ಮೀರತ್: 3 ದಶಕಗಳ ಬಳಿಕ ಇದೇ ಮೊದಲ ಬಾರಿಗೆ ಹಿಮದಿಂದ ಆವೃತವಾದ ಗಂಗೋತ್ರಿಯು ಶಹರಣ್ಪುರಕ್ಕೆ ಕಾಣಿಸುತ್ತಿದೆ. ಉತ್ತರಪ್ರದೇಶದ ವಾಯು ಗುಣಮಟ್ಟ ಸೂಚ್ಯಂಕವು ಸುಧಾರಣೆಗೊಂಡ ಹಿನ್ನೆಲೆಯಲ್ಲಿ ಹಿಮಾಲಯದ ಮನಮೋಹಕ ಸೊಬಗು ಸ್ಪಷ್ಟವಾಗಿ ಗೋಚರಿಸಲು ಆರಂಭಿಸಿದೆ.
ಶಹರಣ್ಪುರದ ಹಿರಿಯ ನಾಗರಿಕರು ಇಂದಿಗೂ ಹಿಮಾಲಯ ತಮ್ಮ ಕಣ್ಣಿಗೆ ಮುಸುಕಾದ ವಾತಾವರಣದಲ್ಲಿ ಕಾಣಿಸಿಕೊಳ್ಳುತ್ತಿದ್ದ ಸನ್ನಿವೇಶವನ್ನು ಕಿರಿಯ ತಲೆಮಾರಿಗೆ ವಿವರಿಸುತ್ತಿದ್ದರು. ಆದರೆ ಇದೀಗ ಮತ್ತೆ ಆ ಕಾಲ ಮರಳಿ ಬಂದಿದೆ. ಶಹರಣ್ಪುರದ ಕಿರಿಯರಿಗೂ ಹಿಮಾಲಯದ ದರ್ಶನವಾಗುತ್ತಿದೆ.
ಹಿಮಾಲಯದ ದರ್ಶನವನ್ನು ಕಣ್ತುಂಬಿಕೊಂಡ ನಿವಾಸಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹರ್ಷವನ್ನು ವ್ಯಕ್ತಪಡಿಸುತ್ತಿದ್ದಾರೆ. ಫೋಟೋಗಳನ್ನು ತೆಗೆದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಆದಾಯ ತೆರಿಗೆ ಇಲಾಖೆಯ ಇನ್ಸ್ಪೆಕ್ಟರ್ ಆಗಿರುವ ದೃಶ್ಯಂ ಕುಮಾರ್ ಅವರು ತಮ್ಮ ಟೆರೇಸ್ ಮೇಲಿಂದ ಹಿಮಾಲಯದ ಫೋಟೋವನ್ನು ಕ್ಲಿಕ್ಕಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಭಾರಿ ವೈರಲ್ ಆಗಿದೆ. ಇಂಡಿಯನ್ ಫೋರೆಸ್ಟ್ ಸರ್ವಿಸ್ ಅಧಿಕಾರಿ ಮತ್ತು ಉತ್ತರಪ್ರದೇಶದ ಜೀವ ವೈವಿಧ್ಯ ಮಂಡಳಿಯ ಕಾರ್ಯದರ್ಶಿ ರಮೇಶ್ ಪಾಂಡೆ ಅವರು ಕೂಡ ಈ ಫೋಟೋವನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
“ಬಂದರ್ಪಂಚ್ ಮತ್ತು ಗಂಗೋತ್ರಿಯ ಹಿಮಾಲಯ ಗೋಚರಿಸುತ್ತಿದೆ. ಶಹರಣ್ಪುರದಲ್ಲಿ ಈ ದೃಶ್ಯವನ್ನು ನಾನೆಂದಿಗೂ ನೋಡಿರಲಿಲ್ಲ, ಹೀಗಾಗಿ ಫೋಟೋವನ್ನು ಹಂಚಿಕೊಂಡಿದ್ದೇನೆ” ಎಂದಿದ್ದಾರೆ.
Snow capped peaks of Himalaya are now visible from Saharnpur !
Lockdown and intermittent rains have significantly improved the AQI. These pictures were taken by Dushyant, an Income Tax inspector, from his house at Vasant Vihar colony on Monday evening. #lockdowneffect #nature pic.twitter.com/1vFfJqr05J— Ramesh Pandey IFS (@rameshpandeyifs) April 29, 2020
ಅಧಿಕಾರಿಗಳ ಪ್ರಕಾರ ಈ ಹಿಮಾಲಯ ಮತ್ತು ಶಹರಣ್ಪುರದ ನಡುವಿನ ವಾಯು ದೂರ 200 ಕಿಮೀ ಆಗಿದೆ. “ಇದು ನಿಜಕ್ಕೂ ಅಪರೂಪದ ದೃಶ್ಯ. ಹಿಂದಿನ ದಶಕಗಳಲ್ಲಿ ಈ ಹಿಮಾವೃತ ದೃಶ್ಯ ಕಾಣ ಸಿಗುತ್ತಿರಲಿಲ್ಲ” ಎಂದು ಶಹರಣ್ಪುರದ ಡಿವಿಜನಲ್ ಕಮಿಷನರ್ ಸಂಜಯ್ ಕುಮಾರ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.