾರ ನಿಯಮ ನಿಜಕ್ಕೂ ಅತ್ಯಂತ ಐತಿಹಾಸಿಕ ಮತ್ತು ನಿರ್ಣಾಯಕವಾಗಿದೆ. ಜಮ್ಮು ಮತ್ತು ಕಾಶ್ಮೀರವನ್ನು ಸಂಪೂರ್ಣವಾಗಿ ಭಾರತದೊಂದಿಗೆ ವಿಲೀನಗೊಳ್ಳುವಂತೆ ಇದು ಮಾಡಿದೆ.
ಪುನರ್ ನಿರ್ಧಾರದ ಪ್ರಕಾರ, ಮೂಲನಿವಾಸಿ ಪ್ರಮಾಣಪತ್ರಕ್ಕಾಗಿ ಅರ್ಹರಾಗಿರುವ ಜನರೆಂದರೇ, ಜಮ್ಮು-ಕಾಶ್ಮೀರದ ಸ್ಥಾಯಿ ನಿವಾಸ ಪ್ರಮಾಣಪತ್ರ ಹೊಂದಿರುವವರು, ಜಮ್ಮು-ಕಾಶ್ಮೀರದಲ್ಲಿ 15 ವರ್ಷಗಳ ತನಕ ವಾಸವಿದ್ದ ವ್ಯಕ್ತಿಗಳು ಅಥವಾ ಏಳು ವರ್ಷಗಳವರೆಗೆ ಅಲ್ಲಿನ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆದಿರುವ ಅಥವಾ ಅಲ್ಲಿನ ಶಿಕ್ಷಣ ಸಂಸ್ಥೆಯಲ್ಲಿ 10 ಮತ್ತು 12ನೇ ತರಗತಿಯ ಪರೀಕ್ಷೆಯನ್ನು ಬರೆದಿರುವ ವ್ಯಕ್ತಿಗಳು, ಪರಿಹಾರ ಮತ್ತು ಪುನರ್ವಸತಿ ಆಯುಕ್ತರ ಮೂಲಕ ನೋಂದಣಿಗೊಂಡ ವಲಸಿಗರು, ಈ ಕೇಂದ್ರಾಡಳಿತ ಪ್ರದೇಶದಲ್ಲಿ ಹತ್ತು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳವರೆಗೆ ಕಾರ್ಯನಿರ್ವಹಿಸಿದ ಸರ್ಕಾರಿ ಉದ್ಯೋಗಿಗಳ ಮಕ್ಕಳು, ಜಮ್ಮು ಮತ್ತು ಕಾಶ್ಮೀರದ ಹೊರಗೆ ವಾಸಿಸುತ್ತಿರುವ ಆದರೆ ಷರತ್ತು 1 ಮತ್ತು 2ನ್ನು ಪೂರೈಸುವ ಪೋಷಕರ ಮಕ್ಕಳು. ಹಿಂದೆ ಜಮ್ಮು-ಕಾಶ್ಮೀರದ ಮಹಿಳೆಯರು ಹೊರರಾಜ್ಯದ ಪುರುಷರನ್ನು ವಿವಾಹವಾದರೆ ಆಸ್ತಿ ಮೇಲಿನ ಹಕ್ಕನ್ನು ಕಳೆದುಕೊಳ್ಳುತ್ತಿದ್ದರು. ಆದರೆ ಈಗ ಅದು ಸಾಧ್ಯವಿಲ್ಲ. ಕಾಶ್ಮೀರಿ ಮಹಿಳೆಯರು ಯಾರನ್ನೇ ಮದುವೆಯಾಗಿದ್ದರು ಕೂಡ ಕಾಶ್ಮೀರದಲ್ಲಿನ ತಮ್ಮ ಆಸ್ತಿಯ ಹಕ್ಕನ್ನು ಹೊಂದುತ್ತಾರೆ. ಅವರ ಮಕ್ಕಳಿಗೂ ಕೂಡ ಆಸ್ತಿಯ ಹಕ್ಕು ಇದೆ.
ಪರಿಹಾರ ಮತ್ತು ಪುನರ್ವಸತಿ ಆಯುಕ್ತರು ಇನ್ನೂ ನೋಂದಾಯಿಸದಂತಹ ವಲಸಿಗರು, 1951/1988ನ ಮತದಾರರ ಪಟ್ಟಿಯಲ್ಲಿ ಹೆಸರು ಅಥವಾ ಉದ್ಯೋಗದ ಪ್ರಮಾಣಪತ್ರ ಅಥವಾ ಆಸ್ತಿಯ ಸ್ವಾಮ್ಯತೆ ಅಥವಾ ಇತರ ರಾಜ್ಯ/ಕೇಂದ್ರಾಡಳಿತ ಪ್ರದೇಶದ ವಲಸಿಗ/ ಸ್ಥಳಾಂತರಗೊಂಡ ವ್ಯಕ್ತಿಯ ರೂಪದಲ್ಲಿ ನೋಂದಾಯಿಸಿಕೊಂಡ ಪ್ರಮಾಣಪತ್ರವನ್ನು ಸಲ್ಲಿಸಿ ಮೂಲನಿವಾಸಿಗಳು ಪ್ರಮಾಣಪತ್ರವನ್ನು ಪಡೆಯಬಹುದಾಗಿದೆ.
ಪಶ್ಚಿಮ ಪಾಕಿಸ್ಥಾನದ ನಿರಾಶ್ರಿತರು, ಸ್ವಚ್ಛತಾ ಕಾರ್ಮಿಕರು ಮತ್ತು ಇಂತಹ ಇತರ ವ್ಯಕ್ತಿಗಳು ಕೂಡ ಮೂಲನಿವಾಸಿಗಳು ಪ್ರಮಾಣಪತ್ರ ಪಡೆಯಲು ಅರ್ಹರಾಗಿದ್ದಾರೆ. ಸ್ಥಳಾಂತರಗೊಂಡ ಕಾಶ್ಮೀರಿಯೂ ಸ್ಥಾಯಿ ನಿವಾಸ ಪ್ರಮಾಣಪತ್ರ ನೀಡಿ ಅಥವಾ ವಲಸಿಗನ ರೂಪದಲ್ಲಿ ನೋಂದಾಯಿಸಲ್ಪಟ್ಟ ಪ್ರಮಾಣ ಪತ್ರವನ್ನು ನೀಡಿ ಮೂಲನಿವಾಸಿ ಪ್ರಮಾಣಪತ್ರವನ್ನು ಪಡೆದುಕೊಳ್ಳಬಹುದಾಗಿದೆ.
ಜಮ್ಮು-ಕಾಶ್ಮೀರ ಪುನರ್ ರಚನೆ ಕಾಯ್ದೆಯು ಅನುಷ್ಠಾನಕ್ಕೆ ಬಂದ ನಂತರ ಕಣಿವೆ ರಾಜ್ಯದಲ್ಲಿ ಹೊಸಯುಗದ ಆರಂಭವಾಗಿದೆ. ಅಲ್ಲಿ ಶಾಂತಿ ನೆಲೆಸಿದೆ ಮತ್ತು ಜನರಿಗೆ ಉತ್ತಮ ಅವಕಾಶಗಳು ಕೂಡ ದೊರೆಯುತ್ತಿವೆ. ಇದಕ್ಕೆಲ್ಲ ಕಾರಣವಾಗಿದ್ದು ಮೋದಿ ಸರ್ಕಾರದ ಒಂದು ನಿರ್ಣಾಯಕ ಕ್ರಮ. ಇತಿಹಾಸದ ಪುಟಗಳಲ್ಲಿ ಈ ನಿರ್ಧಾರ ಅಚ್ಚಳಿಯದೆ ಉಳಿಯಲಿದೆ.
ಮೂಲ ಲೇಖನ : ರೋನಿಕ್ ಶರ್ಮಾ
(ವಕೀಲರು) ಜಮ್ಮು&ಕಾಶ್ಮೀರ
Convenor Roots in POJK
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.