ನವದೆಹಲಿ: ವಿದೇಶಿ ಸೆಟ್ಲೈಟ್ಗಳನ್ನು ಉಡಾವಣೆಗೊಳಿಸುತ್ತಿರುವ ಭಾರತ ಅದರಿಂದಾಗಿ ಇದುವರೆಗೆ ಒಟ್ಟು 100 ಮಿಲಿಯನ್ ಅಮೆರಿಕನ್ ಡಾಲರ್ಗಳನ್ನು ಸಂಪಾದಿಸಿದೆ. ಇದರಿಂದಾಗಿ ಭಾರತದ ವಾಣಿಜ್ಯ ಸ್ಪೇಸ್ ಮಿಶನ್ ಭಾರೀ ಗಳಿಕೆ ಕಂಡಿದೆ.
ಇದುವರೆಗೆ ಒಟ್ಟು 45 ವಿದೇಶಿ ಸೆಟ್ಲೈಟ್ಗಳನ್ನು ಉಡಾವಣೆಗೊಳಿಸಲಾಗಿದ್ದು, ಇನ್ನು 28 ಸೆಟ್ಲೈಟ್ಗಳು ಉಡಾವಣೆಗೊಳ್ಳುವ ಹಂತದಲ್ಲಿದೆ. 2015-2017ರ ನಡುವೆ ಈ ಸೆಟ್ಲೈಟ್ಗಳು ಉಡಾವಣೆಯಾಗಲಿದೆ.
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಅವರು ಬುಧವಾರ ಇಸ್ರೋದ ವಾಣಿಜ್ಯ ಅಂಗ ಆಟ್ರಿಂಕ್ಸ್ ಗಳಿಸಿದ ಸಂಪಾದನೆಯ ಬಗ್ಗೆ ಲೋಕಸಭೆಗೆ ಮಾಹಿತಿ ನೀಡಿದರು. ಅಲ್ಲದೇ ಅಲ್ಜೇರಿಯಾ, ಕೆನಡಾ, ಜರ್ಮನಿ, ಇಂಡೋನೇಷ್ಯಾ, ಸಿಂಗಾಪುರ ಮತ್ತು ಅಮೆರಿಕಾ ದೇಶಗಳ ಒಟ್ಟು 24 ಸೆಟ್ಲೈಟ್ಗಳನ್ನು 2015-17ರ ನಡುವೆ ಉಡಾವಣೆಗೊಳಿಸುವ ಒಪ್ಪಂದವಾಗಿದೆ ಎಂದು ಅವರು ತಿಳಿಸಿದರು.
ಇದುವರೆಗೆ ಒಟ್ಟು 19 ದೇಶಗಳ 45 ಸೆಟ್ಲೈಟ್ಗಳನ್ನು ಉಡಾವಣೆಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.