ನವದೆಹಲಿ: ಕೋವಿಡ್-19 ವಿರುದ್ಧ ಹೋರಾಟದಲ್ಲಿ ಮಲೇರಿಯಾ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್ ಹೆಚ್ಚು ಪರಿಣಾಮ ಬೀರುತ್ತದೆ. ಇದರ ಬಳಕೆಯಿಂದ ರೋಗಿಗಳು ಬದುಕುಳಿಯುವ ಸಾಧ್ಯತೆಗಳು ಹೆಚ್ಚಾಗಿದೆ ಎಂದು ಯುಎಸ್ನ ವೈದ್ಯರ ಗುಂಪೊಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸೋಂಕಿತರ ಚಿಕಿತ್ಸೆಗೆ ಈ ಔಷಧವನ್ನು ಹೆಚ್ಚು ವ್ಯಾಪಕವಾಗಿ ಬಳಸುವಂತೆಯೂ ಈ ವೈದ್ಯರ ತಂಡ ಸೂಚಿಸಿದೆ. ಇದರ ಬಳಕೆಯಿಂದ 90% ದಷ್ಟು ರೋಗಿಗಳು ಚೇತರಿಕೆ ಕಾಣುತ್ತಾರೆ ಎಂಬ ಮಾಹಿತಿಯನ್ನು ಇವರು ತಿಳಿಸಿದ್ದಾರೆ. ಮಲೇರಿಯಾ ಔಷಧವನ್ನು ಭಾರತದಲ್ಲಿ ಕೊರೋನಾ ಸೋಂಕಿತರಿಗೆ ಮತ್ತು ಅವರ ಶುಶ್ರೂಷೆಯಲ್ಲಿ ತೊಡಗಿದವರಿಗೆ ನೀಡಲಾಗುತ್ತದೆ. ಇದರಿಂದ ರೋಗವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲಾಗಿದೆ. ಹೈಡ್ರಾಕ್ಸಿಕ್ಲೋರೋಕ್ವಿನ್ನ ಪರಿಣಾಮದ ಬಗ್ಗೆ ಮಾಹಿತಿ ಪಡೆದಿದ್ದ ಟ್ರಂಪ್ ಸಹ ಈ ಔಷಧವನ್ನು ‘ಗೇಮ್ ಚೇಂಜರ್’ ಎಂದು ಕರೆಯುವ ಮೂಲಕ, ಅದರ ಬಳಕೆಯಿಂದ ರೋಗ ನಿಯಂತ್ರಣದಲ್ಲಿಡಬಹುದು ಎಂಬುದನ್ನು ಒಪ್ಪಿಕೊಂಡಿದ್ದರು.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಅಸೋಸಿಯೇಷನ್ ಆಫ್ ಅಮೆರಿಕನ್ ಫಿಸಿಷಿಯನ್ಸ್ ಹಾಗೂ ಸರ್ಜನ್ಸ್ ಹೇಳಿದೆ. ಇತರ ಆಂಟಿ ಬಯೋಟಿಕ್ಗಳಿಗಿಂತ ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಕೆ ಮಾಡಿರುವ ರೋಗಿಗಳಲ್ಲಿ ಹೆಚ್ಚಿನ ಸಕಾರಾತ್ಮಕ ಪರಿಣಾಮ ಕಂಡು ಬಂದಿರುವುದಾಗಿಯೂ ಈ ಅಸೋಸಿಯೇಷನ್ ಗವರ್ನರ್ಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೆ ಲಭ್ಯವಿರುವ ಅಧಿಕೃತ ದತ್ತಾಂಶಗಳ ಆಧಾರದ ಮೇಲೆ ಇದರ ಬಳಕೆಯನ್ನು ಹೆಚ್ಚಿಸುವಂತೆ ಸೂಚಿಸಿದೆ. ಇದಕ್ಕೆ ಸಾಕ್ಷಿಯಾಗಿ ಪೀರ್ ರಿವ್ಯೂಡ್ ಎಪ್ರಿಲ್ 20 ರ ವರೆಗೆ ನಡೆಸಿದ ಅಧ್ಯಯನ ವರದಿಗಳೇ ಸಾಕ್ಷಿ ನೀಡುತ್ತದೆ ಎಂದು ಈ ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ. ಆದ್ದರಿಂದ ಕೊರೋನಾ ಸೋಂಕಿನ ವಿರುದ್ದ ಈ ಮಲೇರಿಯಾ ಔಷಧವನ್ನು ಹೆಚ್ಚು ಬಳಕೆ ಮಾಡುವಂತೆಯೂ ಅವರು ಸೂಚಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.