ನವದೆಹಲಿ: ಮೌಂಟ್ ಎವರೆಸ್ಟ್ನ ಹಿಮಾವೃತ ತುತ್ತತುದಿ ನಿಜಕ್ಕೂ ಒಂದು ಅದ್ಭುತವಾದ ದೃಶ್ಯ. ಆದರೆ ಹಲವರಿಗೆ ಅದ್ಭುತವನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಗುವುದೇ ಇಲ್ಲ.
ಆದರೆ ಭಾರತದಲ್ಲಿ ಹಿಮಾಲಯವು ಕಣ್ಣಿಗೆ ಗೋಚರಿಸುವಂತಹ ಹಲವಾರು ಪ್ರದೇಶಗಳು ಇದ್ದವು, ಆದರೆ ವಿಪರೀತ ವಾಯುಮಾಲಿನ್ಯದ ಕಾರಣದಿಂದಾಗಿ ಹಲವಾರು ವರ್ಷಗಳಿಂದ ಬರಿಗಣ್ಣಿಗೆ ಹಿಮಾಲಯ ಗೋಚರಿಸುವುದೇ ನಿಂತುಹೋಗಿತ್ತು. ಹೀಗಾಗಿ ಹಿಮಾಲಯದ ಸುಂದರ ದೃಶ್ಯವನ್ನು ಕೇವಲ ಪ್ರವಾಸಿಗರು ಮತ್ತು ಸ್ಥಳೀಯರು ಮಾತ್ರ ಆಸ್ವಾದಿಸುತ್ತಿದ್ದರು.
ಇದೀಗ ದೇಶವ್ಯಾಪಿಯಾಗಿ ಕೊರೋನಾದ ಕಾರಣದಿಂದಾಗಿ ಲಾಕ್ಡೌನ್ ಅನ್ನು ವಿಧಿಸಲಾಗಿದೆ. ವಾಯು ಮಾಲಿನ್ಯದ ಪ್ರಮಾಣ ಗಣನೀಯವಾಗಿ ತಗ್ಗಿದೆ. ಇದೀಗ ಹಲವು ಭಾಗಗಳಲ್ಲಿ ಮತ್ತೆ ಹಿಮಾಲಯ ಗೋಚರಿಸಲು ಆರಂಭಿಸಿದೆ.
ಏಪ್ರಿಲ್ ಮೊದಲ ವಾರದಲ್ಲಿ ಜಲಂಧರ್ ಹಿಮಾಚಲ ಪ್ರದೇಶದ ದೌಲಧರ್ ಹಿಮ ಪರ್ವತವನ್ನು ಕಣ್ತುಂಬಿಕೊಂಡು ಆಶ್ಚರ್ಯಚಕಿತವಾಗಿತ್ತು. ಕೆಲ ವಾರಗಳ ಬಳಿಕ ಹಿಮಾವೃತ ಹಿಮಾಲಯವು ಉತ್ತರಪ್ರದೇಶದ ಶಹರನ್ ಪುರಕ್ಕೆ ಗೋಚರಿಸಿತ್ತು.
ಇದೀಗ ನೆರೆಯ ಕಠ್ಮಂಡು ಕಣಿವೆಗೆ ಹಲವು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಮೌಂಟ್ ಎವರೆಸ್ಟ್ ಗೋಚರಿಸುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿರುವ ಫೋಟೋ 200 ಕಿಲೋಮೀಟರ್ ದೂರದಲ್ಲಿರುವ ಕಠ್ಮಂಡು ಕಣಿವೆಗೆ ಹಿಮಾಲಯ ಗೋಚರಿಸುವ ಅದ್ಭುತವಾದ ನೋಟವನ್ನು ನೀಡುತ್ತದೆ.
ಛಾಯಾಗ್ರಾಹಕ ಅಬುಶಾನ್ ಗೌತಮ್ ಅವರು ಈ ಫೋಟೋವನ್ನು ಸೆರೆಹಿಡಿದಿದ್ದಾರೆ. “ಕೋವಿಡ್-19 ಲಾಕ್ಡೌನ್ನಿಂದಾಗಿ ವಾಹನ ಹೊರಸೂಸುವಿಕೆಯ ಕಡಿತವು ನೇಪಾಳ ಮತ್ತು ಉತ್ತರ ಭಾರತದ ವಾಯುಮಾಲಿನ್ಯವನ್ನು ಶುದ್ಧಗೊಳಿಸಿದೆ. ಹೀಗಾಗಿ ಹಲವು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ, 200 ಕಿಲೋಮೀಟರ್ ದೂರದಲ್ಲಿರುವ ಮೌಂಟ್ ಎವರೆಸ್ಟ್ ಕಠ್ಮಂಡು ಕಣಿವೆಗೆ ಗೋಚರಿಸುತ್ತಿದೆ” ಎಂದು ನೇಪಾಲಿ ಟೈಮ್ಸ್ ಟ್ವೀಟ್ ಮಾಡಿದೆ.
The #COVID19Lockdown has cleaned the air over #Nepal and northern #India. So much so that for the first time in many years, Mt #Everest can be seen again from #Kathmandu Valley even though it is 200km away.
More breathtaking images by @AbhushanGautam: https://t.co/IqFZw39haC pic.twitter.com/ErTJa7kPJo
— Nepali Times (@NepaliTimes) May 15, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.