ಬೆಂಗಳೂರು: ವೈದ್ಯರು ಸಾಂಪ್ರದಾಯಿಕವಾಗಿ ತೊಡುವ ಬಿಳಿ ಬಣ್ಣದ ಉದ್ದ ತೋಳಿನ ಬಿಳಿ ಬಣ್ಣ ಶರ್ಟ್ ಆರೋಗ್ಯದ ದೃಷ್ಟಿಯಿಂದ ಉತ್ತಮವಾದುದಲ್ಲ ಎಂಬುದನ್ನು ನೂತನ ಅಧ್ಯನವೊಂದು ತಿಳಿಸಿದೆ.
ವೈದ್ಯರು, ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಧರಿಸುವ ಬಿಳಿ ಕೋಟ್ನಿಂದ ಸೋಂಕುಗಳು ಹರಡುವ ಸಾಧ್ಯತೆ ಹೆಚ್ಚಿದೆ, ಹೀಗಾಗೀ ಈ ಬಿಳಿ ಕೋಟ್ಗೆ ನಿಷೇಧ ಹೇರುವುದೇ ಸೂಕ್ತ ಎಂದು ಬೆಂಗಳೂರಿನ ಯೆನಪೋಯ ಮೆಡಿಕಲ್ ಕಾಲೇಜಿನ ಎಡ್ಮಂಡ್ ಫೆರ್ನಾಂಡೀಸ್ ತಿಳಿಸಿದ್ದಾರೆ.
ಅಲ್ಲದೇ ಆಸ್ಪತ್ರೆಯಲ್ಲಿ ಉತ್ಪತ್ತಿಯಾಗುವ ಸೋಂಕುಗಳ ಬಗ್ಗೆ ಪರಿಶೀಲನೆ ನಡೆಸಲು ಮತ್ತು ಸ್ಪಂಧಿಸಲು ಎಲ್ಲಾ ಆಸ್ಪತ್ರೆಗಳೂ ಒಂದು ಸಮಿತಿಯನ್ನು ಅವಶ್ಯವಾಗಿ ರಚಿಸಬೇಕು ಎಂಬ ಸಲಹೆಯನ್ನೂ ಅವರು ನೀಡಿದ್ದಾರೆ.
ಬಿಳಿ ಕೋಟ್ಗಳು ಸಂಭಾವ್ಯ ಮಲಿನತೆಗೆ ಆಶ್ರಯ ನೀಡಬಹುದು, ಆಸ್ಪತ್ರೆಯಲ್ಲಿ ಉತ್ಪತ್ತಿಯಾಗಬಹುದಾದಂತಹ ಇನ್ಫೆಕ್ಷನ್ಗಳನ್ನು ಸುಲಭವಾಗಿ ಹರಡಿಸಬಹುದು. ವೈದ್ಯರು, ವಿದ್ಯಾರ್ಥಿಗಳು ಕೋಟನ್ನು ಬದಲಾಯಿಸದೆ ಹೊರಗಡೆ ಸುತ್ತಾಡಿ ಮತ್ತೆ ಆಸ್ಪತ್ರೆಗೂ ಬರುತ್ತಾರೆ. ಇದರಿಂದ ಅಪಾಯಗಳು ಹೆಚ್ಚಿವೆ ಎಂದು ಫೆರ್ನಾಂಡಿಸ್ ಅಭಿಪ್ರಾಯಪಟ್ಟಿದ್ದಾರೆ.
19ನೇ ಶತಮಾನದಿಂದಲು ವೈದ್ಯರುಗಳು ಬಿಳಿ ಕೋಟನ್ನು ಸಾಂಪ್ರದಾಯಿಕವಾಗಿ ತೊಡುತ್ತಾ ಬರುತ್ತಿದ್ದಾರೆ. ಆ ಸಂಪ್ರದಾಯವನ್ನು ಮುರಿಯುವುದು ಅಷ್ಟು ಸುಲಭದ ಮಾತಲ್ಲ ಎಂಬುದು ಕೂಡ ಅಷ್ಟೇ ಸತ್ಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.