ಕೋಲಾರ: ಕರ್ನಾಟಕದ ಕೋಲಾರ ಪೊಲೀಸರು ತಬ್ಲಿಘಿ ಜಮಾತಿಗಳ ಮತಾಂತರದ ದಂಧೆಯನ್ನು ಬಯಲು ಮಾಡಿದ್ದಾರೆ. ಈ ದಂಧೆಯ ಭಾಗವಾಗಿ ಹಿಂದೂ ಯುವಕನೋರ್ವ ಇಸ್ಲಾಮಿಗೆ ಮತಾಂತರವಾಗಿದ್ದಾನೆ ಮತ್ತು ತಬ್ಲಿಘಿ ಗುಂಪಿನ ನಾಯಕ ಸೈಯದ್ ಉಸ್ಮಾನ್ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ. ಈತ ಗುರುತನ್ನು ನಕಲಿ ಮಾಡಿದ ಮತ್ತು ಬೆಂಗಳೂರಿನ ಮೂವರು ತಬ್ಲೀಘಿಗಳ ವಿಳಾಸ ಬದಲಾಯಿಸಿದ ಆರೋಪವನ್ನು ಹೊತ್ತಿದ್ದಾನೆ ಎಂದು ವರದಿಯಾಗಿದೆ.
ಗುಜರಾತಿನ ಸೂರತ್ನಿಂದ ವಾಪಾಸ್ಸಾದ 44 ಮಂದಿ ಮುಸ್ಲಿಮರಲ್ಲಿ ಕೊರೋನವೈರಸ್ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಈ ಮತಾಂತರದ ದಂಧೆ ಬಹಿರಂಗವಾಗಿದೆ. ಮೇ ಮೂರರಂದು ಲಾಕ್ ಡೌನ್ ಸಡಿಲಿಕೆಯಾದ ಸಂದರ್ಭದಲ್ಲಿ ಈ ಗುಂಪು ಸೂರತ್ನಿಂದ ವಾಪಸ್ಸಾಗಿದೆ. ಅಲ್ಲಿಂದ ಬಳಿಕ ಅವರನ್ನು ಕೋಲಾರದಲ್ಲಿ ಇಡಲಾಗಿತ್ತು. ಕೋಲಾರ ಜಿಲ್ಲಾಡಳಿತವು ಇಲ್ಲಿಗೆ ಪ್ರವೇಶಿಸಿದ ಪ್ರತಿಯೊಬ್ಬರನ್ನು ಪರೀಕ್ಷೆಗೆ ಒಳಪಡಿಸುವ ಕಾರ್ಯವನ್ನು ಮಾಡಿದೆ. ಈ ಪರೀಕ್ಷೆ ಸಂದರ್ಭದಲ್ಲಿ 44 ಮಂದಿಯಲ್ಲಿ ಕೆಲವರಿಗೆ ಕೊರೋನಾ ಇರುವುದು ಪತ್ತೆಯಾಗಿದೆ. ಇದೇ ಸಂದರ್ಭದಲ್ಲಿ ಮತಾಂತರದ ದಂಧೆ ಕೂಡ ಬಹಿರಂಗವಾಗಿದೆ.
ಗುಂಪಿನಲ್ಲಿ ಸಾಧಿಕ್ ಎಂಬಾತನ ದಾಖಲೆಯನ್ನು ಪತ್ತೆ ಹಚ್ಚಿದಾಗ ಆತ ನೀಡಿದ ಮಾಹಿತಿ ಸುಳ್ಳು ಎಂಬುದು ಪತ್ತೆಯಾಗಿದೆ. ಜಿಲ್ಲಾಡಳಿತವು ಆತನ ಬಗ್ಗೆ ಇನ್ನಷ್ಟು ತನಿಖೆ ನಡೆಸಿದಾಗ ಆತ ಹಿಂದೂ ಎಂಬುದು ಮತ್ತು ಆತನ ಹೆಸರು ಕಾರ್ತಿಕ್ ಮುನಿಂದ್ರ ಎಂಬುದು, ಆತ ತಮಿಳುನಾಡು ಮೂಲದವನು ಎಂಬುದು ಪತ್ತೆಯಾಗಿದೆ. ತಬ್ಲೀಘಿಗಳು ಈತನನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿದ್ದಾರೆ ಮತ್ತು ಆತನ ಹೆಸರನ್ನು ಸಾಧಿಕ್ ಎಂದು ಬದಲಾಯಿಸಿದ್ದಾರೆ. ಈತನನ್ನು ಸೂರತ್ಗೆ ಕರೆದುಕೊಂಡು ಹೋಗಿ ಸಮ್ಮೇಳನದಲ್ಲಿ ಭಾಗಿಯಾಗುವಂತೆ ಮಾಡಿದ್ದಾರೆ.
ತಬ್ಲೀಘಿಗಳ ಗುಂಪನ್ನು ಪ್ರಸ್ತುತ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮುರಾರ್ಜಿ ರೆಸಿಡೆನ್ಷಿಯಲ್ ಸ್ಕೂಲ್ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ತನಿಖೆಯ ಸಂದರ್ಭದಲ್ಲಿ ಈ ಗುಂಪಿನ ಹಲವರ ಗುರುತುಗಳು ಮತ್ತು ವಿಳಾಸಗಳು ತಪ್ಪು ಎಂಬ ವಿಷಯ ಬಹಿರಂಗವಾಗಿದೆ. ಗುಂಪಿನ ಸದಸ್ಯರಾಗಿದ್ದ ಮಹಮ್ಮದ್ ಹಂಝ, ಸೈಯದ್ ರಿಜ್ವಾನ್, ಸಮೀರ್ ಎಂಬುವವರು ಬೆಂಗಳೂರಿನ ಪಾದರಾಯನಪುರದವರು. ಈ ಪ್ರದೇಶ ಕೊರೋನಾ ಹಾಟ್ ಸ್ಪಾಟ್ ಆಗಿದ್ದು, ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಕ್ಕೂ ಕುಖ್ಯಾತಿ ಪಡೆದುಕೊಂಡಿದೆ. ಆದರೆ ಇವರುಗಳ ವಿಳಾಸವನ್ನು ಬದಲಾಯಿಸಿ ಕೋಲಾರದವರು ಎಂಬ ತಪ್ಪು ಮಾಹಿತಿಯನ್ನು ನೀಡಲಾಗಿತ್ತು.
ಇದೀಗ ಕೋಲಾರ ಪೊಲೀಸರು ಮತಾಂತರ ಮತ್ತು ಗುರುತು ನಕಲಿಗೆ ಸಂಬಂಧಿಸಿದಂತೆ ಸೈಯದ್ ಉಸ್ಮಾನ್ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.
ಮೇ 2ರಂದು ಕೋಲಾರ ಪೊಲೀಸರು ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿದ 11 ಮಂದಿಯ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದರು. ವರದಿ ಪ್ರಕಾರ ಈ 11 ಮಂದಿ ನಗರದ ಮುನ್ಸಿಪಲ್ ಹಾಸ್ಪಿಟಲ್ ರೋಡ್ ಸಮೀಪದ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಡೆಸಿದ ಆರೋಪವನ್ನು ಹೊತ್ತಿದ್ದಾರೆ.
Source : organiser.org
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.