ನವದೆಹಲಿ: ಭಾರತೀಯ ರೈಲ್ವೆಯು ಜೂನ್ 1 ರಿಂದ 200 ಪ್ಯಾಸೆಂಜರ್ ರೈಲು ಸೇವೆಗಳನ್ನು ಆರಂಭಿಸಲು ನಿರ್ಧರಿಸಿದೆ. ಪ್ರಸ್ತುತ 15 ಪ್ರಯಾಣಿಕ ರೈಲುಗಳು ಸಂಚರಿಸುತ್ತಿವೆ.
ಮೇ 12 ರಿಂದ ಭಾರತೀಯ ರೈಲ್ವೆಯು 15 ಹವಾನಿಯಂತ್ರಿತ ರೈಲುಗಳನ್ನು ಓಡಿಸುತ್ತಿದೆ. ಇದೀಗ ಅದನ್ನು 200ಕ್ಕೆ ವಿಸ್ತರಣೆ ಮಾಡುತ್ತಿದೆ. ಆದರೆ ಈ ರೈಲುಗಳು ಹವಾನಿಯಂತ್ರಿತ ಆಗಿರುವುದಿಲ್ಲ.
ವರದಿಗಳ ಪ್ರಕಾರ, ಯಾವುದೇ ರೈಲುಗಳ ಟಿಕೆಟುಗಳು ನಿಲ್ದಾಣಗಳಲ್ಲಿ ಲಭ್ಯವಿರುವುದಿಲ್ಲ. ಪ್ರಯಾಣಿಕರು ಎಲ್ಲಾ ಕೆಟಗರಿಗಳ ಟಿಕೆಟುಗಳನ್ನು ಆನ್ಲೈನ್ ಮೂಲಕವೇ ಖರೀದಿ ಮಾಡಬೇಕಾಗುತ್ತದೆ. ಕೆಲವೇ ದಿನಗಳಲ್ಲಿ ಟಿಕೆಟುಗಳ ಆನ್ಲೈನ್ ಖರೀದಿ ಆರಂಭವಾಗಲಿದೆ. ಶೀಘ್ರದಲ್ಲೇ ಈ ರೈಲುಗಳು ಸಂಚರಿಸುವ ಮಾರ್ಗ ಮತ್ತು ವೇಳಾಪಟ್ಟಿಯು ಬಿಡುಗಡೆಯಾಗಲಿದೆ.
राज्य सरकारों से अनुरोध किया गया है कि जो श्रमिक रास्ते में हैं उन्हें राज्य सरकारें मैन लाइन रेलवे स्टेशन के नजदीक पंजीकृत करें एवं इसकी लिस्ट रेलवे को दें जिससे कि श्रमिक स्पेशल ट्रेन द्वारा उन्हें उनके गंतव्य स्थान तक पहुंचाया जा सके।
— Ministry of Railways (@RailMinIndia) May 19, 2020
ಇನ್ನೊಂದೆಡೆ, ರೈಲ್ವೆ ಸಚಿವಾಲಯವು ಶ್ರಮಿಕ ವಿಶೇಷ ರೈಲುಗಳ ಸಂಖ್ಯೆಯನ್ನು ಕೂಡ ದುಪ್ಪಟ್ಟುಗೊಳಿಸಲು ಮುಂದಾಗಿದೆ. ಉದ್ಯೋಗವಿಲ್ಲದೆ ಈಗಾಗಲೇ ಪರಿತಪಿಸುತ್ತಿರುವ ವಲಸಿಗ ಕಾರ್ಮಿಕರಿಗೆ ನಿರಾಳತೆಯನ್ನು ನೀಡುವ ಸಲುವಾಗಿ ನಿರ್ಧಾರವನ್ನು ಕೈಗೊಂಡಿದೆ.
19 ದಿನಗಳಲ್ಲಿ ಶ್ರಮಿಕ ವಿಶೇಷ ರೈಲುಗಳ ಮೂಲಕ ಸುಮಾರು 21 ಲಕ್ಷ ವಲಸಿಗ ಕಾರ್ಮಿಕರು ತಮ್ಮ ತವರನ್ನು ಸೇರಿದ್ದಾರೆ. ಮೇ 19 ರವರೆಗೆ ಸುಮಾರು 1,600 ಬಾರಿ ರೈಲುಗಳನ್ನು ವಲಸಿಗರಿಗಾಗಿ ಓಡಿಸಲಾಗಿದೆ.
ಯಾವುದೇ ವಲಸಿಗರು ಆತಂಕಕ್ಕೆ ಒಳಗಾಗಬಾರದು. ಅವರನ್ನು ಅವರ ತವರು ಸೇರಿಸುವ ನಿಟ್ಟಿನಲ್ಲಿ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭಾರತೀಯ ರೈಲ್ವೆಯು ಭರವಸೆಯನ್ನು ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.