ರಿಯಾದ್: ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ನಿಯಂತ್ರಿಸುವ ಸಲುವಾಗಿ ಸೌದಿ ಅರೇಬಿಯಾ ಈ ತಿಂಗಳ ಕೊನೆಯಲ್ಲಿ ಬರುವ ಈದ್-ಅಲ್-ಫಿತರ್ನ ಐದು ದಿನಗಳ ರಜಾದಿನದ ಸಂದರ್ಭದಲ್ಲಿ ರಾಷ್ಟ್ರವ್ಯಾಪಿಯಾಗಿ 24 ಗಂಟೆಗಳ ಕರ್ಫ್ಯೂ ವಿಧಿಸಲಿದೆ. ಈ ಬಗ್ಗೆ ಅಲ್ಲಿನ ಆಂತರಿಕ ಸಚಿವಾಲಯ ಮಂಗಳವಾರ ಘೋಷಣೆ ಮಾಡಿದೆ.
ರಂಜಾನ್ ಮಾಸದ ಕೊನೆಯ ದಿನಗಳಾದ ಮೇ 23 ರಿಂದ ಮೇ 27 ರ ವರೆಗೆ ಕರ್ಫ್ಯೂ ಅನ್ನು ವಿಧಿಸಲು ಸೌದಿ ಅರೇಬಿಯಾ ನಿರ್ಧರಿಸಿದೆ.
ಅಲ್ಲಿಯವರೆಗೆ, ಈಗಿನಂತೆ ವಾಣಿಜ್ಯ ಮತ್ತು ಉದ್ಯಮ ಸಂಸ್ಥೆಗಳು ತೆರೆದಿರಲಿದೆ. ಅಲ್ಲಿನ ಸ್ಥಳೀಯ ಕಾಲಮಾನ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆ ತನಕ ಜನರು ಮುಕ್ತವಾಗಿ ಓಡಾಡಬಹುದು. ಆದರೆ ಮೆಕ್ಕಾದಲ್ಲಿ ಸಂಪೂರ್ಣ ಕರ್ಫ್ಯೂ ಇರಲಿದೆ ಎಂದು ಅಲ್ಲಿನ ಸರ್ಕಾರಿ ನ್ಯೂಸ್ ಏಜೆನ್ಸಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸೌದಿ ಅರೇಬಿಯಾವು ಈ ಹಿಂದೆ 24ಗಂಟೆಗಳ ಕರ್ಫ್ಯೂ ಅನ್ನು ವಿವಿಧ ನಗರಗಳಲ್ಲಿ ವಿಧಿಸಿತ್ತು ಆದರೆ ರಂಜಾನ್ ಮಾಸದ ಹಿನ್ನಲೆಯಲ್ಲಿ ಅದನ್ನು ತೆರವುಗೊಳಿಸಿತು. ಆದರೆ ಕೊರೋನಾವೈರಸ್ ಸಾಂಕ್ರಾಮಿಕ ರೋಗಗಳ ಪ್ರಕರಣಗಳು ಹೆಚ್ಚಿರುವ ಪ್ರದೇಶಗಳಲ್ಲಿ ಸಂಪೂರ್ಣ ಐಸೋಲೇಶನ್ ಜಾರಿಯಲ್ಲಿದೆ.
ಸೌದಿ ಅರೇಬಿಯಾದಲ್ಲಿ ಇದುವರೆಗೆ 42,925 ಕೋವಿಡ್ -19 ಪ್ರಕರಣಗಳು ದಾಖಲಾಗಿವೆ, 264 ಸಾವುಗಳು ಸಂಭವಿಸಿವೆ.
ಇದು ಗಲ್ಫ್ ಕಾರ್ಪೊರೇಷನ್ ಕೌನ್ಸಿಲ್ನ ಆರು ಸದಸ್ಯ ರಾಷ್ಟ್ರಗಳಲ್ಲೇ ಅತೀ ಹೆಚ್ಚು, ಈ ಆರು ರಾಷ್ಟ್ರಗಳು ಒಟ್ಟಾಗಿ 107,000 ಕೊರೋನಾ ಪ್ರಕರಣಗಳನ್ನು ದಾಖಲಿಸಿವೆ ಮತ್ತು 582 ಸಾವುಗಳು ಸಂಭವಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.